More

    ಕಾಂಗ್ರೆಸ್ ಅಧಿಕಾರ ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ

    ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹತಾಶರಾಗಿ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ವ್ಯಂಗ್ಯವಾಡಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮುಖಂಡರ ವರ್ತನೆಗಳಿಂದಲೇ ಜನ ಅವರನ್ನು ತಿರಸ್ಕರಿಸಿ ಕಾಂಗ್ರೆಸ್‌ಗೆ ಅಽಕಾರ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡು ಇನ್ನು ೩-೪ ತಿಂಗಳುಗಳು ಮಾತ್ರ ಆಗಿದೆ, ಇನ್ನು ಮುಂದೆಯಿದೆ ಬಿಜೆಪಿಗೆ ಹಬ್ಬ ಎಂದರು.
    ಬಿಜೆಪಿ ಆಡಳಿತವಿದ್ದಾಗ ಚೆನ್ನಾಗಿ ತಿಂದು ಪಳಗಿದ್ದರು. ಅಽಕಾರ ಹೋದ ಮೇಲೆ ಹೇಗೆ ಆಗುತ್ತಾರೆ ಎಂಬುದಕ್ಕೆ ಬಿಜೆಪಿ ಉದಾಹರಣೆಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿದ್ದ ಕ್ಷೇತ್ರಗಳಿಗೆ ಬಿಡಿಗಾಸು ಸಿಗಲಿಲ್ಲ. ರಸ್ತೆ ಗುಂಡಿ ಮುಚ್ಚಲು ಅನುದಾನ ನೀಡಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾದರು. ನಾವು ಗ್ಯಾರಂಟಿ ನೀಡಿದ್ದೇವೆ. ಅಭಿವೃದ್ಧಿಗೂ ಅವಕಾಶ ನೀಡುವಂತೆ ಕೋರಿದ್ದು, ಮುಖ್ಯಮಂತ್ರಿಗಳಿAದ ಭರವಸೆ ಸಿಕ್ಕಿದೆ ಎಂದು ಹೇಳಿದರು.
    ಜನತಾ ದರ್ಶನದಲ್ಲಿ ಸಂಸದರು ನಡೆದುಕೊಂಡಿದ್ದನ್ನು ಇಡೀ ದೇಶ ನೋಡಿದೆ. ಈ ಸಂಸದಗೆ ಎಲ್ಲಿ, ಹೇಗೆ ಮಾತನಾಡಬೇಕೆಂಬುದು ಗೊತ್ತಿಲ್ಲ. ಹಿಂದಿನ ಗುಂಗಲ್ಲೇ ಇದ್ದಾರೆ. ಭೂಗಳ್ಳ ಎಂಬ ಪದ ಬಳಸಿದ್ದಾರೆ. ಭೂಗಳ್ಳ ಎಂದು ಯಾವುದಾದರೂ ನ್ಯಾಯಾಲಯ ತೀರ್ಪು ನೀಡಿದೆಯೇ ಎಂದು ಪ್ರಶ್ನಿಸಿದರು.
    ಮುನಿಸ್ವಾಮಿಗೆ ಟಿಕೆಟ್ ಕೊಡಲಿ ಎಂದು ಬೇಡಿಕೊಳ್ಳುವೆ:
    ಬಿಜೆಪಿ ಸರ್ಕಾರದಲ್ಲಿ ಏಕೆ ತನಿಖೆ ನಡೆಸಲಿಲ್ಲ, ಪ್ರಕರಣ ದಾಖಲಿಸಲಿಲ್ಲ. ಇಂಥವರಿಂದ ನಮಗೂ ಜನರ ಮುಂದೆ ಬೇಸರವಾಗುತ್ತಿದೆ. ಯಾವುದೇ ಕಾರಣಕ್ಕೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲ. ಕಾಂಗ್ರೆಸ್ ೨೦ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ. ಕೋಲಾರದ ಜನರಿಗೆ ಸಾಕಾಗಿ ಹೋಗಿದೆ. ಈ ಸಂಸದರು ಬಿಜೆಪಿಗೇ ಬೇಡವಾಗಿದ್ದಾರೆ. ನಾವು ಮಾತ್ರ ಅವರಿಗೇ ಟಿಕೆಟ್ ಕೊಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ ಎಂದರು.
    ಸರ್ಕಾರ ಬಂದ ಮೇಲೆ ಬಿಜೆಪಿ ಸರ್ಕಾರದಲ್ಲಿದ್ದ ಅಽಕಾರಿಗಳನ್ನು ಬದಲಾವಣೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಜಾತಿ ಇಲ್ಲ. ಶಾಸಕ ಶಾಮನೂರು ಶಿವಶಂಕರಪ್ಪ ಯಾವ ಲೆಕ್ಕಾಚಾರದಲ್ಲಿ ಹೇಳಿದ್ದರೋ ಗೊತ್ತಿಲ್ಲ. ಸಿದ್ದರಾಮಯ್ಯ ಜಾತಿ ಮೇಲೆ ಅಽಕಾರ ಮಾಡಲ್ಲ. ನಮಗೆ ಜನಪರ ಆಡಳಿತ ನೀಡುವ ಅಽಕಾರಿ ಇದ್ದರೆ ಸಾಕು. ಬಿಜೆಪಿಯದ್ದು ಜಾತಿ ರಾಜಕಾರಣ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts