More

    ಪರೇಶ್​ ಮೆಸ್ತಾ ವಿಚಾರದಲ್ಲಿ ಡಿಕೆಶಿ ಮತ್ತು ಸಿದ್ಧರಾಮಯ್ಯಗೆ 3 ಪ್ರಶ್ನೆ ಹಾಕಿದ ಬಿಜೆಪಿ…

    ಉತ್ತರಕನ್ನಡ: ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ರಾಜ್ಯದ ಅನೇಕ ಕಡೆಗಳಲ್ಲಿ ರಾಜಕೀಯ ಪಕ್ಷಗಳು ಸಮಾವೇಶಗಳನ್ನು ನಡೆಸುತ್ತಿದ್ದೆ. ಇದನ್ನು ಜನರನ್ನು ತಲುಪಲು ಮತ್ತು ವಿರೋಧಿ ಬಣಕ್ಕೆ ಪ್ರಶ್ನೆಗಳನ್ನು ಎಸೆಯಲು ಪಕ್ಷಗಳು ಬಳಸಿಕೊಳ್ಳುತ್ತಿವೆ. ಅದೇ ರೀತಿ ಕುಮಟಾದಲ್ಲಿ ಕಾಂಗ್ರೆಸ್​ ಸಮಾವವೇಶವನ್ನು ನಡೆಸಿದ್ದು ಈ ಸಂದರ್ಭ ಬಿಜೆಪಿ ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ಮೂರು ಪ್ರಶ್ನೆಗಳನ್ನು ನೀಡಿದೆ.

    ಕಾರವಾರದಲ್ಲಿ ಬಿಜೆಪಿ ವಕ್ತಾರ ನಾಗರಾಜ ನಾಯಕ ಕಾಂಗ್ರೆಸ್​ನ ಕಾಲೆಳೆದಿದ್ದು ‘ಕಾಂಗ್ರೆಸ್ ಅನ್ನೋದು ಸತ್ತ ಕುದುರೆ. ಏಷ್ಟೆ ಓಡಿಸಲು ಪ್ರಯತ್ನಿಸಿದರೂ ಅದು ಹೋಗೋದಿಲ್ಲ’ ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್​ನ ಸಮಾವೇಶವನ್ನು ಜನರಲ್ಲಿ ಗೊಂದಲ ಮೂಡಿಸುವ ಸಭೆ ಎಂದು ಕರೆದಿದ್ದಾರೆ. ಈ ಸಂದರ್ಭ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​ಗೆ ಬಿಜೆಪಿ ಪ್ರಶ್ನೆ ಕೇಳಿದೆ.

    ಬಿಜೆಪಿ ಕೇಳಿದ ಪ್ರಶ್ನೆಗಳು ಹೀಗಿವೆ:

    ಪ್ರಶ್ನೆ ೧: 2017 ಡಿಸೆಂಬರ್ ಎಂಟರಂದು ಅಂದಿನ‌ ಜಿಲ್ಲಾಧಿಕಾರಿ ಸಹಜ ಸಾವೆಂದು ಹೇಳಿಕೆ ನೀಡಿದ್ದರು. ಪರೇಶ ಮೇಸ್ತಾ ಮೃತದೇಹದ ಪೋಸ್ಟ್ ಮಾರ್ಟಂ ಸ್ಥಳೀಯ ವೈದ್ಯರು ಅಥವಾ ನುರಿತ ಸರ್ಕಾರಿ ವೈದ್ಯರಿಂದ ಯಾಕೆ ಮಾಡಿಸಿಲ್ಲ?

    ಪ್ರಶ್ನೆ ೨: ತನಿಖೆಯಾಗದೇ ಜಿಲ್ಲಾಧಿಕಾರಿ ಸಹಜ ಸಾವೆಂದು ಹೇಳಿಕೆ ನೀಡಿದ್ದೇಕೆ.? ಕಾಟಾಚಾರಕ್ಕಾಗಿ ಸಿಬಿಐಗೆ ಪ್ರಕರಣವನ್ನು ವಿಳಂಬವಾಗಿ ವಹಿಸಿದ್ದೇಕೆ?

    ಪ್ರಶ್ನೆ ೩: ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಕಾಗದ ಪತ್ರಗಳನ್ನ‌ ನೀಡಲಾಗಿತ್ತು. ಮುದ್ದೆ ಮಾಲನ್ನು ಯಾಕೆ ನೀಡಲಿಲ್ಲ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts