More

    ಕಹಿ ಹಾಗಲ ಬೆಳೆದವನ ಮುಖದಲ್ಲೀಗ ಸಿಹಿ ನಗು

    ಬೆಳಗಾವಿ: ‘ಹಂಗಾಮಿನಲ್ಲಿ ದಿನಕ್ಕೆ ಅಂದಾಜು 35 ಸಾವಿರ ರೂ. ವರೆಗೂ ಆದಾಯ ಗಳಿಸುತ್ತೇನೆ. ಇದು ಯಾವುದೇ ಔದ್ಯೋಗಿಕ ಸಂಬಳಕ್ಕಿಂತ ಕಡಿಮೆ ಇಲ್ಲ, ಅಷ್ಟೇ ಅಲ್ಲದೆ, ನನ್ನ ಸ್ವಂತ ಭೂಮಿಯಲ್ಲಿ ಇಷ್ಟ ಬಂದ ಬೆಳೆ ಬೆಳೆಯಬಹುದು. ಅದಕ್ಕೆ ತಕ್ಕಂತೆ ಆದಾಯ ಗಳಿಸಬಹುದು. ಇಷ್ಟೆಲ್ಲ ಸಾಧ್ಯತೆ ಮತ್ತಾವ ಕ್ಷೇತ್ರದಲ್ಲಿದೆ ಹೇಳಿ?’ ಎನ್ನುತ್ತಾರೆ ಸತೀಶ್.
    ಇವರ ಪೂರ್ತಿ ಹೆಸರು ಸತೀಶ್ ಸಿದಗೌಡರ್. ವಯಸ್ಸು 38 ವರ್ಷ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಶಿರೂರ ಗ್ರಾಮದ ರೈತ. ಆ ಭಾಗದಲ್ಲಿ’ ಹಾಗಲಕಾಯಿ ತಜ್ಞ’ ಎಂದೇ ಜನಪ್ರಿಯರಾಗಿದ್ದಾರೆ.

    ಇದನ್ನೂ ಓದಿ: ಕರೊನಾ ವೈರಾಣು ಕುರಿತ ಅಧ್ಯಯನಕ್ಕಾಗಿ ಯುವಕರನ್ನೂ ನಾಚಿಸಿದ 103 ಅಜ್ಜ

    ಸ್ನಾತಕೋತ್ತರ ಪದವೀಧರರಾಗಿರುವ ಅವರು ಎಲ್ಲಿಯಾದರೂ ಸುಲಭವಾಗಿ ಔದ್ಯೋಗಿಕ ನೆಲೆ ಕಂಡುಕೊಳ್ಳಬಹುದಿತ್ತು. ಆದರೆ ಆತ ಅದನ್ನೆಲ್ಲ ನಿರಾಕರಿಸಿದರಾದರೂ ಜೀವನೋಪಾಯಕ್ಕಾಗಿ ಅದೂ ವಿಭಿನ್ನವಾಗಿ ಬೇರೆ ಏನನ್ನಾದರೂ ಮಾಡಲೇಕೆಂಬ ತುಡಿತ ಅವರನ್ನು ಈ ಮಟ್ಟಕ್ಕೇರಿಸಿದೆ. ಈಗ ಅವರ ಅದೃಷ್ಟ ಕುಲಾಯಿಸಿದ್ದು ಯಶಸ್ವಿ ಕೃಷಿಕ, ಮುಖ್ಯವಾಗಿ ‘ಹಾಗಲಕಾಯಿ’ ಕೃಷಿ ತಜ್ಞ ಎನಿಸಿಕೊಂಡಿದ್ದಾರೆ,
    ತಮ್ಮ ಐದು ಎಕರೆ ಕೃಷಿ ಭೂಮಿಯ ಪೈಕಿ 1.5 ಎಕರೆ ಜಮೀನಿನಲ್ಲಿ ಹಾಗಲಕಾಯಿ ಬೆಳೆಯುತ್ತಿದ್ದಾರೆ.

    ಇದನ್ನೂ ಓದಿ: ಶಬರಿಮಲೆ ದೇಗುಲ ಪ್ರವೇಶ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; 19ರ ಉತ್ಸವ ರದ್ದುಗೊಳಿಸಿದ ಸರ್ಕಾರ

    ‘ಶಿಕ್ಷಕನಾಗಬೇಕೆಂಬ ಗುರಿ ಇಟ್ಟುಕೊಂಡಿದ್ದೆ. ಅದಕ್ಕಾಗಿ ನಾನು ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದ್ದೇನೆ. ಬಿಎ ಪದವೀಧರನಾಗಿದ್ದ ಅವಧಿಯಲ್ಲಿ ನನಗೆ ತಿಂಗಳಿಗೆ 16,000 ರೂ ಸಂಬಳದ ಕೆಲಸಕ್ಕೆ ಖಾಸಗಿ ಸಂಸ್ಥೆಯೊಂದರಲ್ಲಿ 16 ಲಕ್ಷ ರೂ.ಲಂಚ ಕೇಳಲಾಗಿತ್ತು. ನನ್ನ ತಂದೆ ಕೂಡ ಈ ನಿಟ್ಟಿನಲ್ಲಿ ಸಾಲ ಮಾಡುವ ಮೂಲಕ ಹಣವನ್ನು ವ್ಯವಸ್ಥೆ ಮಾಡಲು ಯೋಜಿಸುತ್ತಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದು, ಮತ್ತು ಕೃಷಿಯಲ್ಲೇ ನನ್ನ ತಂದೆಗೆ ಸಹಾಯ ಮಾಡಲು ನಿರ್ಧರಿಸಿದ್ದೆ ಎನ್ನುತ್ತಾರೆ ಸತೀಶ್.

    ಇದನ್ನೂ ಓದಿ: ಮಹಿಳೆಯರಿಗಿನ್ನು ಹದಿನೆಂಟಲ್ಲ, ಮದುವೆ ವಯಸ್ಸು 21…!

    ’69 ವರ್ಷದ ನನ್ನ ತಂದೆ ನಾಗಪ್ಪ ಮತ್ತು ಚಿಕ್ಕಪ್ಪಂದಿರು ಕಳೆದ 15 ವರ್ಷಗಳಿಂದ ಸಾಂಪ್ರದಾಯಿಕ ರೀತಿಯಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದರು. ಆದರೆ ಇಳುವರಿ ಮತ್ತು ಗುಣಮಟ್ಟ ಕಳಪೆಯಾಗಿದ್ದರಿಂದ ಅವುಗಳಿಂದ ಆದಾಯ ಗಳಿಸುವುದು ಕಷ್ಟಸಾಧ್ಯವಾಗುತ್ತಿತ್ತು.
    2008 ರಲ್ಲಿ ನಾನು ಈ ಕೃಷಿಗೆ ಬಂದ ನಂತರ, ಸಮರ್ಪಕ ಜಲ ನಿರ್ವಹಣೆಗಾಗಿ ಹನಿ ನೀರಾವರಿ, ತೇವಾಂಶ ಕಾಪಾಡಿಕೊಳ್ಳುವಿಕೆ, ಹಸಿಗೊಬ್ಬರ ಪೂರೈಕೆ, ಕಳೆಗಳ ಬೆಳವಣಿಗೆಯನ್ನು ತಡೆಗಟ್ಟುವಿಕೆ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ನಿಯಮಿತವಾಗಿ ಒದಗಿಸುವಿಕೆ, ಕೀಟಗಳ ನಿರ್ವಹಣೆಯ ಮೂಲಕ ತರಕಾರಿಗಳನ್ನು ಬೆಳೆಯುವ ಸುಧಾರಿತ ತಂತ್ರಗಳನ್ನು ನಾನು ಆಯ್ದುಕೊಂಡೆ’. ಕೃಷಿಯತ್ತ ನಡೆದು ಬಂದ ದಾರಿಯನ್ನು ಸ್ಮರಸಿಕೊಂಡರು ಸತೀಶ್.

    ಇದನ್ನೂ ಓದಿ: ಹೌದಾ? ಇಸಿಎಂಒ ಸಹಾಯದಿಂದ ಕೋವಿಡ್-19 ದಿಂದ ಗುಣಮುಖವಾಗಬಹುದೆ?

    “ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ತರಕಾರಿ ಬೆಳೆಗಳ ಕುರಿತು ಅಧ್ಯಯನ ಮಾಡುವ ಮೂಲಕ ಹಾಗಲಕಾಯಿ ಬೆಳೆಯಲು ನಿರ್ಧರಿಸಿದೆ. ಇದು ರುಚಿಯಿಂದ ಕಹಿಯಾಗಿದೆ, ಆದರೆ ಇದು ಮಧುಮೇಹ, ಕ್ಯಾನ್ಸರ್ ಮತ್ತು ಇನ್ನೂ ಅನೇಕ ಕಾಯಿಲೆಗಳ ಶಮನಕ್ಕೆ ಔಷಧೀಯ ಗುಣ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗಿದೆ. ಇದನ್ನು ಔಷಧಿಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ ಎಂದು ಅವರು ಹೇಳಿದರು. “ಈ ಹಿನ್ನೆಲೆಯಲ್ಲಿ, ನಾವು ಒಂದೂವರೆ ಎಕರೆ ಭೂಮಿಯಲ್ಲಿ ವರ್ಷವಿಡೀ ಬೆಳೆಯಲು ಪ್ರಾರಂಭಿಸಿದ್ದೇವೆ. ಒಂದು ಋತುವಿನಲ್ಲಿ ನಾವು ಅಂದಾಜು 50 ಟನ್ ಬೆಳೆಯುತ್ತೇವೆ’ ಎಂದರು.

    ಇದನ್ನೂ ಓದಿ: ಅಲ್ಕೋಹಾಲ್​ ಮಿಶ್ರಿತ ಸ್ಯಾನಿಟೈಸರ್​ ಬಳಕೆಯಿಂದ ಧಾರ್ಮಿಕ ತಾಣಗಳು ಅಪವಿತ್ರ….!

    “ಈ ವರ್ಷ ಪ್ರತಿ ಟನ್‌ಗೆ ಮಾರಾಟ ಬೆಲೆ 35,000 ರೂ. ಇದೆ. ಈ ಬೆಳೆಯ ಹಂಗಾಮಿನಲ್ಲಿ ನಾನು ದಿನಕ್ಕೆ ಅಂದಾಜು 25,000 ದಿಂದ 35,000 ರೂ.ಗಳನ್ನು ಗಳಿಸುತ್ತೇನೆ. ನಾನು ಈ ಕೃಷಿಗೆ ಅಂದಾಜು 1.5 ಲಕ್ಷ ರೂ.ಗಳನ್ನು ಹೂಡಿದರೆ ಅದಕ್ಕಿಂತ ಹಲವಾರು ಪಟ್ಟು ಆದಾಯ ಗಳಿಸುತ್ತೇನೆ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಮಾತ್ರ ಇದು ಸಾಧ್ಯ. ನಾನು ಸಸ್ಯಗಳನ್ನು ಮಗುವಿನಂತೆ ನೋಡಿಕೊಳ್ಳುತ್ತೇನೆ, ಇದರಿಂದಾಗಿ ನನಗೆ ಗುಣಮಟ್ಟದ ಇಳುವರಿ ಸಿಗುತ್ತದೆ. ವಿವಿಧ ಜಿಲ್ಲೆಗಳ ಅನೇಕ ಜನರು ನನ್ನ ಹೊಲಕ್ಕೆ ಭೇಟಿ ನೀಡಿ ಕೃಷಿ ವಿಧಾನವನ್ನು ಅರ್ಥಮಾಡಿಕೊಳ್ಳುತ್ತಾರೆ” ಎಂದು ಅವರು ಹೇಳಿದರು. ಅವರು ಈಗ ಶ್ರೀಮಂತ ಕೃಷಿಕ, ನಾಲ್ಕು ವಾಹನಗಳು, ಕೃಷಿ ಭೂಮಿಯ ಒಡೆಯ ಮತ್ತು ಬಂಗಲೆ ನಿರ್ಮಿಸಲು ಯೋಜಿಸುತ್ತಿದ್ದಾರಂತೆ.

    ಮಾನವಸಹಿತ ಗಗನಯಾನ ಮತ್ತೊಂದು ವರ್ಷ ಮುಂದಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts