More

    ಹಕ್ಕಿಜ್ವರ ಭೀತಿ: ಕರ್ನಾಟಕದಲ್ಲಿ ಕೋಳಿಮೊಟ್ಟೆ, ಮಾಂಸ ಮಾರಾಟಕ್ಕೆ ನಿಷೇಧ ಇದ್ಯಾ?

    ಬೆಂಗಳೂರು: ಕರೊನಾ ಸೋಂಕಿನ ಭೀತಿ ನಡುವೆಯೇ ಹಕ್ಕಿ ಜ್ವರ ಆತಂಕ ಹೆಚ್ಚಿಸಿದೆ. ದೇಶದ ಅನೇಕ ರಾಜ್ಯಗಳಲ್ಲಿ ಕಾಗೆ, ಬಾತುಕೋಳಿಗಳು ನಿಗೂಢವಾಗಿ ಸಾಯುತ್ತಿವೆ. ನೆರೆಯ ಕೇರಳದ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರ ಸೋಂಕು ದೃಢಪಟ್ಟ ಬೆನ್ನಲ್ಲೇ ಕರ್ನಾಟಕದಲ್ಲೂ ಆತಂಕ ಹೆಚ್ಚಾಗಿದೆ. ಹಾಗಾಗಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

    ರಾಜಸ್ಥಾನ, ಕೇರಳ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹಕ್ಕಿ ಜ್ವರ ಪ್ರಕರಣ ದಾಖಲಾಗಲಾಗುತ್ತಿದ್ದಂತೆ ಚಿಕನ್​ ತಿನ್ನಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಕರ್ನಾಟಕದಲ್ಲಿ ಕೋಳಿಮೊಟ್ಟೆ ಮತ್ತು ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿರಿ ಮಗನ ವಿರುದ್ಧ ದೂರು ಕೊಡಲು ಬಂದವ ಪೊಲೀಸ್​ ಠಾಣೆ ಮುಂದೆಯೇ ನೇಣುಬಿಗಿದುಕೊಂಡ!

    ರಾಜ್ಯದಲ್ಲಿ ಇದುವರೆಗೂ ಯಾವುದೇ ಹಕ್ಕಿಜ್ವರ ಪ್ರಕರಣ ಕಂಡುಬಂದಿಲ್ಲ. ಆದರೂ ಇಲಾಖೆಯ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ಆತಂಕ ಪಡದೆ ಕೋಳಿಮೊಟ್ಟೆ ಮತ್ತು ಮಾಂಸವನ್ನು ಸೇವಿಸಬಹುದು ಎಂದು ಪ್ರಭು ಚವ್ಹಾಣ್ ಹೇಳಿದ್ದಾರೆ.
    ಕೇರಳವನ್ನು ಹೊರತುಪಡಿಸಿ ಇತರ ರಾಜ್ಯಗಳಿಗೆ ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟ ಹಾಗೂ ಸಾಗಾಣಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಕೇರಳದಿಂದ ರಾಜ್ಯಕ್ಕೆ ಬರುವ ಕೋಳಿ, ಕೋಳಿ ಉತ್ಪನ್ನಗಳ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.

    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹೇಳುವ ಪ್ರಕಾರ, ಕೋಳಿ ಮಾಂಸ ತಿಂದ ಮಾತ್ರಕ್ಕೆ ಹಕ್ಕಿ ಜ್ವರ ಬಂದುಬಿಡುತ್ತದೆ ಎನ್ನುವಂತಿಲ್ಲ. ಮಾಂಸವನ್ನು ಸರಿಯಾದ ರೀತಿಯಲ್ಲಿ ಬೇಯಿಸಿ ತಿನ್ನುವುದರಿಂದ ಸೋಂಕು ನಮಗೆ ಹರಡುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಮಾಂಸವನ್ನು 75 ಡಿಗ್ರಿ ಸೆಲ್ಸಿಯಸ್​ನಲ್ಲಿ ಬೇಯಿಸಿದ ನಂತರ ಮಾತ್ರವೇ ಸೇವನೆ ಮಾಡಬೇಕು ಎಂದು ಸಂಸ್ಥೆ ಹೇಳಿಸಿದೆ. ಅದೇ ರೀತಿಯಲ್ಲಿ ಕೋಳಿ ಮೊಟ್ಟೆಯನ್ನೂ ಸರಿಯಾದ ರೀತಿಯಲ್ಲಿ ಬೇಯಿಸಿಯೇ ತಿನ್ನಬೇಕು. ಒಂದು ವೇಳೆ ಬೇಯಿಸಿದ್ದು ಸರಿ ಆಗಲಿಲ್ಲವೆಂದಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಡಬ್ಲ್ಯುಎಚ್​ಒ ಎಚ್ಚರಿಕೆ ನೀಡಿದೆ.

    ತಾಯಿ-ತಂಗಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಕೊಂದುಬಿಟ್ಟ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು

    ಬೆಂಕಿ ಹಚ್ಚಿಕೊಂಡು ಸಾವಿನ ಮನೆಯ ಕದ ತಟ್ಟಿದ 22ರ ಯುವತಿ! ಆ ರಾತ್ರಿ ಏನಾಯ್ತು?

    ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts