More

    ಕೊರೊನಾ ವೈರಸ್​ ಆಯ್ತು… ಈಗ ಕೇರಳದಲ್ಲಿ ಚಿಕನ್​ಗೂ ಬಂತು ಕಂಟಕ!

    ಕೋಳಿಕ್ಕೋಡ್​: ಜಗತ್ತಿನಾದ್ಯಂತ ಕೊರೊನಾ ವೈರಸ್​ ದಿನೇದಿನೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಲೇ ಇದೆ. ಈ ಮಧ್ಯೆ ಕೇರಳದಲ್ಲಿ ಮತ್ತೊಂದು ಹೊಸ ಭೀತಿ ಶುರುವಾಗಿದೆ.

    ಪಶ್ಚಿಮ ಕೊಡಿಯಾಥೂರ್ ನ ಒಂದು ಕೋಳಿ ಸಾಕಣಾ ಕೇಂದ್ರ ಮತ್ತು ಕೋಳಿಕ್ಕೋಡ್​ನ ಖಾಸಗಿ ನರ್ಸರಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ದೃಢಪಟ್ಟಿದೆ. ಈ ಬೆನ್ನಲ್ಲೇ ಕೇರಳ ಅರಣ್ಯ ಇಲಾಖೆ ಸಚಿವ ಕೆ.ರಾಜು ನೇತೃತ್ವದಲ್ಲಿ ತಿರುವನಂತಪುರಂನಲ್ಲಿ ತುರ್ತು ಸಭೆ ನಡೆದಿದ್ದು, ಜಕ್ಕಿ ಜ್ವರ ನಿಯಂತ್ರಣಾ ಕ್ರಮದ ಬಗ್ಗೆ ಚರ್ಚಿಸಲಾಗಿದೆ.

    ಹಕ್ಕಿ ಜ್ವರ ನಿಯಂತ್ರಣದಲ್ಲಿದೆ. ಯಾರೂ ಹೆದರಬೇಕಿಲ್ಲ. ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಶುಸಂಗೋಪನಾ ಸಚಿವಾಲಯ ಮಾಹಿತಿ ನೀಡಿದೆ. ಅಷ್ಟೇ ಅಲ್ಲ ಹಕ್ಕಿ ಜ್ವರ ಕಾಣಿಸಿಕೊಂಡ ಕೊಡಿಯಾಥೂರ್​ ಮತ್ತು ಕೋಳಿಕ್ಕೋಡ್​ ಫಾರ್ಮ್​ನ ಸುತ್ತಮುತ್ತ ಒಂದು ಕಿಲೋ ಮೀಟರ್​ ಅಂತರದಲ್ಲಿರುವ ಎಲ್ಲ ಕೋಳಿಗಳನ್ನೂ ಕೊಂದು, ಸುಡಲು ಇಲಾಖೆ ನಿರ್ಧರಿಸಿದ್ದು, ಅದಕ್ಕಾಗಿಯೇ 25 ಜನರ ಗುಂಪೊಂದನ್ನು ನೇಮಕ ಮಾಡಿದೆ ಎಂದು ವರದಿಯಾಗಿದೆ.

    ಹಕ್ಕಿ ಜ್ವರ ಇರುವ ಬಗ್ಗೆ ಗುರುವಾರ ಶಂಕೆ ವ್ಯಕ್ತವಾಗಿತ್ತು. ಕಣ್ಣೂರಿನ ಪಶು ಸಂಗೋಪನಾ ಇಲಾಖೆಯ ಲ್ಯಾಬೊರೇಟರಿಯಲ್ಲಿ ಸೋಂಕು ಶಂಕಿತ ಕೋಳಿಗಳನ್ನು ತಪಾಸಣೆಗೆ ಒಳಪಡಿಸಿದಾಗ ಜ್ವರ ಇರುವುದು ದೃಢಪಟ್ಟಿದೆ.

    ಹವಾಮಾನ ಬದಲಾವಣೆಯಿಂದ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಜನರು ಗಾಬರಿಯಾಗುವುದು ಬೇಡ. ಆರೋಗ್ಯ ಇಲಾಖೆಯ ತಂಡವೊಂದು ಕೋಳಿಕ್ಕೋಡ್​ಗೆ ತೆರಳಿದೆ. ಪಶು ಸಂಗೋಪನಾ ಇಲಾಖೆಯ ಸಹಯೋಗದೊಂದಿಗೆ ರೋಗ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts