More

    VIDEO: ಮಾಹಿತಿ ಆಯುಕ್ತ ಬಿಮಲ್ ಜುಲ್ಕಾ ಹೊಸ ಮುಖ್ಯ ಮಾಹಿತಿ ಆಯುಕ್ತ: ಆಯ್ಕೆಯಾಗಿ ಎರಡು ವಾರದ ನಂತರ ಅಧಿಕಾರ ಸ್ವೀಕಾರ

    ನವದೆಹಲಿ: ಮಾಹಿತಿ ಆಯುಕ್ತ ಬಿಮಲ್ ಜುಲ್ಕಾ ಅವರು ನೂತನ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ಶುಕ್ರವಾರ ತಿಳಿಸಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.

    ನಿಕಟಪೂರ್ವ ಸಿಐಸಿ ಸುಧೀರ್ ಭಾರ್ಗವ ಅವರು ಜನವರಿ 11ರಂದು ನಿವೃತ್ತರಾದ ಬಳಿಕ ಕೇಂದ್ರ ಮಾಹಿತಿ ಆಯೋಗ ಮುಖ್ಯಸ್ಥರಿಲ್ಲದೇ ಹಾಗೆಯೇ ಕೆಲಸ ಮುಂದುವರಿಸಿತ್ತು. ವಾಸ್ತವದಲ್ಲಿ ಬಿಮಲ್ ಜುಲ್ಕಾ ನೇಮಕ ಆದೇಶ ಹೊರಬಿದ್ದು ಎರಡು ವಾರಕ್ಕೂ ಹೆಚ್ಚು ಕಾಲವಾಗಿದೆ. ತಾಂತ್ರಿಕ ಕಾರಣಗಳಿಂದ ಅಧಿಕಾರ ಸ್ವೀಕಾರ ವಿಳಂಬವಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಸದ್ಯ ಕೇಂದ್ರ ಮಾಹಿತಿ ಆಯೋಗದ ಸದಸ್ಯ ಬಲ ಆರು ಇದೆ. ವಾಸ್ತವದಲ್ಲಿ ಇದರ ಸದಸ್ಯ ಬಲ ಸಿಐಸಿ ಸೇರಿ 11. ಈಗ ಜುಲ್ಕಾ ಅವರ ನೇಮಕದ ನಂತರ ಆಯೋಗದ ಸದಸ್ಯ ಬಲದಲ್ಲಿ ಇನ್ನೂ ಐದು ಸ್ಥಾನದ ಕೊರತೆ ತುಂಬಬೇಕಾಗಿದೆ. ಈಗ ನೇಮಕವಾಗಿರುವ ಜುಲ್ಕಾ ಅವರ ಅಧಿಕಾರಾವಧಿ ಆಗಸ್ಟ್ ತನಕವಷ್ಟೇ ಇದೆ. ಆರು ತಿಂಗಳಿಗೂ ಕಡಿಮೆ ಅವಧಿಗೆ ಅವರು ಸಿಐಸಿ ಆಗಿರಲಿದ್ದಾರೆ.

    ದೆಹಲಿಯಲ್ಲೇ ಶಿಕ್ಷಣ ಪಡೆದು, ವೃತ್ತಿ ಬದುಕು ಆರಂಭಿಸಿರುವ ಬಿಮಲ್ ಜುಲ್ಕಾ ಅವರು ವಿವಿಧ ವಾಣಿಜ್ಯ ಸಂಘಟನೆಗಳ ಜತೆಗೆ ಕೆಲಸ ಮಾಡಿದ್ದಾರೆ. ನಂತರ, ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆಯ ಕಾರ್ಯದರ್ಶಿಯಾಗಿ, ವಿದೇಶಾಂಗ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ/ ವಿಶೇಷ ಕಾರ್ಯದರ್ಶಿ, ಹಣಕಾಸು ಸಲಹೆಗಾರ, ಹಣಕಾಸು ಸಚಿವಾಲಯದ ಹೆಚ್ಚುವರಿ ಸೆಕ್ರೆಟರಿ, ಡೈರೆಕ್ಟರ್ ಜನರಲ್​(ಕರೆನ್ಸಿ), ನವದೆಹಲಿಯಲ್ಲಿ ಮಧ್ಯಪ್ರದೇಶ ಸರ್ಕಾರದ ರೆಸಿಡೆಂಟ್ ಕಮಿಷನರ್​ ಆಗಿ, ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ(ಜಿ/ಏರ್​), ಮಧ್ಯಪ್ರದೇಶ ಗ್ವಾಲಿಯರ್​ನ ಕಮಿಷನರ್​ ಆಘಿ, ಮಧ್ಯಪ್ರದೇಶ ಸರ್ಕಾರದ ಸಾರ್ವಜನಿಕ ಸಂಪರ್ಕದ ಆಯುಕ್ತರಾಗಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಇಂಡಸ್ಟ್ರಿಯಲ್ ಡೆವಲಪ್​ಮೆಂಟ್​ನ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts