More

    ಅಂತಾರಾಷ್ಟ್ರೀಯ ವಸತಿ ಶಾಲೆ ಸ್ಥಾಪನೆ

    ಬೀಳಗಿ: ಸರ್ಕಾರದ ವಿವಿಧ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಲಾನುಭವಿಗಳ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಸರ್ಕಾರ ಮಾಡಲಿದೆ. ಮತಕ್ಷೇತ್ರ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

    ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಹೆರಕಲ್ಲ ಹತ್ತಿರದ ಬ್ರೀಜ್ ಕಂ ಬ್ಯಾರೇಜ್ ಎತ್ತರ ಮಾಡುವುದರಿಂದ ಮಾಚಕನೂರದವರೆಗೆ ನೀರು ನಿಲ್ಲುತ್ತದೆ. ಚಿಕ್ಕಸಂಗಮದಲ್ಲಿ ಪಕ್ಷಿಧಾಮ ಹಾಗೂ ಮುಳುಗಡೆ ಸಂತ್ರಸ್ತರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಸತಿ ಶಾಲೆ ತೆರೆಯಲಾಗುವುದು ಎಂದರು.

    ಪ್ರಭಾರ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ, ಗ್ರೇಡ್-2 ತಹಸೀಲ್ದಾರ್ ಆನಂದ ಕೋಲ್ಲಾರ, ಬಿಇಒ ಎಚ್.ಜಿ.ಮಿರ್ಜಿ, ತಾಪಂ ಇಇಒ ಎಂ.ಕೆ.ತೊದಲಬಾಗಿ, ಹೆಸ್ಕಾಂ ಅಧಿಕಾರಿ ವಿಜಯಕುಮಾರ ಚವ್ಹಾಣ, ಎಸಿ ಸಿದ್ದು ಹುಲ್ಲೋಳ್ಳಿ, ಡಾ.ದಯಾನಂದ ಕರೆಣ್ಣವರ, ವಲಯ ಅರಣ್ಯಾಧಿಕಾರಿ ಪ್ರದೀಪ ರಾಠೋಡ, ಎಪಿಎಂಸಿ ಸದಸ್ಯ ರಾಮಣ್ಣ ಬಿರಾದಾರ, ಪಿಡಿಒ ವಿಮಲಾ ಕಲಮನಿ ಅನೇಕರು ಇದ್ದರು. ಜನ ಸಂಪರ್ಕ ಸಭೆಯಲ್ಲಿ ಗಿರಿಸಾಗರ ಗ್ರಾಪಂ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಗೈರಾಗಿದ್ದರು.

    ಬೇಡಿಕೆಗಳ ಮಹಾಪೂರ
    ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಮನವಿಗಳ ಮಹಾಪೂರ ಹರಿದು ಬಂದಿವು. ಅನಗವಾಡಿ ಹೋಬಳಿ ಬಹಳ ದೊರವಾಗಿದ್ದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಗಿರಿಸಾಗರ ಹೋಬಳಿ ವಲಯನ್ನಾಗಿ ಮಾಡುವುದು, ಪಿಯು ಕಾಲೇಜು ಮಂಜೂರು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕ, ಶಾಲಾ ಕೊಠಡಿಗಳ ದುರಸ್ತಿ, ಚರಂಡಿ ನಿರ್ಮಾಣ, ಶೌಚಗೃಹ ಹಾಗೂ ಆಶ್ರಯ ಮನೆಗಳು ನಿರ್ಮಾಣ, ಪಶು ವೈದ್ಯರ ನೇಮಕ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.

    ಸಚಿವ ಮುರುಗೇಶ ನಿರಾಣಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರಕಿಸಬೇಕು. ಅಭಿವೃದ್ಧಿ ಕೆಲಸಕ್ಕೆ ಬೇಕಾಗುವ ಅನುದಾನದ ಕೊರತೆ ಇದಲ್ಲಿ ನನ್ನ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.



    ಅಂತಾರಾಷ್ಟ್ರೀಯ ವಸತಿ ಶಾಲೆ ಸ್ಥಾಪನೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts