More

    ಬೈಕ್ ನಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

    ರೋಣ: ರಸ್ತೆಯಲ್ಲಿರುವ ತಗ್ಗು-ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕಿನಿಂದ ಕೆಳಗೆ ಬಿದ್ದ ಮಹಿಳೆಯೊಬ್ಬಳು ತೀವ್ರವಾಗಿ ಗಾಯಗೊಂಡು ರೋಣ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    ರೋಣ ಪಟ್ಟಣದ ಮಾಬೂಭಿ ಗೋನಾಳ ತೀವ್ರವಾಗಿ ಗಾಯಗೊಂಡಿದ್ದಾರೆ, ಇವರ ಮಗನ ಜೋತೆ ಗಜೇಂದ್ರಗಡದಿಂದ ರೋಣ ಪಟ್ಟಣಕ್ಕೆ ಬರುತ್ತಿದ್ದಾಗ, ಜಿಗಳೂರ ಹತ್ತಿರದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯ ತುಂಬ ತಂಗು- ಗುಂಡಿಗಳು ಬಿದ್ದೀವೆ, ಅಲ್ಲದೇ ಈ ಹಿಂದೆ ಮಾಡಿದ ರಸ್ತೆಯ ಕಡಿಗಳು ಸಂಪೂರ್ಣವಾಗಿ ಮೇಲೆದ್ದಿರುವುದರಿಂದ ಬೈಕ್ ಸ್ಕೀಡ್ ಆದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ, ಈ ಬಗ್ಗೆ ರೋಣ ಪುರಸಭೆ ಮಾಜಿ ಅಧ್ಯಕ್ಷ ಮುತ್ತಣ್ಣ ಸಂಗಳದ ಪ್ರತಿಕ್ರೀಯಿಸಿ, ರೋಣ ತಾಲೂಕಿನಾದ್ಯಂತ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರು, ಸ್ಪಂದಿಸುತ್ತಿಲ್ಲಾ, ಪ್ರತಿ ದಿನ ಹತ್ತಾರು ಜನರು ಈ ರೀತಿ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts