More

    ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರ!

    ಉಡುಪಿ: ವಿದ್ಯುತ್​ ಗುತ್ತಿಗೆದಾರರೊಬ್ಬರ ನಿರ್ಲಕ್ಷ್ಯದಿಂದಾಗಿ ದ್ವಿಚಕ್ರ ವಾಹನ ಸವಾರರೊಬ್ಬರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಂತಾಗಿದೆ. ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕೊರಳಿಗೆ ಉರುಳಿನಂತೆ ಸಿಕ್ಕಿಹಾಕಿಕೊಂಡಿದ್ದರಿಂದ ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಉಡುಪಿ ಜಿಲ್ಲೆ ಬೈಂದೂರು ತಾಲೂಕು ಆಲಗದ್ದೆ ಯರುಕೋಣೆ ನಿವಾಸಿ ಶೇಖರ್ ಶೆಟ್ಟಿ (68) ಮೃತಪಟ್ಟವರು. ಬೈಂದೂರಿನ ಹೇರೂರು-ಅರೆಹೊಳೆ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಬೈಂದೂರು ಸುತ್ತಮುತ್ತ ಸುರಿದ ಭಾರಿ ಗಾಳಿಮಳೆಯಿಂದಾಗಿ ಬಿದ್ದಿದ್ದ ವಿದ್ಯುತ್ ತಂತಿಗಳ ದುರಸ್ತಿ ವೇಳೆ ಈ ಅನಾಹುತ ನಡೆದುಹೋಗಿದೆ.

    ಇದನ್ನೂ ಓದಿ: ‘ಶವಸಂಸ್ಕಾರಕ್ಕೆ ಸೌದೆಯನ್ನು ಉಚಿತವಾಗಿ ಕೊಡಲಾಗುವುದು’: ಹೀಗೊಂದು ಸಮಾಜ ಸೇವೆ, ನೊಂದವರಿಗೆ ಸಹಾಯ!

    ವಿದ್ಯುತ್​ ತಂತಿಗಳನ್ನು ದುರಸ್ತಿ ಪಡಿಸುವ ಸಂದರ್ಭ ರಸ್ತೆಯಲ್ಲಿ ಯಾವುದೇ ಸೂಚನ ಫಲಕಗಳನ್ನು ಅಳವಡಿಸದೆ ಗುತ್ತಿಗೆದಾರ ಕಾಮಗಾರಿ ನಡೆಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ದುರಸ್ತಿ ನಡೆಯುತ್ತಿದ್ದ ವೇಳೆ ವಿದ್ಯುತ್ ತಂತಿ ಆಳೆತ್ತರದಲ್ಲಿ ನೇತಾಡುತ್ತಿದ್ದು, ಆಗ ಅದೇ ದಾರಿಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ಶೇಖರ್ ಶೆಟ್ಟಿ ಅವರ ಕೊರಳಿಗೆ ಉರುಳಿನಂತೆ ಸಿಕ್ಕಿ ಹಾಕಿಕೊಂಡಿದೆ. ಪರಿಣಾಮ ಅವರು ಗೋಣು ಮುರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಚಲಿಸುತ್ತಿದ್ದ ಬೈಕ್ ಮೇಲೇ ಬಿದ್ದ ಮರ!; ನಡೆದುಕೊಂಡು ಹೋಗುತ್ತಿದ್ದವರೂ ಮರದಡಿಗೆ ಸಿಲುಕಿದರು..

    ನೆಗೆಟಿವ್​ನಲ್ಲೂ ಪಾಸಿಟಿವ್!; ಕರೊನಾ ವೈರಸ್​ಗೆ ಹೆದರಿದರಾ ಕೊಲೆಗಡುಕರು, ಕಳ್ಳರು, ದರೋಡೆಕೋರರು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts