More

    ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

    ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆ ಭಗ್ನಗೊಳಿಸಿ ಅಶಾಂತಿ ಉಂಟು ಮಾಡಲು ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿ ಲಿಂಗಾಯತ ಸಂಘಟನೆ ಮುಖಂಡರು ಸೋಮವಾರ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಬೆಳಗಾವಿ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದಯಣ್ಣವರ ಮಾತನಾಡಿ, ಬಿಜಗುಪ್ಪಿ ಗ್ರಾಮದಲ್ಲಿ ಮಹಾಮಾನವತಾವಾದಿ ಬಸವೇಶ್ವರ ಪ್ರತಿಮೆ ಭಗ್ನಗೊಳಿಸಿದ್ದನ್ನು ಖಂಡಿಸುತ್ತೇವೆ. ಕೇವಲ ಕಠಿಣ ಶಿಕ್ಷೆ ನೀಡುವುದರಿಂದ ಇಂತಹ ಘಟನೆಗಳು ಮರುಕಳಿಸುವುದು ತಪ್ಪುವುದಿಲ್ಲ. ಮಹಾಪುರುಷರನ್ನು ಅವಮಾನಿಸುವ, ದ್ವೇಷಿಸುವ, ಕಿಡಿಗೇಡಿ ಕೃತ್ಯ ಎಸಗುವ ಮನೋಭಾವ ಬದಲಾಗಬೇಕು. ಹಾಗಾಗಿ ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳು ಯಾರೇ ಆಗಿರಲಿ, ಅವರ ಮನಸ್ಸು ಪರಿವರ್ತಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

    ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಬಸವೇಶ್ವರ ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲಿ ಪ್ರತಿಮೆ ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಕೈಜೋಡಿಸಲು ಸಿದ್ಧ ಎಂದರು. ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮನವಿ ಸ್ವೀಕರಿಸಿ, ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

    ಲಿಂಗಾಯತ ಸಂಘಟನೆ ಮುಖಂಡರಾದ ಸುರೇಶ ನರಗುಂದ, ಅಶೋಕ ಬಸ್ತವಾಡ, ವಿ.ಕೆ.ಪಾಟೀಲ, ಸಂಜಯ ಭಾವಿ, ಬಿ.ಪಿ.ಜೇವನಿ, ಆರ್.ಪಿ.ಪಾಟೀಲ, ಎ.ಬಿ.ನಂದಿ, ಸದಾಶಿವ ದೇವರಮನಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts