More

    ಬಿಹಾರದ ಶಿಕ್ಷಕಿ ಗುಜರಾತ್‌ನಲ್ಲಿದ್ದುಕೊಂಡೇ 5 ತಿಂಗಳು ಸಂಬಳ ಪಡೆದು ಸಿಕ್ಕಿಬಿದ್ದರು!

    ಬಿಹಾರ: ಬಿಹಾರದ ಮಹಿಳಾ ಶಿಕ್ಷಕಿಯೊಬ್ಬರು ಗುಜರಾತ್‌ನಲ್ಲಿದ್ದುಕೊಂಡು 5 ತಿಂಗಳು ಸಂಬಳ ಪಡೆದಿದ್ದಾರೆ. ಅಧಿಕಾರಿಗಳು ತಪಾಸಣೆಗೆ ಬಂದಿರುವ ವೇಳೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

    ಶಿಕ್ಷಕಿ ಸೀಮಾ ಕುಮಾರಿ ಕಳೆದ ಕೆಲ ತಿಂಗಳಿನಿಂದ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಬಿಹಾರದ ಖಾಗಾರಿಯಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಹಾಯಕ ಶಿಕ್ಷಕಿಯಾದ ಇವರು ಕಳೆದ ಐದು ತಿಂಗಳಿನಿಂದ ಗುಜರಾತ್‌ನಲ್ಲಿದ್ದರೂ ಸಹ ಸಂಬಳ ಪಡೆಯುತ್ತಿದ್ದರು. ಅಧಿಕಾರಿಗಳ ಕಣ್ಣಿಗೆ ಕಾರ್ಯನಿರ್ವಹಿಸುತ್ತಿದ್ದೇನೆಂದು ಹಾಜರಾತಿ ತೋರಿಸಿ ಸಂಬಳ ಪಡೆಯುತ್ತಿದ್ದರು. ಆದರೆ ಒಂದು ದಿನ ವಾರ್ಡ್ ನಂ.4ರಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬ್ಲಾಕ್ ಶಿಕ್ಷಣಾಧಿಕಾರಿ ರಾಮ್ ಉದಯ್ ಮಹತೋ ಭೇಟಿ ನೀಡಿ ಪರಿಶೀಲಿಸಿದಾಗ ಕೆಲ ತಿಂಗಳಿಂದ ಶಿಕ್ಷಕಿ ಸೀಮಾ ಕುಮಾರಿ ಗೈರು ಹಾಜರಾಗಿರುವುದು ಬೆಳಕಿಗೆ ಬಂದಿದೆ. ಆಕೆಯನ್ನು ಈ ಶಾಲೆಯಲ್ಲಿ ಡೆಪ್ಯೂಟೇಶನ್ ಮೇಲೆ ನಿಯೋಜಿಸಲಾಗಿತ್ತು. ಬಿಹಾರದ ಶಾಲೆ ಶಿಕ್ಷಕಿ ಐದು ತಿಂಗಳಿನಿಂದ ಗುಜರಾತ್‌ನಲ್ಲಿದ್ದರೂ ಸಹ ಸಂಬಳ ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ಶಿಕ್ಷಣ ಇಲಾಖೆಯ ಅಧಿಕಾರಿ ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ:ಸಿಎಂ ಕಾರನ್ನು ಬಿಡದ ಚುನಾವಣಾ ಅಧಿಕಾರಿಗಳು; ಬಸವರಾಜ ಬೊಮ್ಮಾಯಿ‌ ಕಾರು ತಪಾಸಣೆ
    ಕ್ಷೇತ್ರ ಶಿಕ್ಷಣಾಧಿಕಾರಿ ರಾಮ್ ಉದಯ್ ಮಹ್ತೋ ಮಾತನಾಡಿ, ಶಿಕ್ಷಕಿ ಸೀಮಾ ಕುಮಾರಿ ಕೆಲಸ ಮಾಡುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಆಕೆ ಈ ಶಾಲೆಯಲ್ಲಿ ಕೆಲಸ ಮಾಡಲು ವಿಶೇಷ ನಿಯೋಜನೆಗೊಂಡಿದ್ದರು. ಕಳೆದ ಕೆಲ ತಿಂಗಳಿನಿಂದ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು ತೋರುವ ಹಾಜರಾತಿ ದಾಖಲೆ ಅನುಸಾರ ಆಕೆಗೆ ಮಾಸಿಕ ವೇತನ ನೀಡಲಾಗುತ್ತಿತ್ತು ಎಂದು ಇಲಾಖೆಯಲ್ಲಿ ತನಿಖೆ ನಡೆಸಿದ ಬಳಿಕ ತಿಳಿದು ಬಂದಿದೆ ಎಂದು ಮಹ್ತೋ ತಿಳಿಸಿದ್ದಾರೆ.

    ಇದನ್ನೂ ಓದಿ: ಶ್ರೀ ರಾಮನ ತೊಡೆ ಏರಿ ಹೂಮಾಲೆ ಹಾಕಿ ಎಡವಟ್ಟು ಮಾಡಿಕೊಂಡ ಶಾಸಕ!
    ಸೀಮಾ ಕುಮಾರಿ ಹಾಗೂ ಮುಖ್ಯ ಶಿಕ್ಷಕ ವಿಕಾಸ್ ಕುಮಾರರ ವೇತನ ನಿಲ್ಲಿಸುವಂತೆ ಜಿಲ್ಲಾ ಶಿಕ್ಷಣ ಅಧಿಕಾರಿಗೆ ನಾವು ವರದಿ ಕಳುಹಿಸಿದ್ದು, ಇಲಾಖೆ ಅದರಂತೆ ಕ್ರಮ ತೆಗೆದುಕೊಂಡಿದೆ. ಇದೇ ರೀತಿ ಶಾಲೆಗೆ ಒಂದೇ ಒಂದು ದಿನ ಕೆಲಸಕ್ಕೆ ಹೋಗದೇ ಸಂಬಳ ಪಡೆಯುತ್ತಿರುವ ಶಂಕೆಯ ಮೇಲೆ 400ಕ್ಕೂ ಹೆಚ್ಚು ಶಿಕ್ಷಕರ ಮೇಲೆ ಕಣ್ಣಿಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸೊಳ್ಳೆ ಬತ್ತಿಯಿಂದ ಹೊತ್ತಿಕೊಂಡ ಬೆಂಕಿ; ನಿದ್ದೆಯಲ್ಲಿದ್ದ ಆರು ಮಂದಿ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts