More

  ದರ್ಶನ್ ಹುಟ್ಟು ಹಬ್ಬಕ್ಕೆ ಬಿಗ್ ಬಾಸ್ ಖ್ಯಾತಿಯ ಇಶಾನಿ ಸ್ಪೆಷಲ್ ಗಿಫ್ಟ್..!

  ದರ್ಶನ್ ಅವರ ಹುಟ್ಟುಹಬ್ಬದಂದು ಬಿಗ್​ಬಾಸ್​ ಖ್ಯಾತಿಯ ಇಶಾನಿ ಹೊಸ ಸಾಂಗ್​​ ಒಂದನ್ನ ರಿಲೀಸ್​ ಮಾಡಲಿದ್ದಾರಂತೆ. ದರ್ಶನ್​ ಹುಟ್ಟುಹಬ್ಬ ಅಗಿರೋದ್ರಿಂದ ದರ್ಶನ್​ ಅವರ ಮೇಲೆಯೇ ಈ ಹಾಡನ್ನ ರಚಿಸಲಾಗಿದೆಯಂತೆ.

  ಈಗಾಗಲೇ ಅಭಿಮಾನಿಗಳಿಗೆ ದರ್ಶನ್ ಸಂದೇಶವೊಂದನ್ನು ರವಾನಿಸಿದ್ದು, ಯಾರೂ ಕೇಕ್ ಮತ್ತು ಬ್ಯಾನರ್ ಕಟ್ಟದಂತೆ ಹೇಳಿದ್ದಾರೆ. ಜೊತೆಗೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ದವಸ ಧಾನ್ಯಗಳನ್ನು ಉಡುಗೊರೆಯಾಗಿ ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

  ಫೆಬ್ರವರಿ 16ರಂದು ದರ್ಶನ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

  ಈ ಬಾರಿ ಕೂಡ ದರ್ಶನ್ ಬರ್ತ್‌ಡೇ ಜೋರಾಗಿಯೇ ಆಚರಿಸುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡಿದ್ದಾರೆ.

  ಒಂದೆಡೆ ದರ್ಶನ್​ ಹುಟ್ಟುಹಬ್ಬದ ಖುಷಿ ಆದ್ರೆ, ಮತ್ತೊಂದೆಡೆ ಕೆಡಿ ಡೈರೆಕ್ಟರ್ ಜೋಗಿ ಪ್ರೇಮ್ ಸಾರಥ್ಯದಲ್ಲಿ ದರ್ಶನ್ ಸಿನಿಮಾ ಅನೌನ್ಸ್ ಆಗಿದೆ. ಆ ಸಿನಿಮಾದ ಟೈಟಲ್ ಕೂಡ ದರ್ಶನ್​ ಹುಟ್ಟು ಹಬ್ಬದ ದಿನದಂದೇ ರಿವೀಲ್​ ಮಾಡಲಅಗುತ್ತೆ ಎಂದು ಹೇಳಲಾಗುತ್ತಿದೆ.

  ಸದ್ಯ ಈ ಬಾರಿಯೂ ದರ್ಶನ್​ ಹುಟ್ಟುಹಬ್ಬ ಜೋರಾಗಿಯೇ ಆಚರಿಸಲಾಗುತ್ತೆ ಎಂದು ಹೇಳಲಾಗುತ್ತಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts