More

    ಮಂಗಳೂರು ಮೀನುಗಾರರ ಬಲೆಗೆ ಬಿದ್ದ 300 ಕೆಜಿ ತೂಕದ ಮುರು! ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ

    ದಕ್ಷಿಣ ಕನ್ನಡ: ಮತ್ಸ್ಯ ಬೇಟೆಗೆಂದು ಕಡಲಿಗೆ ಇಳಿದ ಮಂಗಳೂರಿನ ಮೀನುಗಾರರಿಗೆ ಅಚ್ಚರಿ ಕಾದಿತ್ತು. ಇದುವರೆಗೂ ಸಿಗದೇ ಇರುವಷ್ಟು ದೊಡ್ಡ ಗಾತ್ರದ ಮೀನೊಂದು ಬಲೆಗೆ ಬಿದ್ದಿತ್ತು. ಹಾಗಾದರೆ ಆ ಮೀನು ಯಾವುದು? ಎಷ್ಟು ಬೆಲೆಗೆ ಮಾರಾಟ ಆಯಿತು? ಅಂತ ಕೇಳ್ತೀರಾ? ಹಾಗಾದರೆ ಮುಂದೆ ಓದಿ.

    ಮೀನನ್ನು ಪ್ಲ್ಯಾಸ್ಟಿಕ್ ಕವರ್‌ನಲ್ಲಿ ಅಥವಾ ಬುಟ್ಟಿಯಲ್ಲಿ ತುಂಬಿಕೊಂಡು ಹೋಗುವುದನ್ನು ಗಮನಿಸಿರಬಹುದು ಆದರೆ, ಟೆಂಪೋದಲ್ಲಿ ಒಂದೇ ಮೀನನ್ನು ತುಂಬಿಕೊಂಡು ಹೋಗುವುದನ್ನು ಎಲ್ಲಾದರೂ ನೋಡಿದ್ದೀರಾ? ಅದು ಕೂಡ ಮುರು ಮೀನನ್ನು! ಇಲ್ಲ ಅಲ್ವಾ? ಯಾಕೆಂದರೆ ಮುರು ಮೀನು ಹೆಚ್ಚೇಂದ್ರೆ ಅರ್ಧ ಕೆಜಿ ಇರುವುದನ್ನು ನೋಡಿರಬಹುದು ಆದರೆ ಈ ಮೀನು ಬರೋಬ್ಬರಿ 300 ಕೆಜಿ ಇದೆ.

    ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಈ ಮುರು ಮೀನು ಸಿಕ್ಕಿದೆ. ಸುಮಾರು 300 ಕೆಜಿಯಷ್ಟು ತೂಕವಿರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಎತ್ತಲು ಹರಸಾಹಸ ಪಟ್ಟಿದ್ದಾರೆ.

    ಇದನ್ನೂ ಓದಿ: ಏಷ್ಯಾಡ್​ನಲ್ಲಿ ಪದಕದೊಂದಿಗೆ ಒಲಿಂಪಿಕ್ಸ್​ ಟಿಕೆಟ್​ ಕೂಡ ಒಲಿಸಿಕೊಂಡ ಬಾಕ್ಸರ್​ ನಿಖತ್​ ಜರೀನ್​

    ಸಾಮಾನ್ಯವಾಗಿ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತದೆ‌. ಆದರೆ ಇಷ್ಟು ದೊಡ್ಡ ಗಾತ್ರದ ಮುರು ಮೀನು ಕಾಣಲು ಸಿಗುವುದು ವಿರಳ. ಹೀಗೆ ಬಲೆಗೆ ಸಿಕ್ಕಿದ ಬೃಹತ್ ಗಾತ್ರದ ಮೀನು ಕೆಜಿಗೆ 200 ರೂಪಾಯಿಗೆ ಮಾರಾಟವಾಗಿದೆಯಂತೆ. ಅಲ್ಲಿಗೆ 300 ಕೆಜಿ ಮೀನಿಗೆ 60 ಸಾವಿರ ರೂಪಾಯಿ ಆಯಿತು. ಒಂದೇ ಬಾರಿಗೆ ಇಷ್ಟು ಬೆಲೆಗೆ ಮಾರಾಟವಾಗಿರುವುದು ಮೀನುಗಾರರ ಮುಖದಲ್ಲಿ ಸಂತಸ ತರಿಸಿದೆ.

    ಸಾಮಾನ್ಯವಾಗಿ ಸಣ್ಣ ಗಾತ್ರದ ಮುರು ಮೀನನ್ನು ನೋಡಿದ ಗ್ರಾಹಕರಿಗೆ ಹಾಗೂ ಮೀನುಗಾರರಿಗೆ 300 ಕೆಜಿ ತೂಕದ ಮುರು ಮೀನು ಅಚ್ಚರಿ ಮೂಡಿಸಿದೆ. ಬಲೆ ಹಾಕಿದ ಮೀನುಗಾರರಿಗೆ ಇದೀಗ ಬಂಪರ್ ಹೊಡೆದಿದ್ದು, ಎಲ್ಲರು ದಿಲ್​ಖುಷ್​ ಆಗಿದ್ದಾರೆ.

    ಏಷ್ಯಾಡ್​ನಲ್ಲಿ ಭಾರತಕ್ಕೆ ತಲಾ 4 ಪದಕ ಗೆದ್ದುಕೊಟ್ಟ ಇಶಾ ಸಿಂಗ್​, ಐಶ್ವರಿ ಪ್ರತಾಪ್​

    ಕಹಿಯಾಗುತ್ತಿದೆ ಸಕ್ಕರೆ ಕಾದಿದೆ ನಿಷೇಧ ಬರೆ

    ಮುಂದಿನ ಐಪಿಎಲ್ ಆವೃತ್ತಿಗೆ ನೂತನ ನಿರ್ದೇಶಕ ನೇಮಕ ಮಾಡಿದ ಆರ್‌ಸಿಬಿ ಫ್ರಾಂಚೈಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts