More

    ಕೇಂದ್ರ ಬಜೆಟ್ 2020ರ ಪ್ರಮುಖ ಘೋಷಣೆಗಳಿವು…

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಎರಡನೇ ಅವಧಿಯ ಆಡಳಿತ ರೂಪುರೇಷೆಯಾದ ಬಹುನಿರೀಕ್ಷಿತ ಬಜೆಟ್​ ಅನ್ನು ದೇಶದ ಜನತೆಯ ಮುಂದೆ ಶನಿವಾರ ಪ್ರಸ್ತುತ ಪಡಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸುದೀರ್ಘ ಎರಡೂವರೆ ಗಂಟೆಗಳ ಕಾಲ ಬಜೆಟ್​ ಮಂಡನೆ ಮಾಡಿದ್ದಾರೆ. ಮಂದಗತಿಯಲ್ಲಿದ್ದ ಆರ್ಥಿಕತೆ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದುಕೊಂಡಿದ್ದ ಈ ಬಾರಿಯ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಬಹುದೊಡ್ಡ ಘೋಷಣೆಗಳೊಂದಿಗೆ ಜನಸಾಮಾನ್ಯರು ಹಾಗೂ ತೆರಿಗೆದಾರರಿಗೆ ಭಾರಿ ಉಡುಗೊರೆಯನ್ನು ನೀಡಿದೆ.

    ಬಜೆಟ್​ನಲ್ಲಿ ಮಂಡನೆಯಾದ ಪ್ರಮುಖ ಘೋಷಣೆಗಳು ಈ ಕೆಳಕಂಡಂತಿದೆ.
    ಮೊದಲನೆಯದಾಗಿ ತೆರಿಗೆಯಲ್ಲಿ ಭಾರಿ ಸುಧಾರಣೆ
    ತೆರಿಗೆಯಲ್ಲಿ ಭಾರಿ ಬದಲಾವಣೆ ತರುವ ಮೂಲಕ ಸರ್ಕಾರ ತೆರಿಗೆದಾರರಿಗೆ ಬಿಗ್​ ಗಿಫ್ಟ್ ನೀಡಿದೆ. ಐದು ಲಕ್ಷ ರೂ. ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಸರ್ಕಾರ ಹೇಳಿದೆ. ಇದರೊಂದಿಗೆ 5 ರಿಂದ 7.5 ಲಕ್ಷ ರೂ.ವರೆಗೆ ಶೆ. 10, 7.5 ಲಕ್ಷದಿಂದ 10 ಲಕ್ಷ ರೂ.ವರೆಗೂ ಶೇ. 15, 10 ಲಕ್ಷದಿಂದ 12.5 ಲಕ್ಷ ರೂ.ವರೆಗೂ ಶೇ 20, 12.5 ಲಕ್ಷದಿಂದ 15 ಲಕ್ಷದವರೆಗೂ ಶೇ. 25 ಮತ್ತು 15 ಲಕ್ಷ ರೂ.ಗಿಂತ ಮೇಲ್ಪಟ್ಟ ಆದಾಯಕ್ಕೆ ಶೆ.30 ರಷ್ಟು ತೆರಿಗೆ ತೆರಿಗೆ ವಿಧಿಸಿದೆ.

    ಬ್ಯಾಂಕಿಂಗ್​ ಮತ್ತು ಜೀವ ವಿಮಾ ಕ್ಷೇತ್ರದ ಸುಧಾರಣೆಗೆ ಕ್ರಮ
    ಖಾಸಗಿ ಬ್ಯಾಂಕ್​ಗಳಲ್ಲಿ ಠೇವಣಿದಾರರ ಹಣ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದು, ಠೇವಣಿದಾರರ ವಿಮಾ ಮೊತ್ತವನ್ನು 1 ಲಕ್ಷದಿಂದ 5 ಲಕ್ಷ ರೂ.ವರೆಗೆ ಏರಿಕೆ ಮಾಡಿದೆ.

    ಸಾಮಾಜಿಕ ಕಲ್ಯಾಣ
    ಸಾಮಾಜಿ ಕಲ್ಯಾಣ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ 85 ಸಾವಿರ ಕೋಟಿ ರೂ., ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ 53,700 ಕೋಟಿ ರೂ. ಹಾಗೂ ಮಹಿಳಾ ಸಬಲೀಕರಣ ಯೋಜನೆಗಳಿಗೆ 28,600 ಕೋಟಿ ರೂ. ಅನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದೆ.

    ರೈತರ ಅಭಿವೃದ್ಧಿಗೆ ಪ್ರಮುಖ ಘೋಷಣೆ
    ಬೇಗ ಕೊಳೆಯುವ ವಸ್ತಗಳನ್ನು ಆದಷ್ಟು ಬೇಗ ಸಾಗಿಸಲು ರೈತರಿಗಾಗಿ ಕಿಸಾನ್​ ರೈಲು ಯೋಜನೆ. ಈ ಯೋಜನೆಯ ರೈಲುಗಳಲ್ಲಿ ವಸ್ತಗಳು ಕೊಳೆಯದಂತೆ ತಡೆಯಲು ರೆಫ್ರಿಜರೇಟರ್​ ವ್ಯವಸ್ಥೆ ಅಳವಡಿಸಲಾಗುತ್ತದೆ. ಇದರೊಂದಿಗೆ “ಕೃಷಿ ಉಡಾನ್​” ವಿಮಾನ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

    ಆರೋಗ್ಯ ವಲಯಕ್ಕೆ ಹೆಚ್ಚು ಒತ್ತು
    ಬಜೆಟ್​ನಲ್ಲಿ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಒಟ್ಟು 69 ಸಾವಿರ ಕೋಟಿ ರೂ.ಗಳನ್ನು ಆರೋಗ್ಯ ವಲಯಕ್ಕೆ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ 112 ಜಿಲ್ಲೆಗಳಲ್ಲಿ ಸುಸಜ್ಜಿತ ಆಸ್ಪತ್ರಗಳ ನಿರ್ಮಾಣ ಹಾಗೂ ಎಲ್ಲ ಜಿಲ್ಲೆಗಳಿಗೂ ಜನೌಷಧಿ ಕೇಂದ್ರ ವಿಸ್ತರಣೆ ಮತ್ತು 2022ರೊಳಗೆ ಕ್ಷಯರೋಗ ಮುಕ್ತ ದೇಶ ಗುರಿಯನ್ನು ಹೊಂದಲಾಗಿದೆ.

    ರೈಲ್ವೆ ಸುಧಾರಣೆ
    ಪ್ರವಾಸೋದ್ಯಮ ಸ್ಥಳಗಳಿಗೆ ಹೆಚ್ಚು ತೇಜಸ್​ ರೈಲುಗಳ ಸಂಪರ್ಕಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಇದರೊಂದಿಗೆ 550 ರೈಲುಗಳಲ್ಲಿ ಹೈಫೈ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.

    ಮೂಲಭೂತ ಸೌಕರ್ಯ
    ಖಾಸಗಿ ಸಹಭಾಗಿತ್ವದಲ್ಲಿ 5 ಹೊಸ ಸ್ಮಾರ್ಟ್​ ಸಿಟಿಗಳ ನಿರ್ಮಾಣ. 2023ರ ಒಳಗೆ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಸಂಪೂರ್ಣ ಹಾಗೂ 2024ರ ಒಳಗೆ 100 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆಯ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

    ಖಾಸಗೀಕರಣ
    ಈ ಬಜೆಟ್​ನಲ್ಲಿ ಖಾಸಗೀಕರಣದ ಎರಡು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಸರ್ಕಾರಿ ಸ್ವಾಮ್ಯ ಜೀವ ವಿಮಾ ನಿಗಮ(ಎಲ್​ಐಸಿ) ಮತ್ತು ಐಡಿಬಿಐ ಬ್ಯಾಂಕ್​ ಖಾಸಗೀಕರಣಕ್ಕೆ ಸರ್ಕಾರ ನಿರ್ಧಾರ ಮಾಡಿದ್ದು, ಎರಡರಲ್ಲಿರುವ ತನ್ನ ಷೇರುಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಇದರ ಪ್ರಕ್ರಿಯೆ ಆರಂಭವಾಗಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts