More

    ಭೂತಾನ್ ಅಡಕೆ ಭಾರತಕ್ಕೆ ಬೇಡ; ಬೆಳೆಗಾರರು, ವರ್ತಕರ ಪ್ರತಿಭಟನೆ

    ಶಿವಮೊಗ್ಗ: ಭೂತಾನ್‌ನಿಂದ ಅಡಕೆ ಆಮದು ಮಾಡಿಕೊಳ್ಳಲು ನೀಡಿರುವ ಅನುಮತಿ ಹಿಂತೆಗೆದುಕೊಳ್ಳಬೇಕು, ಎಲೆಚುಕ್ಕೆ
    ರೋಗದಿಂದ ಸಂಭವಿಸಿರುವ ಹಾನಿಗೆ ಪರಿಹಾರ ನೀಡಬೇಕು ಹಾಗೂ ಶೀಘ್ರವೇ ಶಿವಮೊಗ್ಗದಲ್ಲಿ ಅಡಕೆ ಸಂಶೋಧನಾ ಕೇಂದ್ರ
    ಆರಂಭಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ವಿವಿಧ ಅಡಕೆ ಸಹಕಾರ
    ಸಂಘಗಳು ಹಾಗೂ ಬೆಳೆಗಾರ ಸಂಘಟನೆಗಳ ಪ್ರಮುಖರು ಬೃಹತ್ ಪ್ರತಿಭಟನೆ ನಡೆಸಿದರು.
    ನಗರದ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ರೈತರು, ಕೇಂದ್ರ ಮತ್ತು ರಾಜ್ಯ
    ಸರ್ಕಾರಗಳ ಧೋರಣೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು.
    ಭೂತಾನ್‌ನಿಂದ ಯಾವುದೇ ಸುಂಕವಿಲ್ಲದೆ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಕೆಯನ್ನು ಪ್ರತಿವರ್ಷ ಆಮದು ಮಾಡಿಕೊಳ್ಳಲು
    ಅನುಕೂಲವಾಗುವಂತೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಇದು ಮುಂದಿನ ದಿನಗಳಲ್ಲಿ 50 ಸಾವಿರ ಮೆಟ್ರಿಕ್ ಟನ್
    ತಲುಪಬಹುದು. ಇದರಿಂದ ದೇಸಿ ಅಡಕೆ ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು ತಕ್ಷಣವೇ ಆಮದು ನೀತಿ ರದ್ದು
    ಪಡಿಸಬೇಕೆಂದು ಆಗ್ರಹಿಸಿದರು.
    ಎಚ್.ಆರ್.ಬಸವರಾಜಪ್ಪ, ಎಚ್.ಎನ್.ವಿಜಯದೇವ್, ಸಿ.ಮಲ್ಲೇಶಪ್ಪ, ತೀ.ನ.ಶ್ರೀನಿವಾಸ್, ಕೆ.ಪಿ.ಶ್ರೀಪಾಲ್, ಹಿಟ್ಟೂರು ರಾಜು, ಟಿ.ಎಂ ಚಂದ್ರಪ್ಪ, ತರೀಕೆರೆ ಮಹೇಶ್, ಈಶಣ್ಣ, ಎಸ್.ಶಿವಮೂರ್ತಿ, ಇ.ಬಿ ಜಗದೀಶ್, ಕೆ.ರಾಘವೇಂದ್ರ, ಪಿ.ಡಿ.ಮಂಜಪ್ಪ, ಡಿ.ಎಚ್.ರಾಮಚಂದ್ರಪ್ಪ, ಎಂ.ಮಹೇಶ್ವರಪ್ಪ, ಹುಲಿಮಟ್ಟಿ ಜಯಣ್ಣ, ಸಿ.ಚಂದ್ರಪ್ಪ, ಜ್ಞಾನೇಶ್, ಜಿ.ಎನ್.ಪಂಚಾಕ್ಷರಿ,  ಜಿ.ಬಿ.ರವಿ, ಜಿ.ಬಿ.ರವೀಂದ್ರ, ಸುಗಂಧರಾಜು, ಶಿವಮೂರ್ತಪ್ಪ, ಪರಮೇಶ್ವರಪ್ಪ, ಎಂ.ಮಂಜಪ್ಪ ಕಾಚಿಕೊಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts