More

    ಭೀಮಾತೀರದ ಮಹಾದೇವನ ಕೊಲ್ಲಲು ಬಂದದ್ದು 20 ಜನರ ಗ್ಯಾಂಗ್​! ಬೆಚ್ಚಿಬೀಳಿಸುತ್ತೆ ಗುಂಡಿನ ದಾಳಿ

    ವಿಜಯಪುರ: ತಾಲೂಕಿನ ಅರಕೇರಿ ಬಳಿಯ ಕನ್ನಾಳ ಕ್ರಾಸ್​ ಬಳಿ ಸೋಮವಾರ ಮಧ್ಯಾಹ್ನ ಭೀಮಾತೀರದ ರೌಡಿಶೀಟರ್​ ಮಹಾದೇವ ಸಾಹುಕಾರ ಮೇಲಿನ ಗುಂಡಿನ ದಾಳಿಯಲ್ಲಿ ಪೆಟ್ರೋಲ್​ ಬಾಂಬ್​, ಜೀವಂತ ಗುಂಡುಗಳು, ಮಚ್ಚು, ಲಾಂಗ್, ಟಿಪ್ಪರ್​ ಲಾರಿ ಭಾರೀ ಸದ್ದು ಮಾಡಿದ್ದವು.

    ಘಟನೆಯಲ್ಲಿ ಸಾಹುಕಾರನ ಕಾರು​ ಚಾಲಕ ಲಕ್ಷ್ಮಣ ದಿಂಡೋರೆಗೆ ಒಂದು ಗುಂಡು ತಗುಲಿತ್ತು. ಕಾಲು ಕೂಡ ತುಂಡಾಗಿತ್ತು. ತೀವ್ರ ರಕ್ತಸ್ರಾವವಾಗಿ ಲಕ್ಷ್ಮಣ(27) ಮೃತಪಟ್ಟಿದ್ದ. ಮಹಾದೇವ ಸಾಹುಕಾರನ ದೇಹಕ್ಕೆ ಗುಂಡುಗಳು ಹೊಕ್ಕಿದ್ದವು. ಮಹಾದೇವ ಸಾಹುಕಾರ ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಲಾಯಿತು. ಅಲ್ಲೇ ತೊಗರಿ ಗಿಡದಲ್ಲಿ ಅವಿತುಕುಳಿತಿದ್ದ 15-20 ಜನರ ಗ್ಯಾಂಗ್​ ಮಹಾದೇವ ಸಾಹುಕಾರನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿತ್ತು. ಕೃತ್ಯಕ್ಕೆ ಪೆಟ್ರೋಲ್​ ಬಾಂಬ್​, ಮಚ್ಚು, ಲಾಂಗ್ ಅನ್ನೂ ಬಳಸಿದ್ದರು.

    ಮಹದೇವ ಬೈರಗೊಂಡ ಸಾಹುಕಾರನ ದೇಹಕ್ಕೆ ಹೊಕ್ಕಿದ್ದ ಗುಂಡುಗಳನ್ನು ಹೊರತೆಗೆಯಲಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಇಲ್ಲವೆಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಬೆಳಗಾವಿಯ ಎಫ್​ಎಸ್​ಎಲ್​ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೂವರು ಅಧಿಕಾರಿಗಳಿದ್ದ ತಂಡಕ್ಕೆ ಎಸ್​ಪಿ ಅನುಪಮ್​ ಅಗರವಾಲ್​ ಸಾಥ್​ ನೀಡಿದರು. ಸ್ಥಳದಲ್ಲಿ ಕೆಲವು ಜೀವಂತ ಗುಂಡು ಸಿಕ್ಕಿದ್ದು ಇನ್ನುಳಿದಂತೆ ಕೆಲ ಸಾಕ್ಷಿ ಕಲೆ ಹಾಕಲಾಯಿತು. ಒಟ್ಟು ಐದು ಬೈಕ್​, ಟಿಪ್ಪರ್​, ಮಚ್ಚು-ಲಾಂಗ್​ಗಳು ಹಾಗೂ ಜೀವಂತ ಗುಂಡುಗಳನ್ನು ಜಫ್ತಿ ಮಾಡಲಾಯಿತು. ಅಲ್ಲಲ್ಲಿ ಅಡಗಿ ಕುಳಿತು ಸಂಚು ರೂಪಿಸಿದ ಕುರುಹು ಕೂಡ ಸಿಕ್ಕಿದೆ.

    ಭೀಮಾತೀರದ ಮಹಾದೇವನ ಕೊಲ್ಲಲು ಬಂದದ್ದು 20 ಜನರ ಗ್ಯಾಂಗ್​! ಬೆಚ್ಚಿಬೀಳಿಸುತ್ತೆ ಗುಂಡಿನ ದಾಳಿಉತ್ತರ ವಲಯದ ಐಜಿಪಿ ರಾವೇಂದ್ರ ಸುಹಾಸ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೂಟೌಟ್​ಗೂ ಮುನ್ನ ದುಷ್ಕರ್ಮಿಗಳು ಎಲ್ಲ ರೀತಿಯ ತಯಾರಿ ಮಾಡಿಕೊಂಡು ಬಂದಿದ್ದಾರೆ. ಒಂದು ಸಂಚು ತಪ್ಪಿದರೆ ಮತ್ತೊಂದು ಸಫಲವಾಗಬೇಕೆಂದು ಬೇರೆ ಬೇರೆ ಸ್ಥಳ ಗುರುತಿಸಿದ್ದು, ದಾಳಿ ನಂತರ ರಸ್ತೆ ಮಾರ್ಗವಾಗಿ ಬೇರೆ ಬೇರೆ ಕಡೆ ತಪ್ಪಿಸಿಕೊಂಡು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದೆಲ್ಲವೂ ಗೊತ್ತಾಗಿದೆ. ಗ್ಯಾಂಗ್​ ವಾರ್​ನಲ್ಲಿ ಸುಮಾರು 15-20 ಜನ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದರು.

    ವಿಜಯಪುರ ಮತ್ತು ಬಾಗಲಕೋಟೆಯ 1,500ಕ್ಕೂ ಅಧಿಕ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಕಲಬುರಗಿ ಮತ್ತು ವಿಜಯಪುರ ಭಾಗದಲ್ಲಿ ಹಳೇ ಗ್ಯಾಂಗ್​ ಮತ್ತೆ ಸಕ್ರಿಯಗೊಂಡಿದೆ. ಹೀಗಾಗಿ ಹಳೇ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದರು.

    ತನ್ನದೇ ಸೆಕ್ಸ್​ ವಿಡಿಯೋ ಮಾರುತ್ತಿದ್ದ ಬಸ್​ ಕಂಡಕ್ಟರ್​! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶ

    ಇಬ್ಬರು ಪತ್ನಿಯರೊಂದಿಗಿನ ಕಾಮದಾಟದ ಲೈವ್​ ದೃಶ್ಯವನ್ನೇ ಮಾರಾಟಕ್ಕಿಟ್ಟ 24ರ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts