More

    ಭೀಮಾತೀರದ ಎನ್‌ಕೌಂಟರ್ ಕೇಸ್​: ಸಿಬಿಐ ತನಿಖೆಗೆ ವಹಿಸಲು ಮೃತ ಧರ್ಮರಾಜ-ಗಂಗಾಧರನ ತಾಯಿ ಮನವಿ

    ವಿಜಯಪುರ: ಭೀಮಾತೀರದ ಕೊಂಕಣಗಾಂವದಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳು ನುಣುಚಿಕೊಂಡಿದ್ದು ಸದರಿ ಪ್ರರಕಣವನ್ನು ಸಿಒಡಿ ತನಿಖೆಗೆ ಒಳಪಡಿಸುವ ಮೂಲಕ ನ್ಯಾಯ ಒದಗಿಸಬೇಕೆಂದು ಮೃತ ಧರ್ಮರಾಜ ಹಾಗೂ ಗಂಗಾಧರ ಚಡಚಣನ ತಾಯಿ ವಿಮಲಾಬಾಯಿ ಗುರುವಾರ ಜಿಲ್ಲಾಧಿಕಾರಿ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಅ. 30, 2017 ರಂದು ಕೊಂಕಣಗಾಂವದಲ್ಲಿ ಮಗನಾದ ಧರ್ಮರಾಜ ಹಾಗೂ ಗಂಗಾಧರನನ್ನು ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಒಡಿಗೆ ಒಹಿಸಲಾಗಿತ್ತು. ಅದರಂತೆ ಸಿಒಡಿ ತಂಡ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿದೆ. ಅದರಲ್ಲಿ ಮಹಾದೇವ ಸಾಹುಕಾರ ಭೈರಗೊಂಡ, ಸಿಪಿಐ ಎಂ.ಬಿ. ಅಸೋದೆ, ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಸಿಬ್ಬಂದಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಇನ್ನೂ ಕೆಲವು ವ್ಯಕ್ತಿಗಳಾದ ಐಜಿ, ಡಿವೈಎಸ್‌ಪಿ ವಿಜಯಪುರ, ಪಿಎಸ್‌ಐ ಚಡಚಣ, ಪಿಎಸ್‌ಐ ಝಳಕಿ ಹಾಗೂ ಕೆಲವು ಪ್ರಭಾವಿ ಮಾಜಿ ಮಂತ್ರಿಗಳ ಚಿತಾವಣೆ ಮೇರೆಗೆ ಅವರ ಹೆಸರು ಕೈ ಬಿಡಲಾಗಿದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿ ಪಾರದರ್ಶಕ ತನಿಖೆ ನಡೆಸಬೇಕೆಂದು ವಿಮಲಾಬಾಯಿ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: VIDEO| ಕೆಎಸ್​ಆರ್​ಟಿಸಿ​ ಬಸ್​ಗೆ ಬೇಕಂತಲೇ ದಾರಿಬಿಡದೆ ಕುಚೇಷ್ಟೆ ಮಾಡಿದ ಬೈಕ್​ ಸವಾರನಿಗೆ ಕಾದಿತ್ತು​ ಶಾಕ್​!

    ಆರೋಪಿ ಮಹಾದೇವ ಸಾಹುಕಾರ ಭೈರಗೊಂಡಗೆ ಉಚ್ಚ ನ್ಯಾಯಾಲಯ ಸದರಿ ಪ್ರಕರಣ ಮುಗಿಯುವವರೆಗೆ ಯಾವುದೇ ಅವ್ಯವಹಾರ, ಜೀವ ಬೆದರಿಕೆ (ಧಮ್ಕಿ) ಮತ್ತಿತರ ಯಾವುದೇ ಪ್ರಕರಣಗಳಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅದನ್ನು ಮೀರಿ ಆಭರಣಗಳ ಅಂಗಡಿ ಮಾಲೀಕ ನಾಮದೇವ ಡಾಂಗೆಗೆ 5 ಕೋಟಿ ರೂ. ಹಾಗೂ 3 ಕೆಜಿ ಬಂಗಾರಕ್ಕೆ ಬೇಡಿಕೆ ಇರಿಸಿ ಕೊಡದಿದ್ದರೆ ಜೀವ ತೆಗೆಯುವ ಬೆದರಿಕೆ ಇಟ್ಟಿರುವ ಸಂಭಾಷಣೆಯ ರೆಕಾರ್ಡ್ ಕೂಡ ಇರುತ್ತದೆ. ಇಷ್ಟೆಲ್ಲಾ ಆರೋಪ ಇದ್ದರೂ ಸದರಿ ಆರೋಪಿ ಹಣ ಬಲ, ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ರಾಜಾರೋಷವಾಗಿ ಸಮಾಜದಲ್ಲಿ ತಿರುಗಾಡುತ್ತಿದ್ದಾನೆ. ಅಲ್ಲದೇ, ಗ್ರಾಮಸ್ಥರಿಗೆ ‘ಧರ್ಮರಾಜನ ಕುಟುಂಬಸ್ಥರಿಗೆ ಯಾರಾದರೂ ಸಹಾಯ ಮಾಡಿದರೆ ಖಲ್ಲಾಸ್ ಮಾಡ್ತೀನಿ, ಇನ್ನಮುಂದೆ ಭೀಮಾತೀರದಾಗ 5 ವರ್ಷಕ್ಕೊಮ್ಮೆ ಹೆಣಗೋಳ ಬೀಳ್ತಾವ್’ ಧರ್ಮರಾಜ ಮನಿ ಮಂದಿಗೆಲ್ಲ ಖಲ್ಲಾಸ್ ಮಾಡ್ತೀನಿ ನನಗ ಯಾವ ಕಾನೂನು ಏನೂ ಮಾಡ್ಕೊಳ್ಳಲ್ಲ’ ಅಂತಾ ಧಮ್ಕಿ ಹಾಕುತ್ತಿದ್ದಾನೆ. ಆದ್ದರಿಂದ ಸದರಿ ಆರೋಪಿಯಿಂದ ನಮಗೆ ಜೀವ ಭಯ ಇದ್ದು ನಮ್ಮ ಜೀವಕ್ಕೆ ಕುತ್ತು ಬಂದರೆ ಅದಕ್ಕೆ ಆರೋಪಿ ಮಹಾದೇವ ಸಾಹುಕಾರ ಹಾಗೂ ಆತನ ಸಹಚರರೇ ಕಾರಣ ಎಂದು ವಿಮಲಾಬಾಯಿ ಮನವಿಯಲ್ಲಿ ತಿಳಿಸಿದ್ದಾರೆ.

    ಮುಂದುವರಿದು ಧರ್ಮರಾಜ ಹಾಗೂ ಗಂಗಾಧರ ಚಡಚಣ ಪ್ರಕರಣದಲ್ಲಿ ತಮಗೆ ನ್ಯಾಯ ಒದಗಿಸುವಂತೆ ಗೃಹ ಮಂತ್ರಿಗ ಎಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿರುವ ವಿಮಲಾಬಾಯಿ ಸದರಿ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳು ಇರುವುದರಿಂದ ಪಾರದರ್ಶಕ ತನಿಖೆ ನಡೆಸಬೇಕೆಂದು ವಿನಂತಿಸಿಕೊಂಡಿದ್ದಾರೆ.

    ಭೀಮಾತೀರದ ಎನ್‌ಕೌಂಟರ್ ಕೇಸ್​: ಸಿಬಿಐ ತನಿಖೆಗೆ ವಹಿಸಲು ಮೃತ ಧರ್ಮರಾಜ-ಗಂಗಾಧರನ ತಾಯಿ ಮನವಿ

    ವಿಜಯಪುರ: ಭೀಮಾತೀರದ ಕೊಂಕಣಗಾಂವದಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳು ನುಣುಚಿಕೊಂಡಿದ್ದು ಸದರಿ ಪ್ರರಕಣವನ್ನು ಸಿಒಡಿ ತನಿಖೆಗೆ ಒಳಪಡಿಸುವ ಮೂಲಕ ನ್ಯಾಯ ಒದಗಿಸಬೇಕೆಂದು ಮೃತ ಧರ್ಮರಾಜ ಹಾಗೂ ಗಂಗಾಧರ ಚಡಚಣನ ತಾಯಿ ವಿಮಲಾಬಾಯಿ ಗುರುವಾರ ಜಿಲ್ಲಾಧಿಕಾರಿ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.#Bheematheeraencounter #CBI #Vijayapura #Investigation

    Posted by Vijayavani on Thursday, October 1, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts