More

  ಅಭಿವೃದ್ಧಿ ಕೆಲಗಳಿಗೆ ಹೆಚ್ಚಿನ ಒತ್ತು

  ಭರಮಸಾಗರ: ಕಾರ್ಯಕರ್ತ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

  ಇಲ್ಲಿನ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನ ಜಾಗೃತಿ, ಮಂಡಲ ಅಧ್ಯಕ್ಷರ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

  ಭರಮಸಾಗರ ಮಂಡಲದ ಅಧ್ಯಕ್ಷರಾಗಿ ಶೈಲೇಶ್ ಕುಮಾರ್ ಆಯ್ಕೆಯಾಗಿದ್ದು, ಅವರು ಕಾರ್ಯಕರ್ತರ ವಿಶ್ವಾಸ ಪಡೆದು ಉತ್ತಮ ಕೆಲಸ ಮಾಡುವ ವಿಶ್ವಾಸ ಇದೆ ಎಂದರು.

  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಮುಸ್ಲಿಮರ ದಿಕ್ಕುತಪ್ಪಿಸುತ್ತಿದ್ದಾರೆ. ಇದು ದೇಶವಾಸಿಗಳ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಬಾಂಗ್ಲಾದೇಶ, ಪಾಕಿಸ್ತಾನದಿಂದ ದೇಶದೊಳಗೆ ನುಸುಳಿ ಅರಾಜಕತೆ ಸೃಷ್ಟಿಸುವವರನ್ನು ಹೊರ ಹಾಕುವ ಕಾಯ್ದೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದು ಬೇಡ ಎಂದರು.

  ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.

  ಮಂಡಲ ನಿಕಟಪೂರ್ವ ಅಧ್ಯಕ್ಷ ಸಾಮಿಲ್ ಶಿವಣ್ಣ, ನೂತನ ಅಧ್ಯಕ್ಷ ಶೈಲೇಶ್ ಅವರಿಗೆ ಬಿಜೆಪಿ ಬಾವುಟ ಹಸ್ತಾಂತರಿಸಿದರು.

  ಸಂಸದ ಎ.ನಾರಾಯಣಸ್ವಾಮಿ, ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯರಾದ ಕಲ್ಲೇಶ್, ನಾಗೇಂದ್ರಪ್ಪ, ಶೇಖರಪ್ಪ, ಎಪಿಎಂಸಿ ಸದಸ್ಯ ಕೊಳಹಾಳು ಶರಣಪ್ಪ, ಎಚ್.ಎಂ.ಮಂಜುನಾಥ್, ವಿರೂಪಾಕ್ಷಪ್ಪ, ದ್ಯಾಮಣ್ಣ, ಮೋಹನ್ ಕುಮಾರ್, ಸಿ.ಟಿ.ಮಹಾಂತೇಶ್, ತಿಪ್ಪೇಸ್ವಾಮಿ, ನಾರಾಯಣರಾವ್, ಲೋಲಾಕ್ಷಮ್ಮ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ಸುರೇಶ್, ನಾಗರಾಜ್, ರತ್ನಮ್ಮ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts