More

    ಸಕ್ರೆಬೈಲ್ ಆನೆ ಬಿಡಾರಕ್ಕೆ ಹೊಸ ಅತಿಥಿ; ಮನೆ ಮಾಡಿದ ಸಂಭ್ರಮ

    ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರಕ್ಕೆ ಮತ್ತೊಂದು ಅತಿಥಿ ಬಂದಿದ್ದು ಬಿಡಾರದಲ್ಲಿ ಸಂಭ್ರಮ ಮನೆ ಮಾಡಿದೆ. 32 ವರ್ಷದ ಭಾನುಮತಿ ಎರಡು ದಿನಗಳ ಹಿಂದೆ ಹೆಣ್ಣು ಮರಿಗೆ ಜನ್ಮ ನೀಡಿದ್ದು ಹೊಸ ಅತಿಥಿ ಕಂಡು ಮಾವುತರು, ಕಾವಾಡಿಗಳು ಫುಲ್ ಖುಷ್ ಆಗಿದ್ದಾರೆ.
    ಹಾಸನದಲ್ಲಿ 2014ರಲ್ಲಿ ಹಿಡಿದಿದ್ದ ಈ ಆನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತರಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಒಟ್ಟು ಮೂರು ಮರಿಗಳಿಗೆ ಭಾನುಮತಿ ಜನ್ಮ ನೀಡಿದ್ದಾಳೆ. ಗುರುವಾರ ರಾತ್ರಿ ಪ್ರಸವ ವೇದನೆಯಿಂದ ಕ್ರಾಲ್ ಸಮೀಪ ಬಂದಿರುವ ಭಾನುಮತಿ ಮರಿಗೆ ಜನ್ಮ ನೀಡಿದ್ದು, ಬಿಡಾರದಲ್ಲಿ ಖುಷಿ ವಾತಾವರಣವಿದೆ.
    ಖುಷಿ ಬೆನ್ನಲ್ಲೆ ಆತಂಕ ಶುರು: ಭಾನುಮತಿ ಮರಿಗೆ ಜನ್ಮ ನೀಡಿರುವುದು ಒಂದೆಡೆ ಸಂಭ್ರಮ ಮನೆ ಮಾಡಿದ್ದರೆ, ಮತ್ತೊಂದೆಡೆ ಆತಂಕವನ್ನೂ ಮೂಡಿಸಿದೆ. ಅದಕ್ಕೆ ಕಾರಣ ಇದು ಅವಧಿಪೂರ್ವ ಹೆರಿಗೆ. ಜತೆಗೆ ಭಾನುಮತಿಗೆ ಹಾಲು ಉತ್ಪತ್ತಿ ಆಗುತ್ತಿಲ್ಲ. ಇದೇ ಕಾರಣಕ್ಕೆ ಮೊದಲೆರಡು ಮರಿಗಳನ್ನು ಭಾನುಮತಿ ಕಳೆದುಕೊಂಡಿದೆ.
    ಮೊದಲ ದಿನದಿಂದಲೇ ಬಾಟಲ್ ಹಾಲು ನೀಡಲಾಗುತ್ತಿದೆ. ಸಾಮಾನ್ಯವಾಗಿ ಆನೆಗಳಿಗೆ 22 ತಿಂಗಳಿಗೆ ಡೆಲವರಿ ಆಗುತ್ತದೆ. ಆದರೆ ಭಾನುಮತಿಗೆ 2-3 ತಿಂಗಳ ಮೊದಲೇ ಹೆರಿಗೆಯಾಗಿದೆ. ಮರಿಗೆ ಹಾಲು ಕೊಡಲು ನಿರಾಕರಣೆ ಮಾಡುತ್ತಿದೆ. ಇದೀಗ ಈ ಮರಿಗೆ ಸಿಬ್ಬಂದಿ ಆರೈಕೆ ಮಾಡುತ್ತಿದ್ದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ವನ್ಯಜೀವಿ ವಿಭಾಗದ ಪಶು ವೈದ್ಯ ಡಾ. ಎಸ್.ವಿನಯ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts