ಭಗತ್​ಸಿಂಗ್ ಭಾವಚಿತ್ರ ಅದ್ದೂರಿ ಮೆರವಣಿಗೆ

ಕುಂದಗೋಳ: ಕ್ರಾಂತಿಕಾರಿ ಭಗತಸಿಂಗ್ ಜಯಂತಿ ನಿಮಿತ್ತ ಪಟ್ಟಣದ ಶಿವಾಜಿ ನಗರ ಕಿಲ್ಲಾ ಓಣಿಯ ಹರಭಟ್ಟ ಹೈಸ್ಕೂಲ್ ಬಳಿ ಮಂಗಳವಾರ ಭಗತಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಜಯಂತ್ಯುತ್ಸವ ಆಚರಿಸಲಾಯಿತು.

ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜ, ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಕೆಪಿಸಿಸಿ ಸದಸ್ಯ ಅರವಿಂದ ಕಟಗಿ, ನಿಂಗಪ್ಪ ಗಂಗಾಯಿ, ಪಟ್ಟಣ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ, ಪ್ರಕಾಶ ಕೊಕಾಟೆ ಅವರು ಭಗತ್​ಸಿಂಗ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆ ಚಾಲನೆ ನೀಡಿದರು.

ಪಟ್ಟಣದ ಹುಬ್ಬಳ್ಳಿ- ಲಕ್ಷ್ಮೀಶ್ವರ ರಸ್ತೆ ಮಾರ್ಗವಾಗಿ ಕಾಳಿದಾಸನಗರ ಮಾರ್ಕೆಟ್ ರಸ್ತೆ, ಮೂರಅಂಗಡಿ ಕೂಟ್, ಮಾರುಕಟ್ಟೆ, ಪಂಚಗ್ರಹ ಹಿರೇಮಠ, ದೇಶಪಾಂಡೆ ಓಣಿ, ದುರ್ಗಾದೇವಿ ಓಣಿ ಸೇರಿ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಮೆರವಣಿಗೆಯು ಸಂಚರಿಸಿ ಮರಳಿ ಕಿಲ್ಲಾ ಓಣಿಯಲ್ಲಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ಕ್ರಾಂತಿಕಾರಿ ಭಗತಸಿಂಗ್ ಸಂಘದ ಅಧ್ಯಕ್ಷ ವಿಕಾಸ ಕಿರೇಸೂರ, ಉಪಾಧ್ಯಕ್ಷ ಆಕಾಶ ಚವ್ಹಾಣ, ರವಿಗೌಡ ಪಾಟೀಲ, ಮಹಾಂತೇಶ ಶ್ಯಾಗೋಟಿ, ಬಸವರಾಜ ನಾವಳ್ಳಿ, ಭರಮಗೌಡ ದ್ಯಾಮನಗೌಡ್ರ, ನಾಗರಾಜ ದೇಶಪಾಂಡೆ, ಸದಸ್ಯರಾದ ಭರತ ಕಟಗಿ, ಪ್ರವೀಣ ಕಿರೇಸೂರ, ಹರೀಶ ಕೊನೇರಿ, ರವಿ ಶಿಂಧೆ, ಆನಂದ ಕಟಗಿ, ಪ್ರಶಾಂತ ಪಲ್ಲೇದ, ಅರುಣ ಹೊಸಮನಿ, ಮನೋಜ್ ಗೌಳಿ, ಅಭಿಷೇಕ ಛಾಯಾನಗೌಡ್ರ, ಕಾರ್ತಿಕ ಹಡಪದ, ಶಿವಾನಂದ ಕೂಡವಕ್ಕಲ್, ದಾದಾಪೀರ ಟಪಾಲ್ ಸೇರಿ ಕ್ರಾಂತಿಕಾರಿ ಭಗತಸಿಂಗ್ ಸಂಘದ ಸದಸ್ಯರಿದ್ದರು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…