More

    ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಬಿಜಿಎಸ್ ಪಿಯು ಕಾಲೇಜು

    ಅರಕಲಗೂಡು : ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪಟ್ಟಣದ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವಲ್ಲಿ ಸಫಲವಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಹೊಡೆನೂರು ಮಹೇಶ್ ತಿಳಿಸಿದರು.

    ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.

    2006ರಲ್ಲಿ ಪ್ರಾರಂಭವಾದ ಕಾಲೇಜು ಆರಂಭದಲ್ಲಿ ಶೇ.65 ಫಲಿತಾಂಶ ನೀಡಿದ್ದು, ಪ್ರಸ್ತುತ ಶೇ.100 ಫಲಿತಾಂಶ ನೀಡುವ ಎತ್ತರಕ್ಕೆ ಬೆಳೆದಿದೆ. ಈ ಬಾರಿ ಕಾಲೇಜಿನ ಒಟ್ಟಾರೆ ಫಲಿತಾಂಶ ಶೇ.99.5 ಆಗಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 242 ವಿದ್ಯಾರ್ಥಿಗಳಲ್ಲಿ 239 ಜನರು ತೇರ್ಗಡೆಯಾಗಿದ್ದು ಶೇ.99 ಫಲಿತಾಂಶ ದೊರೆತಿದೆ. 107 ಅತ್ಯುನ್ನತ ದರ್ಜೆ, 126 ಪ್ರಥಮ ಹಾಗೂ 6 ಜನ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲ 78 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ. 100 ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ಆರ್.ವೈ. ಐಶ್ವರ್ಯಾ 583 ಹಾಗೂ ವಾಣಿಜ್ಯ ವಿಭಾಗದಲ್ಲಿ ಮಮತಾ ಬಿ. ಸೋಲಂಕಿ 582 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ ಎಂದರು. ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಾದ ಐಶ್ವರ್ಯಾ, ಜಿ.ಎಸ್.ಉದಯ್, ಎನ್.ವಿ.ಸಹನಾ, ಕೆ.ಎಂ. ಜಮುನಾ ಅವರನ್ನು ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts