More

    ಬರ್ಲಿನ್ ವಿಶೇಷ ಒಲಿಂಪಿಕ್ಸ್ ಪದಕ ವಿಜೇತರಿಗೆ ಚಿಕ್ಕೋಡಿಯಲ್ಲಿ ಸನ್ಮಾನ: ರಾಜ್ಯದ 4 ವಿಭಾಗಗಳಲ್ಲಿ ತರಬೇತಿ ಕೇಂದ್ರ ಸ್ಥಾಪನೆ

    ಚಿಕ್ಕೋಡಿ: ಬುದ್ಧಿಮಾಂಧ್ಯ ಮಗುವಿನಲ್ಲಿಯ ಕ್ರೀಡೋತ್ಸಾಹವನ್ನು ಗುರುತಿಸಿ ಅವಕಾಶ ಕೊಡುವುದೇ ವಿಶೇಷ ಓಲಿಂಪಿಕ್ಸ್ ಭಾರತ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ. ರಾಷ್ಟ್ರೀಯ ಅಧ್ಯ ಮಲ್ಲಿಕಾ ನಡ್ಡಾ ನೇತೃತ್ವದಲ್ಲಿ ವಿಶೇಷ ಒಲಿಂಪಿಕ್ಸ್ ಭಾರತ ಸಂಸ್ಥೆಯು ಹೆಮ್ಮರವಾಗಿ ಬೆಳೆಯುತ್ತಿದೆ. ಆರ್ ಸಿ ಖನ್ನಾ ಕನಸಾಗಿರುವ ವಿಶೇಷ ಒಲಿಂಪಿಕ್ಸ್ ಬುದ್ಧಿಮಾಂಧ್ಯ ಮಕ್ಕಳಿಗಾಗಿಯೇ ಇರುವುದಂತಹದ್ದು. ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ 4 ವಿಭಾಗಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು. ಮೊದಲ ಹಂತವಾಗಿ ಬೆಳಗಾವಿಯಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು, ಜೊಲ್ಲೆ ಗ್ರೊಪ್ ಇದಕ್ಕೆ ಸಹಾಯ ಮಾಡುತ್ತಿದೆ ಎಂದು ವಿಶೇಷ ಒಲಿಂಪಿಕ್ಸ್ ಭಾರತ ಕರ್ನಾಟಕ ರಾಜ್ಯದ ಅಧ್ಯಕ್ಷೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
    ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಬುದ್ಧಿಮಾಂಧ್ಯ ಮಗು ಹೊಂದಿದ ತಂದೆ-ತಾಯಿ, ಕುಟುಂಬಪಡುವ ವೇದನೆ ಅನುಭವಿಸಿದವರಿಗೇ ಗೊತ್ತು. ಹಾಗಾಗಿ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಇಂತಹ ಮಕ್ಕಳ ಸಮೀಕ್ಷೆ ಕಾರ್ಯ ಬಾಕಿ ಉಳಿದಿದ್ದು, ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
    2023ರ ಸೆಪ್ಬೆಂಬರ್ 26 ರಂದು ಬರ್ಲಿನ್‌ನಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ಭಾರತ ತಂಡದ ರಾಜ್ಯದ 9 ಜನ ಭಾಗಿಯಾಗಿ, 13 ಚಿನ್ನ, 2 ಬೆಳ್ಳಿ ಪದಕ ಜಯಿಸಿದ್ದಾರೆ, ಪದಕ ವಿಜೇತರಿಗೆ ಅ. 8 ರಂದು ಪಟ್ಟಣದ ಆರ್‌ಡಿ ಹೈಸ್ಕೂಲ್ ಮೈದಾನದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
    ನಿರ್ದೇಶಕ ಅಮರೇಂದರ್, ಭೌದ್ಧಿಕ ತಜ್ಞೆ ಶಾಂತಲಾ ಭಟ್, ಹೀರಾವತಿ ಸೇರಿ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts