More

    ಬಹುದೊಡ್ಡ ಪ್ರಮಾದ ಮಾಡಿ, ಬಳಿಕ ಭಾರತೀಯ ಹಿಂದುಗಳ ಕ್ಷಮೆ ಕೋರಿದ ಇಸ್ರೇಲ್​ ಪ್ರಧಾನಿಯ ಹಿರಿಯ ಮಗ…

    ಜೆರುಸೆಲಂ: ಭಾರತೀಯ ಹಿಂದುಗಳ ಧಾರ್ಮಿಕ ಭಾವನೆಗೆ ಅವಮಾನ ಮಾಡಿದ್ದ ಇಸ್ರೇಲ್​ ಪ್ರಧಾನಮಂತ್ರಿ ಬೆಂಜಮಿನ್​ ನೇತನ್ಯಾಹು ಅವರ ಹಿರಿಯ ಪುತ್ರ ಯೇರ್​ ನೇತನ್ಯಾಹು ಇದೀಗ ಕ್ಷಮೆ ಕೇಳಿದ್ದಾರೆ. ಟ್ವಿಟರ್​ನಲ್ಲಿ ಕ್ಷಮೆ ಕೋರಿದ ಅವರು, ಜೈ ಹಿಂದ್​…ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.

    ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ತನ್ನ ತಂದೆಯ ರಾಜಕೀಯ ನೀತಿಗಳನ್ನು ಸದಾ ಸಮರ್ಥಿಸಿಕೊಳ್ಳುವ ಯೇರ್​, ಭ್ರಷ್ಟಾಚಾರ ಆರೋಪದಿಂದ ತನ್ನ ಅಪ್ಪ ಖಂಡಿತ ಮುಕ್ತರಾಗುತ್ತಾರೆ. ಅವರು ನಿರಪರಾಧಿ ಎಂದು ಸಾಬೀತಾಗುತ್ತದೆ ಎಂದು ಹೇಳುವ ಭರದಲ್ಲಿ ದೇವಿ ದುರ್ಗಾಮಾತೆಯನ್ನು ಅವಮಾನಿಸಿದ್ದರು.

    ಜು.26ರಂದು ಒಂದು ಮೆಮೆಯನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ದುರ್ಗಾಮಾತೆಯ ದೇಹಕ್ಕೆ ತನ್ನ ತಂದೆ ಬೆಂಜಮಿನ್​ ನೇತನ್ಯಾಹು ವಿರುದ್ಧ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಪ್ರಾಸಿಕ್ಯೂಟರ್​ ಲಿಯಾಟ್​ ಬೆನ್​ ಅರಿ ಅವರ ಫೋಟೊವನ್ನು ಅಳವಡಿಸಲಾಗಿತ್ತು. ಹಾಗೇ ದುರ್ಗಾ ದೇವಿಯ ಹಲವು ಕೈಗಳಲ್ಲಿ ಮಧ್ಯದ ಬೆರಳು (ಇದು ಅಶ್ಲೀಲ ಸಂಕೇತ) ಎತ್ತಿ ಹಿಡಿದಂತೆ ಈ ಮೆಮೆಯಲ್ಲಿ ಚಿತ್ರಿಸಲಾಗಿತ್ತು.

    ಬೆಂಜಮಿನ್​ ವಿರುದ್ಧ ರಾಜಕೀಯ ಪಿತೂರಿ ಮಾಡುತ್ತಿರುವವರ ವಿರುದ್ಧ ಹಾಕಿದ್ದ ಪೋಸ್ಟ್​ ಇದಾಗಿತ್ತು. ತನ್ನ ತಂದೆಯ ವಿರುದ್ಧ ವಾದಿಸುತ್ತಿರುವ ವಕೀಲನನ್ನು ಹೀಯಾಳಿಸಲು ಈ ಮೆಮೆಯನ್ನು ಬಳಸಿದ್ದರು. ಆದರೆ, ಭಾರತೀಯರು ಕೆಲವರು ಇದನ್ನು ನೋಡಿ ಸಿಕ್ಕಾಪಟೆ ಆಕ್ರೋಶ ವ್ಯಕ್ತಪಡಿಸಿದ್ದರು. ಟ್ವೀಟ್​ ಮೂಲಕ ತಮ್ಮ ಕೋಪ ಹೊರಹಾಕಿದ್ದರು. ಇದನ್ನೂ ಓದಿ: ಪೋಸ್ಟ್​ಮಾರ್ಟಮ್​​ಗೆ ಭರ್ಜರಿ ಲಂಚ ಕೇಳಿದ ಸರ್ಕಾರಿ ವೈದ್ಯ; ಶವಕ್ಕೆ ಅರ್ಧ ಹೊಲಿಗೆ ಹಾಕಿ ಕೊಟ್ಟ ಸಿಬ್ಬಂದಿ

    ಅದನ್ನು ಗಮನಿಸಿದ ಯೇರ್​ ನೇತನ್ಯಾಹು ಕೂಡಲೇ ಕ್ಷಮೆ ಕೇಳಿದ್ದಾರೆ. ದಯವಿಟ್ಟು ಕ್ಷಮಿಸಿ, ಇಸ್ರೇಲ್​​ನ ಕೆಲವು ರಾಜಕೀಯ ವ್ಯಕ್ತಿಗಳನ್ನು ಟೀಕಿಸಲು ಈ ಮೆಮೆ ಹಾಕಿದ್ದೆ. ಬೇರೆ ಕಡೆ ವ್ಯಂಗ್ಯಾತ್ಮಕವಾಗಿ ಬಳಸಲಾಗಿದ್ದ ಈ ಮೆಮೆಯನ್ನು ತೆಗೆದುಕೊಂಡು, ಸಣ್ಣ ಬದಲಾವಣೆಗಳೊಂದಿಗೆ ಪೋಸ್ಟ್​ ಮಾಡಿದ್ದೆ. ಇದು ಭಾರತೀಯರ ದೇವಿಯ ಚಿತ್ರವೆಂದಾಗಲಿ, ಹಿಂದು ದೇವಿಯೆಂದಾಗಲಿ ನನಗೆ ತಿಳಿದಿರಲಿಲ್ಲ. ಟ್ವೀಟ್​ ಮಾಡಿದ ಮೇಲೆ ಕೆಲವು ಕಾಮೆಂಟ್​ಗಳನ್ನು ನೋಡಿದೆ. ಅದರು ಭಾರತೀಯರ ಟ್ವೀಟ್​ಗಳಾಗಿದ್ದವು. ನನಗೆ ಆಗ ನನ್ನ ತಪ್ಪಿನ ಅರ್ಥವಾಯಿತು. ಕೂಡಲೇ ಅದನ್ನು ಡಿಲೀಟ್​ ಮಾಡಿದ್ದೇನೆ. ನನ್ನ ಎಲ್ಲ ಹಿಂದೂ ಸ್ನೇಹಿತರ ಬಳಿ ಕ್ಷಮೆ ಯಾಚನೆ ಮಾಡುತ್ತಿದ್ದೇನೆ ಎಂದು ಯೇರ್​ ಜು.27ರಂದು ಟ್ವೀಟ್ ಮಾಡಿದ್ದಾರೆ.

    ಯೇರ್​ ಅವರ ಟ್ವೀಟ್ ನೋಡಿದ ಕೆಲವು ಭಾರತೀಯರಂತೂ ಕೆಂಡಾಮಂಡಲರಾಗಿ ಪೋಸ್ಟ್​ ಹಾಕಿದ್ದರು. ಕೂಡಲೇ ಅದನ್ನು ತೆಗೆಯುವಂತೆ ಯೇರ್​ ಅವರನ್ನು ಒತ್ತಾಯಿಸಿದ್ದರು. ಇಂದು ಕೂಡ ಯೇರ್​ ಟ್ವೀಟ್ ಮಾಡಿ, ಜೈ ಹಿಂದ್​…ಐ ಲವ್​ ಇಂಡಿಯಾ ಎಂದಿದ್ದಾರೆ. ಅಷ್ಟೇ ಅಲ್ಲ ಇಸ್ರೇಲ್​ ಮತ್ತು ಭಾರತ ಧ್ವಜವನ್ನು ಒಟ್ಟಿಗೇ ಹಾಕಿ, ಲವ್​ ಸಿಂಬಲ್ ಹಾಕಿದ್ದಾರೆ. (ಏಜೆನ್ಸಿಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts