More

    ಶುಕ್ರವಾರ ಯಲಹಂಕ ಅಲ್ಲಾಳಸಂದ್ರ ಕೆರೆಯಲ್ಲಿ ಮುಳುಗಿದ್ದ ಟೆಕ್ಕಿ ಶವ ಹೊರತೆಗೆದ ಎನ್​ಡಿಆರ್​ಎಫ್, ಅಗ್ನಿಶಾಮಕ ಸಿಬ್ಬಂದಿ

    ಬೆಂಗಳೂರು: ಶುಕ್ರವಾರ ಕೆರೆಯಲ್ಲಿ ಮುಳುಗಿದ್ದ ಟೆಕ್ಕಿ ಸಚಿನ್​ಗಾಗಿ ಶನಿವಾರ ದಿನವಿಡೀ ನಡೆಸಿದ್ದ ಶೋಧ ವಿಫಲವಾಗಿದ್ದು ಭಾನುವಾರ ಬೆಳಗ್ಗೆ ಶವ ದೊರೆತಿದೆ.

    ಶುಕ್ರವಾರ ಯಲಹಂಕ ಅಲ್ಲಾಳಸಂದ್ರ ಕೆರೆಯಲ್ಲಿ ಮುಳುಗಿದ್ದ ಟೆಕ್ಕಿ ಶವ ಹೊರತೆಗೆದ ಎನ್​ಡಿಆರ್​ಎಫ್, ಅಗ್ನಿಶಾಮಕ ಸಿಬ್ಬಂದಿಇಂದು ಎನ್​ಡಿಆರ್​ಎಫ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ತುರ್ತು ಸೇವೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶವ ಹೊರ ತೆಗೆದಿದ್ದೇವೆ. ಮೃತ ಸಚಿನ್​ನ ಸ್ನೇಹಿತ ಉಲ್ಲಾಸ್ ಸರಿಯಾದ ಜಾಗ ತೋರಿಸಿದ್ದರಿಂದ ಕಾರ್ಯಾಚರಣೆಗೆ ಸಹಕಾರಿ ಆಯ್ತು ಎಂದು ಪ್ರಾಂತೀಯ ಅಗ್ನಿಶಾಮಕ ಅಧಿಕಾರಿ ದೇವರಾಜ್ ಹೇಳಿದ್ದಾರೆ.

    180 ಎಕರೆ ವಿಸ್ತೀರ್ಣ ಉಳ್ಳ ಕೆರೆ ಇದಾಗಿದ್ದು, ಶನಿವಾರ ಇಡೀ ದಿನ ಕಾರ್ಯಾಚರಣೆ ಮಾಡಿದ್ದರೂ ಪತ್ತೆಯಾಗಿರಲಿಲ್ಲ. ಭಾನುವಾರ ಸತತ ಕಾರ್ಯಾಚರಣೆ ನಂತರ ಶವ ಪತ್ತೆಯಾಗಿದೆ. ಶವವನ್ನು ಸ್ಥಳೀಯ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ದೇವರಾಜ್ ತಿಳಿಸಿದ್ದಾರೆ.

    ಶನಿವಾರ ಬೆಳಗ್ಗೆ 7 ಗಂಟೆಯಿಂದ ದಿನವಿಡೀ ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್​ಎಫ್ ಸಿಬ್ಬಂದಿ 5 ರೋಯಿಂಗ್‌ ಬೋಟ್ ಬಳಸಿ ಕೆರೆಯ ಮುಖ್ಯ ದ್ವಾರದಿಂದ 100 ಮೀಟರ್ ಸುತ್ತಮುತ್ತ ಶೋಧ ನಡೆಸಿದರೂ ಯಾವ ಪ್ರಯೋಜನವಾಗಿರಲಿಲ್ಲ.

    ಯಲಹಂಕದ ಅಲ್ಲಾಳಸಂದ್ರ ಕೆರೆಯಲ್ಲಿ ಶುಕ್ರವಾರ ಟೆಕ್ಕಿ ಸಚಿನ್ ಕೆರೆಯಲ್ಲಿ ಮುಳುಗಿದ್ದನು, ಟೆಕ್ಕಿ ಸಚಿನ್ ವೀರಾಜಪೇಟೆ ತಾಲೂಕಿನ ಹಾತೂರು ಗ್ರಾಮದ ಕೊಂಗೇಪಂಡ ಮಾಚಯ್ಯ ಅವರ ಪುತ್ರ. ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಸಚಿನ್. ಜನವರಿಯಲ್ಲಿ ನೂತನ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಸಚಿನ್ ಮಾಚಯ್ಯ ಉತ್ತಮ ಹಾಕಿಪಟುವಾಗಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts