More

    ಊರು ಬಿಟ್ಟು ಬೆಂಗಳೂರು ಕಂಬಳಕ್ಕೆ ಬರುವ ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು;ಯಾಕೆ ಗೊತ್ತಾ?

    ಬೆಂಗಳೂರು:  ಇದೇ ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿರುವುದು ವಿಶೇಷವಾದರೆ, ಇಲ್ಲೊಂದು ಇಂಟ್ರಸ್ಟಿಂಗ್​ ಸಂಗತಿ ಇದೆ. ಅದೇನಪ್ಪಾ ಅಂತಾ ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಲೇ ಬೇಕು…

    ಮೊದಲ ಬಾರಿಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 25 ಮತ್ತು 26 ರಂದು ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳವನ್ನು ಆಯೋಜಿಸಲಾಗಿದ್ದು,  ಬೆಂಗಳೂರಿನಲ್ಲಿ ನಡೆಯಲಿರವ ಕಂಬಳಕ್ಕೆ ಆಹ್ವಾನಿತ ಘಟಾನುಘಟಿ ಕಂಬಳದ ಕೋಣಗಳು ಆಗಮಿಸಲಿದ್ದು, ಹೀಗಾಗಿ ಕಂಬಳ ಕೂಟ ಎಂದಿಗಿಂತ ಮೆರುಗು ಪಡೆದು ರೋಚಕವಾಗಿ ಸ್ಪರ್ಧೆ ಏರ್ಪಡೋದ್ರಲ್ಲಿ ಅನುಮಾನವೇ ಇಲ್ಲ. ಆದರೆ ಇಲ್ಲೊಂದು ಇಂಟ್ರಸ್ಟಿಂಗ್​ ಸಂಗತಿ ಇದೆ.

    ಕಂಬಳದ ಕೋಣಗಳನ್ನು ತಮ್ಮ ಮಕ್ಕಳಂತೆ ಪ್ರೀತಿ ತೋರುವ ಮಾಲೀಕರು: ಊರು ಬಿಟ್ಟು ಮತ್ತೊಂದು ಊರಿಗೆ ಕಂಬಳದ ಕೋಣಗಳು ಬರಲಿರುವುದರಿಂದ ಕೋಣಗಳ ಬಗ್ಗೆ ಮಾಲೀಕರು ವಿಶೇಷ ಮುತುವರ್ಜಿಯನ್ನು ವಹಿಸಲಿದ್ದಾರೆ. ಕಂಬಳದ ಕೋಣಗಳಿಗೆ ಕುಡಿಯಲು ನೀರು ಸಹ ಮಂಗಳೂರಿನಿಂದಲೇ ಬರಲಿದೆ. ಕಂಬಳದ ಕೋಣಗಳನ್ನು ತಮ್ಮ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಸಾಕುವುದರಿಂದ ಅದಕ್ಕೆ ಹಾಕುವ ಆಹಾರದಿಂದ ಹಿಡಿದು ಕುಡಿಯುವ ನೀರಿನ ತನಕ ಮಾಲೀಕರು ಹೆಚ್ಚು ಹೆಚ್ಚು ಎಚ್ಚರಿಕೆಯಿಂದ ಇರುತ್ತಾರೆ ಕೋಣಗಳ ಮಾಲೀಕರು.

    ಮಂಗಳೂರಿನಿಂದ ನೀರು ತರುತ್ತಿರುವ ಹಿಂದಿನ ಉದ್ದೇಶ: ಕರಾವಳಿ ಮತ್ತು ಬೆಂಗಳೂರಿನ ವಾತಾವರಣ, ಜೀವನ ಶೈಲಿ, ಆಹಾರ ಪದ್ಧತಿ, ನೀರಿನಲ್ಲಿ ಸಾಕಷ್ಟು ವ್ಯತ್ಯಾಸ ಇರುವುದರಿಂದ ಬೆಂಗಳೂರಿನ ಆಹಾರ, ನೀರು ಕೊಡುವುದರಿಂದ ಕೋಣಗಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೀಗಾಗಿ ಕುಡಿಯಲು ನೀರನ್ನು ಸಹ ಕರಾವಳಿಯಿಂದಲೇ ತರಲು ಉದ್ದೇಶಿಸಲಾಗಿದೆ.

    ಕಂಬಳದ ಕೋಣಗಳಿಗೆ ಬಾವಿ ನೀರು: ಕಂಬಳದ ಕೋಣಗಳಿಗೆ ಕುಡಿಯಲು ಮಾಲೀಕರ ಬಾವಿಯ ನೀರನ್ನೇ ನೀಡಲಾಗುತ್ತದೆ. ಕರಾವಳಿಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತೆರಳಿದಾಗ ನೀರು ಬದಲಾದರೂ ಭೇದಿ ಆರಂಭವಾಗುತ್ತದೆ. ಹೀಗಾಗಿ ಬೆಂಗಳೂರಿಗೆ ಕರಾವಳಿಯ ಬಾವಿ ನೀರನ್ನೇ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಕೋಣಗಳನ್ನು ಕರೆದುಕೊಂಡು ಹೋಗುವಾಗ ನೀರು ತುಂಬಿದ ಟ್ಯಾಂಕರ್‌ಗಳು ಕೂಡ ಜೊತೆಯಲ್ಲಿ ಸಾಗಲಿವೆ. ವರ್ಷಗಟ್ಟಲೆ ಒಂದೇ ಬಾವಿಯ ನೀರು ಕುಡಿದ ಕೋಣಗಳಿಗೆ ಇಲ್ಲಿನ ನದಿ ನೀರು ಕುಡಿದರೂ ತೊಂದರೆಯಾಗುತ್ತದೆ. ಹುರುಳಿ, ಬೈ ಹುಲ್ಲಿನ ಸಮಸ್ಯೆ ಇಲ್ಲ. ನೀರಿನ ವಿಷಯದಲ್ಲಿ ಅತಿಸೂಕ್ಷ್ಮವಾಗಿ ಇರಬೇಕು’ ಎಂದು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ.

    ಕಂಬಳದ ಕೋಣಗಳಿಗೆ ಯಾವುದೇ ಸಮಸ್ಯೆ ಆಗದಂತೆ ಊರಿನಿಂದಲೇ 8 ಟ್ಯಾಂಕರ್‌ನಷ್ಟು ನೀರು ತರಲು ನಿರ್ಧರಿಸಲಾಗಿದೆ. ಅವುಗಳಿಗೆ ಬೇಕಾದ ಆಹಾರವನ್ನೂ ಕರಾವಳಿಯಿಂದಲೇ ತರಿಸಲಾಗುತ್ತದೆ.

    ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಕಂಬಳ; ಗೆದ್ದ ಕೋಣಗಳಿಗೆ ಕೊಡಲಾಗುವ ಬಹುಮಾನ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts