More

    ಪ್ರೊ ಕಬಡ್ಡಿ ಲೀಗ್: ಸ್ಟಾರ್ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ ಫ್ರಾಂಚೈಸಿಗಳು

    ಮುಂಬೈ: 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತಿಹೆಚ್ಚು ಅಂಕ ಕಲೆಹಾಕಿದ್ದ ಪವನ್ ಕುಮಾರ್ ಶೆರಾವತ್ ಅವರನ್ನು ಬೆಂಗಳೂರು ಬುಲ್ಸ್‌ನಲ್ಲೇ ಉಳಿಸಿಕೊಳ್ಳಲಾಗಿದೆ. ಮಾಜಿ ಚಾಂಪಿಯನ್ ಬುಲ್ಸ್ ತಂಡದ ನಾಯಕನಾಗಿದ್ದ ರೋಹಿತ್ ಕುಮಾರ್ ಅವರನ್ನು ಕೈಬಿಡಲಾಗಿದೆ. 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ರಿಟೇನ್ ಪಟ್ಟಿಯನ್ನು ಶುಕ್ರವಾರ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ಒಟ್ಟಾರೆ 12 ತಂಡಗಳಿಂದ 3 ವಿಭಾಗಗಳಿಂದ 59 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಎಲೈಟ್ ಆಟಗಾರರ ಪಟ್ಟಿಯಲ್ಲಿ 22, ಯುವ ಆಟಗಾರರ ಕೋಟಾದಡಿ 6 ಹಾಗೂ ಹೊಸ ಆಟಗಾರರ ಕೋಟಾದಡಿ 31 ಆಟಗಾರರನ್ನು 12 ್ರಾಂಚೈಸಿಗಳು ಉಳಿಸಿಕೊಂಡಿವೆ.

    ಇದನ್ನೂ ಓದಿ: ಮೇರಠ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಹಾಕಿ ದಿಗ್ಗಜ ಧ್ಯಾನ್‌ಚಂದ್ ಹೆಸರು

    ಬಹುನಿರೀಕ್ಷಿತ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಮುಂದಿನ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಲೀಗ್ ಆಯೋಜಕರಾದ ಮಾಷಲ್ ಸ್ಪೋರ್ಟ್ಸ್ ತಿಳಿಸಿದೆ. 6ನೇ ಹಾಗೂ 7ನೇ ಆವೃತ್ತಿಯಲ್ಲಿ ಉಳಿಸಿಕೊಳ್ಳದ ಆಟಗಾರರು ಕೂಡ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ತಂಡ ಮಣಿಂದರ್ ಸಿಂಗ್ ಅವರನ್ನು ಉಳಿಸಿಕೊಂಡಿದ್ದು, ಕನ್ನಡಿಗರಾದ ಸುಖೇಶ್ ಹೆಗ್ಡೆ, ಜೀವಕುಮಾರ್ ಅವರನ್ನು ಬಿಡುಗಡೆ ಮಾಡಿದೆ. ಆಗಸ್ಟ್ 29 ರಿಂದ 31 ರವರೆಗೆ ಮುಂಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹಿಂದಿನ ಆವೃತ್ತಿಗಳಲ್ಲಿ ಮಿಂಚಿದ್ದ ಕೆಲ ಸ್ಟಾರ್ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

    ಇದನ್ನೂ ಓದಿ: ಲಿಯೋನೆಲ್ ಮೆಸ್ಸಿ ಬಳಸಿದ್ದ ಟಿಶ್ಯು ಪೇಪರ್ 7.44 ಕೋಟಿ ರೂಪಾಯಿಗೆ ಸೇಲ್!

    ಪಿಕೆಎಲ್‌ನಲ್ಲಿ ಅತ್ಯಂತ ಯಶಸ್ವಿ ಆಟಗಾರ ಎನಿಸಿ ಕೊಂಡಿರುವ ಪರದೀಪ್ ನರ್ವಾಲ್ ಅವರನ್ನು ಪಟನಾ ಪೈರೇಟ್ಸ್ ಬಿಡುಗಡೆ ಮಾಡಿದೆ. ಬೆಂಗಳೂರು ಬುಲ್ಸ್ ನಾಯಕ ರೋಹಿತ್ ಕುಮಾರ್, ಸಿದ್ಧಾರ್ಥ್ ದೇಸಾಯಿ (ತೆಲುಗು ಟೈಟಾನ್ಸ್), ಮೀರಜ್ ಶೇಖ್ (ದಬಾಂಗ್ ಡೆಲ್ಲಿ), ಸಂದೀಪ್ ನರ್ವಾಲ್ (ಯು ಮುಂಬಾ), ರಿಶಾಂಕ್ ದೇವಾಡಿಗ (ಯುಪಿ ಯೋಧಾ), ರೋಹಿತ್ ಗುಲಿಯಾ (ಗುಜರಾತ್ ಫಾರ್ಚುನ್ ಜೈಂಟ್ಸ್), ಧರ್ಮರಾಜ್ ಚೇರಲತನ್ (ಹರಿಯಾಣ ಸ್ಟೀಲರ್ಸ್‌), ದೀಪಕ್ ಹೂಡಾ (ಜೈಪುರ ಪಿಂಕ್ ಪ್ಯಾಂಥರ್ಸ್‌) ಹಾಗೂ ಸುರ್ಜಿತ್ ಸಿಂಗ್ (ಪುಣೇರಿ ಪಲ್ಟಾನ್) ಬಿಡುಗಡೆಯಾಗಿರುವ ಪ್ರಮುಖ ಆಟಗಾರರು. ಮತ್ತೊಂದೆಡೆ, ತಮಿಳ್ ತಲೈವಾಸ್ ತಂಡದ ಪ್ರಮುಖ ಆಟಗಾರರಾದ ಅಜಯ್ ಠಾಕೂರ್, ರಾಹುಲ್ ಚೌಧರಿ ಹಾಗೂ ಮಂಜೀತ್ ಚಿಲ್ಲರ್ ಅವರನ್ನು ಕೈಬಿಡಲಾಗಿದೆ.

    ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಚಟುವಟಿಕೆ ಹೇಗಿದೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts