ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಚಟುವಟಿಕೆ ಹೇಗಿದೆ ಗೊತ್ತೇ?

ಕಾಬೂಲ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಮುಂಬರುವ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗಾಗಿ ಸಿದ್ಧತೆ ಕೈಗೊಳ್ಳಲು ಎರಡು ದಿನಗಳ ಹಿಂದಷ್ಟೇ ಆರಂಭಿಸಿರುವ ತರಬೇತಿ ಶಿಬಿರವೂ ನಿರಾತಂಕವಾಗಿ ಸಾಗಿದೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ದೇಶವನ್ನು ವಶಪಡಿಸಿಕೊಂಡ ಎರಡು ದಿನಗಳಲ್ಲೇ ಕ್ರಿಕೆಟ್ ಚಟುವಟಿಕೆಗಳು ಎಂದಿನಂತೆ ಸಾಗಿವೆ. ತಂಡದ ಆಟಗಾರರು ಉತ್ಸುಕವಾಗಿಯೇ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಶುಕ್ರವಾರ ತಿಳಿಸಿದೆ. ಶ್ರೀಲಂಕಾದಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಸರಣಿ ಆಯೋಜಿಸಲಾಗಿದೆ. ತಾಲಿಬಾನ್ ಉಗ್ರರು ದೇಶವನ್ನು ವಶಪಡಿಸಿಕೊಂಡರೂ ಕ್ರಿಕೆಟ್ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗಿಲ್ಲ … Continue reading ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಚಟುವಟಿಕೆ ಹೇಗಿದೆ ಗೊತ್ತೇ?