More

    ಎರಡನೇ ಕಾಶ್ಮೀರವಾಗಿ ಬದಲಾಗಿದೆ ಬಂಗಾಳ – ಬಿಜೆಪಿ ನಾಯಕ ದಿಲೀಪ್ ಘೋಷ್

    ಕೋಲ್ಕತ: ನಿತ್ಯವೂ ಉಗ್ರರ ಬಂಧನ, ಎರಡು ದಿನಕ್ಕೊಂದು ಅಕ್ರಮ ಬಾಂಬ್ ತಯಾರಿ ಘಟಕ ಪತ್ತೆ ಮುಂದುವರಿದಿದ್ದು ಬಂಗಾಳ ಎರಡನೇ ಕಾಶ್ಮೀರವಾಗಿ ಬದಲಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಬುಧವಾರ ಕಟುವಾಗಿ ಟೀಕಿಸಿದ್ದಾರೆ.

    ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಡಳಿತವನ್ನು ಟೀಕಿಸಿದ ಅವರು, ಬಿರ್ಭೂಮ್ ಜಿಲ್ಲೆಯಲ್ಲಿ ಚಾ-ಚಕ್ರ (ಚಾಯ್​ ಪೇ ಚರ್ಚಾ) ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಅಲ್ಲಿ ಅವರು ಹೇಳಿದ್ದಿಷ್ಟು- ಪಶ್ಚಿಮ ಬಂಗಾಳದಲ್ಲಿ ನಿತ್ಯವೂ ಉಗ್ರರನ್ನು ಬಂಧಿಸಲಾಗುತ್ತಿದೆ. ಅದರ ಮಾರನೆ ದಿನ ಅಕ್ರಮ ಬಾಂಬ್ ತಯಾರಿ ಘಟಕ ಪತ್ತೆಯಾಗುತ್ತಿದೆ. ಇದರೊಂದಿಗೆ ಪಶ್ಚಿಮ ಬಂಗಾಳ ಈಗ ಎರಡನೇ ಕಾಶ್ಮೀರವಾಗಿದೆ. ಈ ರಾಜ್ಯದಲ್ಲಿ ಈಗ ಚಾಲ್ತಿಯಲ್ಲಿರುವ ಏಕೈಕ ಫ್ಯಾಕ್ಟರಿ ಎಂದರೆ ಅದು ಬಾಂಬ್ ತಯಾರಿ ಘಟಕ ಮಾತ್ರ ಎಂದು ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ: ಭದ್ರತೆ ಒದಗಿಸಿದ ಪೊಲೀಸ್ ಇಲಾಖೆಗೆ 4.25 ಕೋಟಿ ರೂ. ಪಾವತಿಸಬೇಕಿದೆ ಎಎಸ್ಐ!

    ಇದಕ್ಕೆ ಟಿಎಂಸಿ ನಾಯಕ ಕುನಾಲ್ ಘೋಷ್​ ಪ್ರತಿಕ್ರಿಯಿಸಿದ್ದು, ರಾಜ್ಯದ ಇಮೇಜ್ ಅನ್ನು ದಿಲೀಪ್ ಘೋಷ್ ಹಾಳುಮಾಡುವ ಪ್ರಯತ್ನ ಮಾಡಿದ್ದಾರೆ. ಅವರು ಉತ್ತರ ಪ್ರದೇಶದಲ್ಲಿನ ಆಡಳಿತವನ್ನೊಮ್ಮೆ ನೋಡಲಿ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್)

    ಹೊಸ ಸಂಸತ್ ಭವನ ನಿರ್ಮಾಣಕ್ಕೆ ಮುಂದಿನ ತಿಂಗಳು ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts