

ನವದೆಹಲಿ: ನೂತನ ಸಂಸತ್ ಭವನ ನಿರ್ಮಾಣ ಕಾಮಗಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದಿನ ತಿಂಗಳು ಚಾಲನೆ ನೀಡಲಿದ್ದಾರೆ. ಬಹುತೇಕ ಈ ಕಾರ್ಯಕ್ರಮ ಡಿಸೆಂಬರ್ ಮೊದಲ ಅರ್ಧದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಹಾಲಿ ಸಂಸತ್ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಸೇರಿ ಐವರ ಪ್ರತಿಮೆಗಳನ್ನು ಹೊಸ ಸಂಸತ್ ಭವನದ ಆವರಣದಲ್ಲಿ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ. ಕೆಲಸ ಪೂರ್ಣಗೊಳ್ಳುವ ತನಕ ಸುರಕ್ಷಿತ ಸ್ಥಳಕ್ಕೆ ಈ ಪ್ರತಿಮೆಗಳನ್ನು ಸ್ಥಳಾಂತರಿಸಲಿದೆ. ಸೆಂಟ್ರಲ್ ವಿಸ್ಟಾ ರೀಡೆವಲಪ್ಮೆಂಟ್ ಪ್ರಾಜೆಕ್ಟ್ ಪ್ರಕಾರ ಈ ಕಾಮಗಾರಿ ನಡೆಯಲಿದ್ದು, 21 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಹೊಸ ಸಂಸತ್ ಭವನ ನಿರ್ಮಾಣದ ಕೆಲಸವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಸೆಪ್ಟೆಂಬರ್ ತಿಂಗಳಲ್ಲಿ ಗುತ್ತಿಗೆ ಪಡೆದಿದೆ. 861.90 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಸತ್ ಭವನ ನಿರ್ಮಿಸಿಕೊಡುವುದಾಗಿ ಅದು ಬಿಡ್ಡಿಂಗ್ ವೇಳೆ ಖಾತರಿ ನೀಡಿದೆ. (ಏಜೆನ್ಸೀಸ್)