More

    ಬದುಕನ್ನು ಒಳಗಣ್ಣಿನಿಂದ ನೋಡಿದ ಕವಿ ಬೇಂದ್ರೆ

    ರಬಕವಿ/ಬನಹಟ್ಟಿ: ಬದುಕಿನಲ್ಲಿ ಸುಖಕ್ಕಿಂತಲೂ ಕಷ್ಟ, ನೋವುಗಳನ್ನೇ ಹೆಚ್ಚಾಗಿ ಕಂಡ ಬೇಂದ್ರೆಯವರಿಗೆ ಜೀವನದ ಕುರಿತಾಗಿ ಆಳವಾದ ಜ್ಞಾನವಿತ್ತು. ತಮ್ಮ ಎಲ್ಲ ಭಾವಗಳಿಗೆ ಅಕ್ಷರ ರೂಪ ಕೊಟ್ಟು ಆ ಮೂಲಕ ಬದುಕಿನ ವಿವಿಧ ಮಗ್ಗುಲುಗಳನ್ನು ಪರಿಚಯಿಸಿದ ಮೇಧಾವಿ ಬೇಂದ್ರೆ ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ ಎಂದು ಧಾರವಾಡದ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹೇಳಿದರು.

    ಕೊಣ್ಣೂರ ನುಡಿ ಸಡಗರದಲ್ಲಿ ಬುಧವಾರ ‘ನಾ ಕಂಡ ಬೇಂದ್ರೆ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ವಿಷಯದ ಆಳವಾದ ತಿಳಿವಳಿಕೆಯನ್ನು ಪಡೆಯಲು ಒಳಗಣ್ಣಿನಿಂದ ನೊಡಬೇಕೆನ್ನುವುದು ಬೇಂದ್ರೆಯವರ ಅಭಿಮತ. ಬೇಂದ್ರೆ ಆಡುವ ಪ್ರತಿ ಶಬ್ದವೂ ಅನೇಕ ಒಳಾರ್ಥ ಹಾಗೂ ಭಾವಾರ್ಥ ಹೊಂದಿವೆ ಎಂದರು.

    ಬೇಂದ್ರೆ 1427 ಕವನಗಳನ್ನು ಬರೆದ ಮಹಾಕವಿ. ಆ ಎಲ್ಲ ಕವನಗಳ ಸಮಗ್ರ ಮಾಹಿತಿಯ ಕುರಿತು ಬೇಂದ್ರೆಯವರ ಮಗ ವಾಮನ ಬೇಂದ್ರೆಯವರು ಆರು ಸಂಪುಟಗಳಲ್ಲಿ ದಾಖಲಿಸಿದ್ದಾರೆ ಎಂದರು. ಬಡತನದಲ್ಲಿಯೇ ಬದುಕು ಸಾಗಿಸಿ ‘ಬೆಂದು’ ಬದುಕಿದ ಬೇಂದ್ರೆಯವರು ದಿನಂಪ್ರತಿ ದಾನದಲ್ಲಿ ಸಿರಿವಂತಿಕೆ ಹೊಂದಿದ್ದರು. ಇವತ್ತಿಗೂ ಬೇಂದ್ರೆ ಕಾವ್ಯ ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡು ಅಧ್ಯಯನಗಳು ನಡೆಯುತ್ತಿರುವುದು ಅವರ ಬರಹದ ಅಗಾಧತೆ ಎಂದರು. ಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಮಲ್ಲಿಕಾರ್ಜುನ ಹೆಗ್ಗಳಗಿ ವಹಿಸಿದ್ದರು. ಮಲ್ಲಿಕಾರ್ಜುನ ತುಂಗಳ, ಗಂಗಯ್ಯ ಹಿರೇಮಠ, ವಿಶ್ವಜ ಕಾಡದೇವರ, ಕಿರಣ ಆಳಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts