More

    ಯೆಲ್ಲೋಬೋರ್ಡ್ ಸಿನಿಮಾ ಬಿಡುಗಡೆ ಮಾ.4ರಂದು; ನಿರ್ದೇಶಕ ತ್ರಿಲೋಕ್‌ರೆಡ್ಡಿ ಮಾಹಿತಿ

    ಬಳ್ಳಾರಿ: ಕ್ಯಾಬ್ ಚಾಲಕರ ಜೀವನ ಮತ್ತು ಅವರ ಬದುಕಿನ ಹೋರಾಟಗಳ ಕತೆ ಆಧರಿಸಿ ಯೆಲ್ಲೋಬೋರ್ಡ್ ಸಿನಿಮಾ ಚಿತ್ರೀಕರಿಸಲಾಗಿದ್ದು, ರಾಜ್ಯಾದ್ಯಂತ ಮಾ.4ರಂದು ಬಿಡುಗಡೆ ಮಾಡಲಾಗುವುದು ಎಂದು ಚಲನಚಿತ್ರ ನಿರ್ದೇಶಕ ತ್ರಿಲೋಕ್‌ರೆಡ್ಡಿ ಹೇಳಿದರು.

    ನಗರದ ಮುಂಡ್ಲೂರು ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯೆಲ್ಲೋಬೋರ್ಡ್ ಯಾತ್ರೆಯನ್ನು ರಾಜ್ಯಾದ್ಯಂತ 2 ಸಾವಿರ ಕಿ.ಮೀ.ವರೆಗೆ ನಡೆಸಲಾಗಿದೆ. ಈ ಮೂಲಕ ಸಿನಿಮಾದ ಪ್ರಚಾರ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ 60 ದಿನಗಳು ಶೂಟಿಂಗ್ ನಡೆಸಲಾಗಿದೆ. ಚಿತ್ರ ನಿರ್ಮಾಣಕ್ಕೆ 2.05 ಕೋಟಿ ರೂ. ವೆಚ್ಚ ಮಾಡಲಾಗಿದೆ. ಚಾಲಕರಿಗಾಗಿ ಚಿತ್ರೀಕರಿಸಿದ ಸಿನಿಮಾ ಇದಾಗಿರುವುದರಿಂದ ಸಂಭಾವನೆ ಪಡೆಯದೇ ನಟ ಪುನೀತ್ ರಾಜ್‌ಕುಮಾರ್ ಒಂದು ಹಾಡು ಹಾಡಿದ್ದು, ಹಲವು ಪ್ರಮುಖ ನಟರು ಅಭಿನಯಸಿದ್ದಾರೆ ಎಂದರು.

    ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಸಿನಿರಸಿಕರಿಗೆ ಸಂದೇಶವಿದೆ. ಪ್ರೀತಿ, ಸ್ನೇಹ, ದ್ರೋಹ, ಕೊಲೆ ಮತ್ತು ಮಾನವನ ದೌರ್ಬಲ್ಯದ ಕತೆ ಇದಾಗಿದೆ. ಕುಟುಂಬದವರೆಲ್ಲ ನೋಡುವ ಮನರಂಜನೆ ನೀಡುವ ಸಿನಿಮಾ ಇದಾಗಿದೆ. ರಾಜ್ಯದ ಹಲವು ಚಾಲಕರ ಸಂಘ ಸಿನಿಮಾಕ್ಕೆ ಬೆಂಬಲ ನೀಡಿವೆ. ನಟ ಪ್ರದೀಪ್ ಅವರ ಆರನೇ ಚಿತ್ರ ಇದಾಗಿದ್ದು, ಸಿನಿಮಾವನ್ನು ವಿಂಟೇಜ್ ಫಿಲಮ್ಸ್ ನಿರ್ಮಾಣ ವಹಿಸಿದೆ ಎಂದರು. ಕಲಾವಿದರಾದ ನವೀನ್ ಕುಮಾರ್, ಪ್ರದೀಪ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts