More

    ಶ್ರಮಿಕ ವಿಶೇಷ ರೈಲಿನಲ್ಲಿ ಬಳ್ಳಾರಿಯಿಂದ ಉತ್ತರ ಪ್ರದೇಶಕ್ಕೆ ವಲಸಿಗರ ಪ್ರಯಾಣ, ಜಿಲ್ಲಾಮಟ್ಟದ ಅಧಿಕಾರಿಗಳಿಂದ ಬೀಳ್ಕೊಡುಗೆ

    ಬಳ್ಳಾರಿ: ನಗರದ ರೈಲ್ವೆ ನಿಲ್ದಾಣದಿಂದ ಉತ್ತರಪ್ರದೇಶದ 1,452 ವಲಸಿಗರು ಭಾನುವಾರ ಶ್ರಮಿಕ ವಿಶೇಷ ರೈಲಿನಲ್ಲಿ ತವರಿಗೆ ತೆರಳಿದರು.
    ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್, ಪ್ರೊಬೇಷನರಿ ಐಎಎಸ್ ಈಶ್ವರ್ ಕಾಂಡೂ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

    ಕೆಲಸ ಅರಸಿ ಬಳ್ಳಾರಿ, ತೋರಣಗಲ್ ಸೇರಿ ಜಿಲ್ಲೆಯ ವಿವಿಧ ನಗರ, ಪಟ್ಟಣಗಳಿಗೆ ಬಂದಿದ್ದ ಉತ್ತರಪ್ರದೇಶದ 2,904 ಕಾರ್ಮಿಕರನ್ನು ಶುಕ್ರವಾರ ಹಾಗೂ ಶನಿವಾರ ಬಳ್ಳಾರಿ ಕೇಂದ್ರ ಬಸ್ ನಿಲ್ದಾಣ, ತೋರಣಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಪ್ರಮಾಣಪತ್ರ ನೀಡುವ ಜತೆಗೆ ಅಲ್ಲಿಯೇ 835 ರೂ. ಟಿಕೆಟ್ ನೀಡಲಾಗಿತ್ತು. ಅದರಂತೆ ಸೀಟ್ ಸಂಖ್ಯೆ ಅನುಗುಣವಾಗಿ ಪೊಲೀಸ್ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಸಂಬಂಧಿಸಿದ ಬೋಗಿಯಲ್ಲಿ ಕುಳಿತುಕೊಳ್ಳಲು ವಲಸಿಗರಿಗೆ ಸೂಚಿಸಿದರು. ಅಲ್ಲದೆ ಜಿಲ್ಲಾಡಳಿತದಿಂದ ಪ್ರತಿಯೊಬ್ಬರಿಗೆ ಎರಡು ಬಿಸ್ಕತ್, ಬ್ರೆಡ್ ಪ್ಯಾಕ್, ಮೂರು ಲೀಟರ್ ನೀರು, ಎರಡು ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ ಸೇರಿ ಇತರ ಸಾಮಗ್ರಿ ಹಂಚಿಕೆ ಮಾಡಲಾಯಿತು.

    ರೆಡ್‌ಕ್ರಾಸ್ ಸಂಸ್ಥೆಯಿಂದ ಮಾಸ್ಕ್ ವಿತರಿಸಲಾಯಿತು. ಉತ್ತರಪ್ರದೇಶದ ಆಗ್ರಾ, ಅಲಿಘರ್, ಅಜಂಘರ್, ಲಕ್ನೋ, ಅಲಹಾಬಾದ್, ಅಮೇಥಿ ಸೇರಿ ವಿವಿಧ ಜಿಲ್ಲೆಗಳ ವಲಸಿಗರ ಮೊಗದಲ್ಲಿ ಹುಟ್ಟೂರಿಗೆ ತೆರಳುತ್ತಿರುವ ಖುಷಿ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts