More

    ನವೀಕರಿಸುವ ಶಕ್ತಿ ಬಳಕೆ ಅನಿವಾರ್ಯ- ಜೆಸ್ಕಾಂನ ಎಇ ಇರ‌್ಫಾನ್ ಆಲಿ ಅಭಿಮತ

    ಬಳ್ಳಾರಿ: ಮುಂದಿನ ದಿನಗಳಲ್ಲಿ ಏರುತ್ತಲೇ ಇರುವ ವಿದ್ಯುತ್ತಿನ ಬೇಡಿಕೆ ಪೂರೈಸಲು ಅದರ ಉಳಿತಾಯ ಮತ್ತು ಪರಿಸರಸ್ನೇಹಿ ಹಾಗೂ ನವೀಕರಿಸಬಹುದಾದ ಶಕ್ತಿಮೂಲಗಳ ಬಳಕೆ ಅನಿವಾರ್ಯ ಎಂದು ಜೆಸ್ಕಾಂನ ಸಹಾಯಕ ಅಭಿಯಂತರ ಇರ‌್ಫಾನ್ ಆಲಿ ಹೇಳಿದರು.

    ನಗರದ ಆರ್‌ವೈಎಂಇ ಕಾಲೇಜಿನಲ್ಲಿ ಶನಿವಾರ ‘ವಿದ್ಯುತ್ ಉಳಿತಾಯ, ಪರಿಸರಸ್ನೇಹಿ ವಿದ್ಯುತ್ ಸೌರ ಶಕ್ತಿ ಬಳಕೆಯ ಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವಜನಾಂಗ ಉತ್ತಮವಿಜ್ಞಾನಿ, ತಂತ್ರಜ್ಞರನ್ನು ತಮ್ಮ ಆದರ್ಶ ಮತ್ತು ಮಾದರಿಯನ್ನಾಗಿ ಮಾಡಿಕೊಳ್ಳಬೇಕು, ಸೌರವಿದ್ಯುತ್, ಪವನ ವಿದ್ಯುತ್ ಮುಂತಾದ ವಿಜ್ಞಾನಗಳಲ್ಲಿ ನೂತನ ಆವಿಷ್ಕಾರಗಳತ್ತ ತುಡಿಯುವ ತಾಂತ್ರಿಕ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾಗಿದೆ ಎಂದರು.

    ವಿದ್ಯುತ್ ವಿಭಾಗದ ಮುಖ್ಯಸ್ಥ ಡಾ.ಎಸ್.ಕೊಟ್ರೇಶ್ ಮಾತನಾಡಿ, ಈ ಭೂಮಿಯ ನಾಗರೀಕರಾಗಿ ನೀರು, ವಿದ್ಯುತ್, ಪೆಟ್ರೋಲ್, ಡೀಸೆಲ್ ಮುಂತಾದ ಅಮೂಲ್ಯ ವಸ್ತುಗಳನ್ನು ಉಳಿಸುವುದು ನಮ್ಮ ಕರ್ತವ್ಯ. ಕರ್ನಾಟಕ ಇಂಧನ ಸಂರಕ್ಷಣ ಇಲಾಖೆಗಳು ಕೆಲವು ನಿಯಮಗಳನ್ನು ನಿಗದಿಪಡಿಸಿವೆ. ಹಗಲು ಬೆಳಕನ್ನು ಸಾಧ್ಯವಾದಷ್ಟು ಬಳಸಿ, ವಿದ್ಯುತ್ ಉಳಿತಾಯ ಮಾಡಲು ಎಲ್‌ಇಡಿ ಬಲ್ಬುಗಳಿಂದ 1:5 ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗುತ್ತದೆ. ಹವಾನಿಯಂತ್ರಣಗಳನ್ನು 18 ರಿಂದ 24 ಡಿಗ್ರಿಗಳ ಲೆವೆಲ್ ಮಾಡುವುದು, ಸೌರಶಕ್ತಿ ಆಧಾರಿತ ವಾಟರ್ ಹೀಟರ್‌ಗಳು ಬಳಸುವು ಉತ್ತಮ. ವಿದ್ಯುತ್ ಶಕ್ತಿ ದಕ್ಷ ರೆಫ್ರಿಜರೇಟರ್ಸ್‌ ಬಳಕೆ, ಜಾಗತಿಕ ತಾಪಮಾನ ಇಳಿಕೆ ಬಗ್ಗೆ ಗಮನ ಇರಲಿ ಎಂದರು.

    ಉಪಪ್ರಾಚಾರ್ಯೆ ಸವಿತಾ ಸೊನೋಳಿ, ವಿದ್ಯುತ್ ವಿಭಾಗದ ಅನುಸೂಯ ಪಾಟೀಲ್, ಡಾ.ದೊಡ್ಡಬಸವನಗೌಡ, ಡಾ.ಕೆ.ರಾಘವೇಂದ್ರ ಪ್ರಸಾದ್, ಡಾ.ಸಾಯಿ ಮಾಧವಿ, ಹನುಮಂತರಾವ್, ಹನುಮಂತರೆಡ್ಡಿ, ರಾಜಶೇಖರ, ಆಲದಳ್ಳಿ ಶರಣಬಸವ, ಶಾಂತಕುಮಾರ್, ಹಾವಿನಾಲ್‌ವಿನಯ, ಕುಮುದ, ಗಂಗಾಧರಗೌಡ, ರವಿಕುಮಾರ, ಮೀನಾಕ್ಷಿ, ಜೆಸ್ಕಾಂ ಅಧಿಕಾರಿಳಾದ ದೊಡ್ಡಬಸಪ್ಪ, ನಾಗರಾಜ ನಾಯ್ಕ, ಸಂಜಯ್, ಅಭಿಷೇಕ್, ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts