More

    ಹೊಸ ವರ್ಷಕ್ಕೆ ಬಳ್ಳಾರಿ ದೇವಸ್ಥಾನಗಳು ಭರ್ತಿ: ಶ್ರೀ ಕನಕದುರ್ಗಮ್ಮ ದರ್ಶನಕ್ಕೆ ಭಕ್ತರ ಸರದಿ

    ಬಳ್ಳಾರಿ: ಹೊಸ ವರ್ಷ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳಿಗೆ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

    ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಭಕ್ತರ ದಂಡು ಕಂಡುಬಂತು. ಶುಕ್ರವಾರ ಶಕ್ತಿದೇವತೆ ದಿನವಾಗಿದ್ದರಿಂದ ಕನಕದುರ್ಗಮ್ಮಗೆ ತರಹೇವಾರಿ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಿ ದರ್ಶನ ಪಡೆಯಲು ನಸುಕಿನಲ್ಲಿ ಆಗಮಿಸಿದ್ದ ಭಕ್ತರು, ದೇವಸ್ಥಾನದಿಂದ ಹೊರಗಿನ ರಸ್ತೆಯವರೆಗೂ ಸಾಲುಗಟ್ಟಿ ನಿಂತಿದ್ದರು. ಆದರೆ, ಬಹುತೇಕ ಭಕ್ತರು ಮಾಸ್ಕ್, ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದು ಕಂಡುಬಂತು.

    ಕಳೆದ ಕೆಲ ತಿಂಗಳಿಂದ ಕರೊನಾ ಸಂಕಷ್ಟದಲ್ಲಿದ್ದ ಹೂ, ಹಣ್ಣು, ತೆಂಗಿನಕಾಯಿ ವ್ಯಾಪಾರಸ್ಥರಿಗೆ ಉತ್ತಮ ವ್ಯಾಪಾರವಾಯಿತು. ಅಲ್ಲದೆ ಪಾಪ್‌ಕಾರ್ನ್, ಮಂಡಕ್ಕಿ, ಐಸ್ ಕ್ರೀಮ್ ಬಂಡಿಗಳಿಗೂ ಮಕ್ಕಳಿಂದ ಲಾಭವಾಯಿತು.

    ದೇವಸ್ಥಾನದ ಹೊರಗಡೆ ಭಕ್ತರನ್ನು ನಿಯಂತ್ರಿಸಲು ಟ್ರಾಫಿಕ್ ಪೋಲಿಸರು ಹರಸಹಾಸ ಪಡಬೆಕಾಯಿತು. ಸಂಚಾರ ದಟ್ಟಣೆಯೂ ಹೆಚ್ಚಾಗಿ ಕಿರಿಕಿರಿ ಉಂಟಾಯಿತು. ಹೊಸಪೇಟೆ ರಸ್ತೆಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಕೋಟೆ ಪ್ರದೇಶದ ಆಂಜನೇಯ ಸ್ವಾಮಿ, ಅನಂತಪುರ ರಸ್ತೆಯ ಸಾಯಿಬಾಬಾ ದೇವಾಲಯ ಸೇರಿ ವಿವಿಧ ದೇವಸ್ಥಾನಗಳಲ್ಲೂ ಭಕ್ತಸಮೂಹ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts