More

    ಕೃಷಿ ಪದವಿ ಕಾಲೇಜು ಆರಂಭಕ್ಕೆ ಆಗ್ರಹ

    ಶಾಸಕ ಜಿ.ಸೋಮಶೇಖರರೆಡ್ಡಿಗೆ ಮನವಿ ಸಲ್ಲಿಕೆ

    ಬಳ್ಳಾರಿ: ತಾಲೂಕಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಪದವಿ ಕಾಲೇಜು ಆರಂಭಿಸಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಆಗ್ರಹಿಸಿದ್ದಾರೆ.

    ಈ ಕುರಿತು ಪನ್ನರಾಜ್ ಸೋಮವಾರ ಶಾಸಕ ಜಿ.ಸೋಮಶೇಖರರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಹಗರಿ ಕೃಷಿ ಸಂಶೋಧನಾ ಕೇಂದ್ರ 1906ರಲ್ಲಿ ಆರಂಭವಾಗಿದೆ. ವಿವಿಯಾಗಬೇಕಿದ್ದ ಕೇಂದ್ರದಲ್ಲಿ ಕೃಷಿ ಡಿಪ್ಲೊಮಾ ಮಾತ್ರ ಇದೆ. ಪದವಿ ಕಾಲೇಜು ಆರಂಭಿಸಲು ಆಗ್ರಹಿಸಿ ದಶಕಗಳಿಂದ ಹೋರಾಟ ನಡೆದಿದ್ದರೂ ಸ್ಪಂದನೆ ಸಿಕ್ಕಿಲ್ಲ.

    ಕೃಷಿ ತಜ್ಞ ಡಾ.ಬಿಸಿಲಯ್ಯ ಸಮಿತಿ ಹಗರಿ ಸೇರಿ 8 ಕಡೆ ಕೃಷಿ ಪದವಿ ಕಾಲೇಜುಗಳನ್ನು ಆರಂಭಿಸಲು ಶಿಫಾರಸು ಮಾಡಿತ್ತು. ಹಗರಿ ಹೊರತುಪಡಿಸಿ ಇತರೆಡೆ ಕಾಲೇಜುಗಳು ಆರಂಭವಾಗಿವೆ. ರಾಯಚೂರು ಕೃಷಿ ವಿವಿ ಕುಲಪತಿ ನೇತೃತ್ವದ ಸಮಿತಿ ಕೂಡ ಹಗರಿಯಲ್ಲಿ ಪದವಿ ಕಾಲೇಜು ಆರಂಭಕ್ಕೆ ಶಿಫಾರಸು ಮಾಡಿದೆ. ಕೃಷಿ ಸಂಶೋಧನಾ ಕೇಂದ್ರದಲ್ಲಿ ಮೂಲ ಸೌಕರ್ಯ ಹಾಗೂ ಸಿಬ್ಬಂದಿ ಇರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗುವುದಿಲ್ಲ. ಕೃಷಿ ಪದವಿ ಕಾಲೇಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವುದರ ಜತೆಗೆ ಬಜೆಟ್‌ನಲ್ಲಿ ಅನುದಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts