More

    ಮಿಂಚೇರಿಗುಡ್ಡ ಅಭಿವೃದ್ಧಿಗೆ ಒತ್ತು

    ಬಳ್ಳಾರಿ: ಹಚ್ಚ ಹಸಿರಿನ ಸುಂದರ ತಾಣ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಲೂಕಿನ ಮಿಂಚೇರಿ ಬೆಟ್ಟವನ್ನು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
    ಸ್ವಾತಂತ್ಯದ ಅಮೃತ ಮಹೋತ್ಸವ ನಿಮಿತ್ತ ತಾಲೂಕಿನ ಮಿಂಚೇರಿಬೆಟ್ಟದ ಮೇಲೆ ಭಾನುವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಗರದ ಸಮೀಪ ಇಂತಹ ಸುಂದರ ಪರಿಸರ ಇದೆ. ನಾನು ಇದನ್ನು ಮೊದಲ ಬಾರಿಗೆ ನೋಡಿರುವೆ. ಇಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕೆಎಂಆರ್‌ಸಿ ನಿಧಿಯಿಂದ ಒದಗಿಸಲಿದೆ. ಪಾಳುಬಿದ್ದಿದ್ದ ಈ ಕಟ್ಟಡವನ್ನು ಎನ್‌ಎಂಡಿಸಿಯ 60 ಲಕ್ಷ ರೂ. ಸಹಕಾರದಿಂದ ಪುನರುಜ್ಜೀವನ ಮಾಡಲಾಗಿದೆ. ಬ್ರಿಟಿಷ್ ಬಂಗಲೆಗೆ ಅಮೃತ ಮಹಲ್ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಸಂಡೂರು ಭಾಗದ ಅರಣ್ಯ ಪ್ರದೇಶದಲ್ಲಿ ಕಾರ್ಖಾನೆಗಳು ಬೆಳೆಯುತ್ತಿವೆ. ಅವುಗಳು ಬಗ್ಗೆ ಸರ್ಕಾರಕ್ಕೆ ಗಮನಕ್ಕೆ ತರಲಾಗುವುದು. ಜಿಲ್ಲೆಗೆ ಕಾರ್ಖಾನೆಗಳು ಬರಬೇಕು ಹಾಗೂ ಪರಿಸರವು ಉಳಿಯಬೇಕು. ಎಕೋ ಟೂರಿಸಂ ಹಾಗೂ ಟೂರಿಸಂ ಮಾಡಲು ಇಂತಹ ಸ್ಥಳಗಳು ಅವಶ್ಯಕವಾಗಿವೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರನ್ನು, ಮಹನೀಯರನ್ನು ನೆನಪು ಮಾಡಿಕೊಳ್ಳುವುದರ ಜತೆ ಇತಿಹಾಸವನ್ನು ಅರಿಯಬೇಕು ಎಂದರು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಎಚ್.ಸೂರ್ಯವಂಶಿ ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ಇಲ್ಲಿ ಮೊದಲಬಾರಿಗೆ ಧ್ವಜಾರೋಹಣ ಮಾಡಲಾಗುತ್ತಿದೆ. 1894ರಲ್ಲಿ ಜಡ್ಜ್ ಬಂಗ್ಲೆಯಾಗಿ ಈ ಕಟ್ಟಡ ಕಟ್ಟಿತ್ತು. ಬಳಿಕ ರೇಂಜ್ ಫಾರೆಸ್ಟ್ ಕ್ವಾಟ್ರಸ್ ಆಗಿತ್ತು. 2015ರಿಂದ ದುರಸ್ತಿ ಮಾಡಿದ್ದು, ಈಗ ಉದ್ಘಾಟನೆಗೊಳ್ಳುತ್ತಿದೆ. ಅರಣ್ಯ ಇಲಾಖೆಯು ಈ ಕಟ್ಟಡವನ್ನು ಮ್ಯೂಸಿಯಂ ಆಗಿ ಮಾಡಬೇಕೆಂದಿದೆ. ಇಲ್ಲಿ ಅಡ್ವೇಂಚರ್ ಟೂರಿಸಂ, ಇಕೋ ಟೂರಿಸಂ ಡೆಪಲಪ್ ಮಾಡಲಿದೆ. ಎರಡ್ಮೂರು ತಿಂಗಳಲ್ಲಿ ಈ ಕಾರ್ಯ ಆಗಲಿದೆ. ಜನತೆ ಟ್ರಕಿಂಗ್ ಸಹ ಇಲ್ಲಿ ಮಾಡಬಹುದು ಎಂದರು.
    ಶಾಸಕ ಜಿ.ಸೋಮಶೇಖರರೆಡ್ಡಿ, ಎಂಎಲ್ಸಿ ವೈ.ಎಂ.ಸತೀಶ್, ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಪಿ.ಪಾಲಣ್ಣ, ಮಾಜಿ ಸಂಸದೆ ಶಾಂತಾ, ಮಾಜಿ ಶಾಸಕ ಸುರೇಶ್ ಬಾಬು, ಪಿಸಿಸಿಎಫ್ ಹರಿಲಾಲ್, ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅದಾವತ್, ಎಡಿಸಿ ಪಿ.ಎಸ್.ಮಂಜುನಾಥ, ಜಿಪಂ ಸಿಇಒ ಲಿಂಗಮೂರ್ತಿ, ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ, ಜಿಲ್ಲಾ ಸರ್ಜನ್ ಬಸರೆಡ್ಡಿ, ತಹಸೀಲ್ದಾರ್ ವಿಶ್ವನಾಥ್, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಶ್ರೀನಿವಾಸ ಮೋತ್ಕರ್ ಇತರರಿದ್ದರು.

    ಗುಡ್ಡ ಹತ್ತಿದ ಸಾರಿಗೆ ಸಚಿವ

    ಬಳ್ಳಾರಿ ತಾಲೂಕಿನ ಮಿಂಚೇರಿ ಗುಡ್ಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಜತೆ ಗುಡ್ಡ ಹತ್ತಿದರು. ದಾರಿ ಉದ್ದಕ್ಕೂ ವಂದೇ ಮಾತರಂ ಘೋಷಣೆ ಕೂಗುತ್ತ ಸಾಗಿದರು. ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಗುಡ್ಡದ ಸುಂದರಮಯ ನೋಟ ಕಂಡು ಸೆಲ್ಫಿಗೆ ಮತ್ತು ಫೊಟೋಷೂಟ್‌ಗೆ ಮೊರೆಹೋದರು. ವಿವಿಧ ಕಡೆಯಿಂದ ಬಂದ ಸಾರ್ವಜಿಕರು, ಜನಪ್ರತಿನಿಗಳು ಹಾಗೂ ಅಧಿಕಾರಿಗಳು ಗುಡ್ಡದ ಸೌಂದರ್ಯಕ್ಕೆ ಮನಸೋತರು.

    ಮಿಂಚೇರಿಗುಡ್ಡ ಅಭಿವೃದ್ಧಿಗೆ ಒತ್ತು
    ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಭಾನುವಾರ ರಾಷ್ಟ್ರಧ್ವಜ ಹಿಡಿದು ತಾಲೂಕಿನ ಮಿಂಚೇರಿ ಗುಡ್ಡ ಹತ್ತಿದರು. ಶಾಸಕ ಜಿ.ಸೋಮಶೇಖರರೆಡ್ಡಿ, ಎಂಎಲ್ಸಿ ವೈ.ಎಂ.ಸತೀಶ್ ಇದ್ದರು.
    ಮಿಂಚೇರಿಗುಡ್ಡ ಅಭಿವೃದ್ಧಿಗೆ ಒತ್ತು
    ಬಳ್ಳಾರಿ ತಾಲೂಕಿನ ಮಿಂಚೇರಿ ಗುಡ್ಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ವಿದ್ಯಾರ್ಥಿಗಳ ಜತೆ ಸೆಲ್ಫಿ ಕ್ಲಿಕಿಸಿಕೊಂಡರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts