More

    ಮಹತ್ತರ ಕಾರ್ಯಗಳಿಗೆ ಕುಮಾರಮಹಾಸ್ವಾಮಿಗಳೇ ಪ್ರೇರಣೆ ಎಂದ ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ

    ಬಳ್ಳಾರಿ: ರಾಜ್ಯದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಮಹತ್ತರ ಕಾರ್ಯಗಳಾಗಿದ್ದರೆ ಅದು, ಒಂದಲ್ಲ ಒಂದು ರೀತಿಯಲ್ಲಿ ಹಾನಗಲ್ ಕುಮಾರ ಮಹಾಶಿವಯೋಗಿಗಳ ಪ್ರೇರಣೆ ಎಂದು ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.

    ನಗರದ ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದಲ್ಲಿ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ 155ನೇ ಜಯಂತಿ ಮಹೋತ್ಸವ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು.

    ಅರಿವು -ಆಚಾರಗಳ ಮಹಾಸಂಗಮವೇ ಪೂಜ್ಯ ಮಹಾಸ್ವಾಮೀಜಿಯವರು. ಕನ್ನಡ ನಾಡಿನಲ್ಲಿರುವ ಬಹುತೇಕ ಮಠಗಳಿಗೆ ಪೀಠಾಧಿಪತಿ ನೀಡಿದ್ದಾರೆ. ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶಿವಯೋಗಮಂದಿರ ಕೊಡುಗೆ ಸಮಾಜ ಸಂಘಟನೆಯಾಗಿ ಕಾಣುತ್ತಿದೆ. ಸ್ವತಂತ್ರ ಪೂರ್ವದಲ್ಲೇ ಭಾರತ ಮಟ್ಟದ ಒಂದು ಮಹಾಸಭಾ ಅಖಿಲ ಭಾರತ ಮಹಾಸಭಾವನ್ನು ಸ್ಥಾಪಿಸಲಾಗಿತ್ತು. ಕರ್ನಾಟಕದ ಶೈಕ್ಷಣಿಕ ಕಾಂತ್ರಿಗೆ ಕೊಡುಗೆ ನೀಡಿದ ಕೆಎಲ್‌ಈ ಸಂಸ್ಥೆ, ವೀರಶೈವ ವಿದ್ಯಾವರ್ಧಕ ಸಂಘ, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘ, ವಿಜಯಪುರದ ಬಿಎಲ್‌ಡಿ ಸಂಸ್ಥೆ ಇವೆಲ್ಲವುಗಳಿಗೆ ಶ್ರೀಗಳೆ ಪ್ರೇರಣಾದಾಯಕ. ಕುಮಾರ ಶಿವಯೋಗಿಗಳು ಜೀವನ, ಸಮಾಜಕ್ಕೊಂದು ಪಾವನ, ಕನ್ನಡಕ್ಕೊಂದು ಜೀವನ ಎಂದರು.

    ಜಗದ್ಗುರು ಲಿಂ. ಸಂಗನ ಬಸವಸ್ವಾಮೀಜಿಗಳ ಗುರುಕಾಣಿಕೆಯಾಗಿ 1.50 ಕೋಟಿ ರೂ.ಬೃಹತ್ ಸುಂದರರಥವನ್ನು ಶಿವಯೋಗ ಮಂದಿರ ಶತಮಾನತ್ಸೋವದ ಸಂದರ್ಭದಲ್ಲಿ ಅರ್ಪಿಸಿದ ಸಾರ್ಥಕತೆ ಸ್ಮರಣೀಯ ಎಂದರು.

    ಶಾಸಕ ಜೆ.ಎನ್.ಗಣೇಶ, ವೀ.ವಿ. ಸಂಘದ ಅಧ್ಯಕ್ಷ ಗುರುಸಿದ್ಧಸ್ವಾಮಿ ಮಾತನಾಡಿದರು. ದರೂರಿನ ಶ್ರೀ ಕೊಟ್ಟೂರು ಸ್ವಾಮೀಜಿ, ಕುರುಗೋಡಿನ ನಿರಂಜನ ಪ್ರಭುದೇವರು, ಸೋಮಸಮುದ್ರದ ಸಿದ್ಧಲಿಂಗದೇವರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇವರು, ಬೂದಗುಂಪದ ಸಿದ್ದೇಶ್ವರದೇವರು, ವೀ.ವಿ. ಸಂಘದ ಕಾರ್ಯದರ್ಶಿ ಬಿ.ವಿ. ಬಸವರಾಜ್ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts