More

    ವೀರಶೈವ ಧರ್ಮದ ಆಚಾರ ರೂಢಿಸಿಕೊಳ್ಳಿ

    ಕಂಪ್ಲಿ: ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಜಂಗಮವಟುಗಳಿಗೆ ಶಿವದೀಕ್ಷೆ(ಅಯ್ಯಚಾರ) ಕಾರ್ಯಕ್ರಮ ಗುರುವಾರ ನಡೆಯಿತು.
    ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು 25ಜಂಗಮವಟುಗಳಿಗೆ ಶಿವದೀಕ್ಷೆ, ಧರ್ಮೋಪದೇಶ ಮಾಡಿ, ವೀರಶೈವ ಧರ್ಮದಲ್ಲಿ ಲಿಂಗದೀಕ್ಷೆಗೆ ಪ್ರಮುಖಸ್ಥಾನವಿದೆ. ಇಷ್ಟಲಿಂಗ ಧರಿಸಿದವನು ತಪ್ಪದೆ ಇಷ್ಟಲಿಂಗ ಪೂಜೆ ಮಾಡಬೇಕು. ಶಿವದೀಕ್ಷೆಯಿಂದ ಸಂಸ್ಕಾರಯುತವಾದ ಅರ್ಥಪೂರ್ಣ ಜೀವನ ಸಾಗಿಸಲು ಸಾಧ್ಯ. ನಿತ್ಯ ನಿರಂತರ ಲಿಂಗಪೂಜೆಯಿಂದ ಸದೃಢ ಮತ್ತು ಆರೋಗ್ಯಕರ ದೇಹ, ಮನಸ್ಸು ಮತ್ತು ಬುದ್ದಿಗಳಿಸಬಹುದು. ವೀರಶೈವ ಧರ್ಮದ ಆಚಾರ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
    ಸಾಂಗತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ ಮಾತನಾಡಿ, ಲಿಂಗದೀಕ್ಷೆ ಪಡೆದ ಜಂಗಮವಟುಗಳು ಗುರುವಿನ ಉಪದೇಶವನ್ನು ಜೀವನಪೂರ್ತಿ ಪಾಲಿಸಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ವೀರಶೈವ ಧರ್ಮದ ಆಚಾರ ವಿಚಾರಗಳನ್ನು ಕಲಿಸಿಕೊಡುವಲ್ಲಿ ಪೋಷಕರು ಜಾಗೃತಿ ತೋರಬೇಕು ಎಂದರು.
    ಅಯ್ಯಚಾರ ಸೇವೆ ಸಲ್ಲಿಸಿದ ಡಾ.ಅಶೋಕ್ ಬಿ.ಹಂದ್ರಾಳ್, ಪಾಠಶಾಲೆ ಗೌರವ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿ, ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಪದಾಧಿಕಾರಿಗಳಾದ ಎಸ್.ವೀರಭದ್ರಯ್ಯಸ್ವಾಮಿ, ಕೆ.ಸಣ್ಣ ಗವಿಸಿದ್ದಪ್ಪ, ಇಟಗಿ ಬಸವರಾಜಗೌಡ, ಜಿ.ಜಿ.ಆನಂದಮೂರ್ತಿ, ಜಿ.ಎಚ್.ಶಶಿಧರಗೌಡ, ದಾನಶೆಟ್ಟಿ ಶಿವನಾಗಪ್ಪ, ಜವುಕಿನ ಶಂಕರ್, ಅಲಬನೂರು ಬಸವರಾಜ, ಡಾ.ಜಗನ್ನಾಥ ಹಿರೇಮಠ, ವಾಲಿ ಕೊಟ್ರಪ್ಪ, ಕಲ್ಗುಡಿ ವಿಶ್ವನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts