More

    ನವ ಭಾರತ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ದೊಡ್ಡದು ಎಂದ ನಿರೀಕ್ಷಕ ಎಂ.ಅಶೋಕ

    ಹೊಸಪೇಟೆ: ಕಾರ್ಮಿಕ ಇಲಾಖೆ, ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಹಗರಿಬೊಮ್ಮನಹಳ್ಳಿಯ ಬಿ.ಎಂ.ಡಿ. ಆಸ್ಪತ್ರೆ ಸಹಯೋಗದಲ್ಲಿ ನಗರದ ಪಂಪ ಕಲಾ ಮಂದಿರದಲ್ಲಿ ಬುಧವಾರ ನೋಂದಾಯಿತ ಕಟ್ಟಡ ಹಾಗೂ ಇತರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಿತು.
    ಶಿಬಿರ ಉದ್ಘಾಟಿಸಿದ ಕಾರ್ಮಿಕ ನಿರೀಕ್ಷಕ ಎಂ.ಅಶೋಕ, ನವ ಭಾರತ ನಿರ್ಮಾಣದಲ್ಲಿ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಪ್ರತಿನಿತ್ಯ ದೈಹಿಕ ಶ್ರಮವಹಿಸುವ ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಣ್ಣ ಪುಟ್ಟ ಕಾಯಿಲೆಗಳಿಂದ ಬಳಲುತ್ತಿರುವವರು ಇಂತಹ ಶಿಬಿರಗಳ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
    ಆಸ್ಪತ್ರೆಯ ವೈದ್ಯ ಡಾ.ಬಿ.ಎಂ.ಡಿ. ಬಸವರಾಜ, ಡಾ.ಎಂ.ಕವಿತಾ ಬಸವರಾಜ ಅವರು, ಕಾರ್ಮಿಕರಿಗೆ ಮಧುಮೇಹ, ರಕ್ತದೊತ್ತಡ, ಕಿಡ್ನಿ, ಥೈರಾಯ್ಡ, ಕ್ಯಾಲ್ಸಿಯಂ ಪ್ರಾಮಾಣ, ಶ್ವಾಸಕೋಶ, ನೇತ್ರ ಸಮಸ್ಯೆ ತಪಾಸಣೆ ನಡೆಸಿ, ಅಗತ್ಯವುಳ್ಳವರಿಗೆ ಔಷಧೋಪಚಾರ ನೀಡಿದರು. ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಜಿ.ಮೋಹನ್, ಸೋಮಶೇಖರ್ ಬಣ್ಣದ ಮನೆ, ಲಿಯಾಖತ್ ಅಲಿ ಇದ್ದರು.

    ನವ ಭಾರತ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ದೊಡ್ಡದು ಎಂದ ನಿರೀಕ್ಷಕ ಎಂ.ಅಶೋಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts