More

    ಸಹಿಸದವರು ಅಪ್ರಚಾರಕ್ಕೆ ಇಳಿದಿದ್ದಾರೆ; ಮಾಜಿ ಶಾಸಕ ದಿವಾಕರ್‌ಬಾಬು ಆರೋಪ

    ಬಳ್ಳಾರಿ: ಕೆಲವರ ಜತೆ ಸೇರಿ ಹೊಸ ಪಕ್ಷ ಮಾಡುವೆನೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿಬಿಡಲಾಗಿದೆ. ರಾಜಕೀಯದಲ್ಲಿ ನಾನು ಸಕ್ರಿಯವಾಗಿರುವುದನ್ನು ಸಹಿಸದ ಕೆಲವರು ಕುತಂತ್ರದಿಂದ ಇಂಥ ಅಪ್ರಚಾರಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ದಿವಾಕರ್‌ಬಾಬು ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನಾನು ಬಳ್ಳಾರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. 24 ಜನ ಆಕಾಂಕ್ಷಿಗಳಿದ್ದಾರೆ. ಟಿಕೆಟ್ ಸಿಗಲಿ ಅಥವಾ ಬಿಡಲಿ, ಇದು ನನ್ನ ಕೊನೆಯ ಚುನಾವಣೆ. ಪಕ್ಷ ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪ್ರಚಾರ ಮಾಡುತ್ತೇನೆ. ನಾನು ಯಾರ ಹೆಸರೂ ಹೇಳುವುದಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯಂತರವಿಲ್ಲ. ಹಿಂದೆ ನಾನು ರಾಜಕೀಯದಲ್ಲಿ ಸಕ್ರಿಯನಾಗಿದ್ದಾಗ ಅದೊಂದು ಸಮಾಜ ಸೇವೆಯಾಗಿತ್ತು. ಈಗ ಏನಾಗಿದೆ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ರಾಜಕಾಣದಲ್ಲಾದ ಪರಿಸ್ಥತಿಗಳಿಂದಾಗಿ ಸಕ್ರಿಯ ರಾಜಕಾರಣದಿಂದ ದೂರವಿದ್ದೆ. ಈಗ ನಮ್ಮ ನಾಯಕ ರಾಹುಲ್ ಕೈಗೊಂಡಿರುವ ಭಾರತ್ ಜೋಡೊ ಯಾತ್ರೆಯಿಂದ ಪ್ರಭಾವಿತನಾಗಿ ಮತ್ತೆ ಬಂದಿದ್ದೇನೆ ಎಂದರು.

    ಬಳ್ಳಾರಿ ನಗರ ಕ್ಷೇತ್ರದಿಂದ ನನಗೆ ಟಿಕೆಟ್ ಕೊಡದಿದ್ದರೆ ನನ್ನ ಪುತ್ರ ಹನುಮ ಕಿಶೋರನಿಗೆ ಕೊಡುವಂತೆ ಕೇಳಿಲ್ಲ. ಕಾಂಗ್ರೆಸ್ ಟಿಕೆಟ್‌ಗೆ ಆತ ಅರ್ಜಿ ಹಾಕಿಲ್ಲ.ಯಾರಾದರೂ ಸ್ವಂತ ಪರಿಶ್ರಮದಿಂದ ರಾಜನಾಗಬೇಕೇ ವಿನಾ, ಯಾರದೋ ಬಲದಿಂದ ಆಗಬಾರದು. ಸ್ವಂತ ಶಕ್ತಿಯಿಂದ ಸ್ಥಾನಮಾನ ಪಡೆದರೆ ಅದರ ಬೆಲೆ ಗೊತ್ತಿರುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts