More

    ದೊಡ್ಡಾಟ ಪ್ರದರ್ಶನಕ್ಕೆ ಸಹಾಯಧನ ನೀಡುವಂತೆ ಸರ್ಕಾರಕ್ಕೆ ರಾಜ್ಯ ಕಾರ್ಮಿಕ ಪ್ರಧಾನ ಕಾರ್ಯದರ್ಶಿ ಎಚ್.ಲಕ್ಷ್ಮಣ ಮನವಿ

    ಬಳ್ಳಾರಿ: ಹಳ್ಳಿಸೊಗಡಿನ ಗಂಡು ಕಲೆ ಹಾಗೂ ಬಹುಜನರ ಮನರಂಜನೆಯ ಕಲಾ ಪ್ರಕಾರವಾಗಿರುವ ಬಯಲಾಟ (ದೊಡ್ಡಾಟ) ಪ್ರದರ್ಶನಗಳಿಗೆ ಸರ್ಕಾರ ಕನಿಷ್ಠ 1 ಲಕ್ಷ ರೂ. ಸಹಾಯಧನ ನೀಡಬೇಕೆಂದು ರಾಜ್ಯ ಕಾರ್ಮಿಕ ಪ್ರಧಾನ ಕಾರ್ಯದರ್ಶಿ ಎಚ್.ಲಕ್ಷ್ಮಣ ಒತ್ತಾಯಿಸಿದರು.
    ನಗರದ ಶ್ರೀ ಕ್ಷೇತ್ರ ಅಲ್ಲಿಪುರ ಮಹಾದೇವ ತಾತಾನವರ ಹೊರ ಭವನದಲ್ಲಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಬಯಲಾಟ (ದೊಡ್ಡಾಟ) ಕಲಾವಿದರ ಕ್ಷೇಮಾಭಿವೃದ್ಧಿ ಸಮಿತಿ ಆಯೋಜಿಸಿದ್ದ ಜಾನಪದ ಸಂಗೀತ ಹಾಗೂ ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕಲಾವಿದರ ಮಾಸಾಶನ 5 ಸಾವಿರ ರೂ.ಗೆ ಹೆಚ್ಚಿಸಬೇಕು. ಇವರಿಗೆ ವಸತಿ ಮತ್ತು ಸಾಮಾಜಿಕ ಸೌಕರ್ಯ ಒದಗಿಸಲು ವಿಶೇಷ ಅನುದಾನ ನೀಡಬೇಕು. ಈ ರೀತಿಯ ಬಹುದೊಡ್ಡ ಕಾರ್ಯಕ್ರಮಗಳನ್ನು ಯೋಜಿಸುತ್ತಿರುವ ಆಯೋಜಕ ಜಿ.ಕೆ. ತಿಪ್ಪೇಸ್ವಾಮಿಯವರಿಗೆ, ಮುಂದಿನ ದಿನಗಳಲ್ಲಿ ಸರ್ಕಾರ, 5 ರಿಂದ 7 ದಿನಗಳ ಉತ್ಸವ ಕಾರ್ಯಕ್ರಮ ಆಯೋಜನೆ ಜವಾಬ್ದಾರಿ ನೀಡುವಂತಾಗಲೆಂದು ಹರಸಿದರು.
    ಮಾಜಿ ಉಪಮೇಯರ್ ತೂರ್ಪು ಯಲ್ಲಪ್ಪ ಮಾತನಾಡಿ, ಬಯಲಾಟ ಕಲಾ ಪ್ರಕಾರ ಬಳ್ಳಾರಿಯಲ್ಲೇ ಹೆಚ್ಚು ಪ್ರಚಲಿತ ಇರುವುದರಿಂದ ಇದಕ್ಕೆ ಸಂಬಂಧಿಸಿದ ಅಕಾಡೆಮಿ ನಗರದಲ್ಲೇ ಸ್ಥಾಪನೆಯಾಗಬೇಕು. ಕಲಾವಿದರಿಗೆ ಹೆಚ್ಚಿನ ಸಹಕಾರ ದೊರೆಯಬೇಕು ಎಂದು ಆಗ್ರಹಿಸಿದರು.
    ಜಿಲ್ಲಾ ಕಾರ್ಮಿಕ ಪ್ರಧಾನ ಕಾರ್ಯದರ್ಶಿ ಕೆ.ಮರಿಯಪ್ಪ ಮಾತನಾಡಿ, ಬಯಲಾಟ ಕಲಾ ಪ್ರಕಾರಕ್ಕೆ ಶೈಕ್ಷಣಿಕ ಬೆಂಬಲ ಮತ್ತು ಆರ್ಥಿಕ ಸಹಕಾರ ದೊರೆಯಬೇಕು. ಯುವಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗ ಬೇಕು ಎಂದರು.
    ಕಾರ್ಯಕ್ರಮದಲ್ಲಿ ಹುಲುಗಪ್ಪ ಮತ್ತು ಚಿಗುರು ಕಲಾ ತಂಡದಿಂದ ಉತ್ತಮ ಜಾನಪದ ಸಂಗೀತ ಮೂಡಿಬಂದರೆ, ಹಂಪಿ ವಿರೂಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್‌ನ ಕಲಾವಿದರು ಹಾಗೂ ಕಲಾ ಪ್ರೋತ್ಸಾಹಗಾರರಿಂದ ಶ್ರೀಕೃಷ್ಣ ಲೀಲೆಯ ಕಿರು ದೊಡ್ಡಾಟ ಪ್ರದರ್ಶನ, ವಿ. ವೀರೇಶ ಹಾಗೂ ಕೆ.ಮರಿಸ್ವಾಮಿ ಕಲಾ ತಂಡದಿಂದ ರತಿ ಕಲ್ಯಾಣ ಎಂಬ ದೊಡ್ಡಾಟ ಪ್ರದರ್ಶನಗೊಂಡವು.
    ವಿಠಲಾಪುರ ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಾಂಡ್ರಾವಪ್ಪ, ಪ್ರಮುಖರಾದ ಕೆ.ಮಹಾಂತೇಶ್, ಕೆ.ಎಂ.ಸ್ವಾಮಿ, ಕೋರಿ ಧನುಂಜಯ, ಜೆ.ಡಿ.ದೊಡ್ಡಬಸಪ್ಪ, ಜಿ.ಸೋಮನಗೌಡ, ಜಿ.ರಾಮಮೂರ್ತಿ, ಕೊ.ತಿಪ್ಪಯ್ಯ, ಎ. ಹುಲುಗಪ್ಪ, ಬಿ.ತಾಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts