More

    ಲಾಕ್‌ಡೌನ್‌ಗೆ ಬಳ್ಳಾರಿ ಸಂಪೂರ್ಣ ಸ್ತಬ್ಧ

    ಬಳ್ಳಾರಿ: ಕರೊನಾ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ 14 ದಿನ ಲಾಕ್‌ಡೌನ್ ಘೋಷಿಸಿದ್ದು, ಮೊದಲ ದಿನವಾದ ಸೋಮವಾರ ಗಣಿನಗರಿ ಬಳ್ಳಾರಿ ಸ್ತಬ್ಧವಾಗಿತ್ತು.
    ತರಕಾರಿ, ಹಣ್ಣು, ಹಾಲು ಪೇಪರ್, ಮಾಂಸ, ಮದ್ಯ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಎಂದಿಗಿಂತ ಜನಸಂಚಾರ ಕಡಿಮೆ ಇತ್ತು. 10 ಗಂಟೆ ಬಳಿಕ ಪೊಲೀಸ್ ಗಸ್ತು ವಾಹನಗಳು ತಿರುಗುತ್ತಿದ್ದಂತೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಯಿತು. ಜನರು ಕೂಡ ಮನೆ ಕಡೆ ನಡೆದರು.

    ನಗರದ ಬಹುತೇಕ ರಸ್ತೆ ಮತ್ತು ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಅನಗತ್ಯವಾಗಿ ಓಡಾಡುತ್ತಿದ್ದ 100ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಯಿತು. ಕರೊನಾ ನಿಯಮ ಮೀರಿದವರಿಗೆ ಲಾಠಿ ರುಚಿ ತೋರಿಸಿದರು. ಮೆಡಿಕಲ್ ಸ್ಟೋರ್ಸ್‌ ಮತ್ತು ತಳ್ಳುಗಾಡಿಗಳಲ್ಲಿ ಹಣ್ಣು ಮಾರುವವರು ಬಿಟ್ಟರೆ ಉಳಿದೆಲ್ಲ ಅಂಗಡಿಗಳು ಬಂದಾಗಿದ್ದವು.

    ನಗರದ ಪ್ರಮುಖ ರಸ್ತೆಗಳಾದ ಬೆಂಗಳೂರು ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ತಾಳೂರು ರಸ್ತೆ, ಹೊಸಪೇಟೆ ರಸ್ತೆ, ಮೋಕಾ ರಸ್ತೆ, ಕಪಗಲ್ ರೋಡ್, ರಾಯಲ್ ವೃತ್ತ, ಎಸ್ಪಿ ವೃತ್ತ, ಮೋತಿ ವೃತ್ತ, ಜೈನ್ ಮಾರ್ಕೆಟ್, ಎಪಿಎಂಸಿ, ಸುಧಾಕ್ರಾಸ್, ತೇರು ಬೀದಿ, ಎಸ್.ಎನ್.ಪೇಟೆ ಫ್ಲೈಓವರ್, ಫಸ್ಟ್ ಗೇಟ್ ಫ್ಲೈಓವರ್ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

    ಲಾಕ್‌ಡೌನ್‌ಗೆ ಬಳ್ಳಾರಿ ಸಂಪೂರ್ಣ ಸ್ತಬ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts