More

    ಚಿಣ್ಣರಲ್ಲಿ ಹೆಚ್ಚುತ್ತಿದೆ ಸೋಂಕು..!

    ಬಳ್ಳಾರಿ: ದಿನದಿಂದ ದಿನಕ್ಕೆ ಗಣಿನಾಡಿನಲ್ಲಿ ಕರೊನಾ ಪ್ರಸರಣದ ವೇಗ ಹೆಚ್ಚುತ್ತಿದ್ದು, ಕಳೆದೊಂದು ವಾರದಲ್ಲಿ 0 ರಿಂದ 18ವರ್ಷದೊಳಗಿನ ಮಕ್ಕಳಲ್ಲಿ ಕ್ಷಿಪ್ರಗತಿಯಲ್ಲಿ ಕಾಣಿಸಿಕೊಳ್ಳುತ್ತಿದೆ.

    ತಜ್ಞರು ಈ ಮುಂಚೆ ಎಚ್ಚರಿಸಿದಂತೆ ಮೊದಲ ಅಲೆ ವೃದ್ಧರಿಗೆ, ಎರಡನೇ ಅಲೆ ವಯಸ್ಕರಿಗೆ ಮತ್ತು ಮಕ್ಕಳ ಮೇಲೆ ಮೂರನೇ ಅಲೆ ಪರಿಣಾಮ ಬೀರಲಿದೆ ಎಂಬ ಮಾತಿಗೆ ಈ ಬೆಳವಣಿಗೆ ಪುಷ್ಟು ನೀಡುತ್ತಿರುವುದು ಜನರಲ್ಲಿ ಕಳವಳ ಮೂಡಿಸಿದೆ.

    ಥರ್ಡ್ ವೇವ್ ಆರಂಭವಾದ 19 ದಿನಗಳಲ್ಲಿ 691ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಜ.1ರಂದು 1, 2ರಂದು 2, 3ರಂದು 5 ಪ್ರಕರಣಗಳಿದ್ದವು. 10ನೇ ಬರುವಷ್ಟರಲ್ಲಿ ಎರಡಂಕಿ ದಾಟಿತ್ತು. 14ರಂದು ತೀವ್ರತೆ ಹೆಚ್ಚಿಸಿಕೊಂಡು 15ರಂದು 97ಕ್ಕೆ ಪ್ರಕರಣಗಳ ಸಂಖ್ಯೆ ಜ.19ರಂದು 132 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಮೊದಲ ಅಲೆಯಲ್ಲಿ 18 ವರ್ಷದೊಳಗಿನ ಇಬ್ಬರು, ಎರಡನೇ ಅಲೆಯಲ್ಲಿ ಒಂದು ಮಗು ಸೋಂಕಿನಿಂದ ಮೃತಪಟ್ಟಿದ್ದರು. ಎರಡೂ ಅಲೆಗಳಲ್ಲಿ 2170 ಬಾಲಕರು ಮತ್ತು 2054 ಬಾಲಕಿಯರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಸ್ಪತ್ರೆ, ವಿಮ್ಸ್ ಸೇರಿ ಕೆಲ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಿಟ್ಟುಕೊಳ್ಳಲಾಗಿದೆ. ಸೌಮ್ಯ ಲಕ್ಷಣಗಳಿರುವವರನ್ನು ಹೋಂ ಐಶೋಲೇಷನ್ ಮಾಡಲಾಗಿದೆ. ಗಂಭೀರ ಸಮಸ್ಯೆ ಎದುರಿಸು ಮಕ್ಕಳಿಲ್ಲದ ಕಾರಣ ಬೆಡ್‌ಗಳು ಖಾಲಿಯಿವೆ.

    ಅರ್ಧದಷ್ಟು ಮಕ್ಕಳಿಗೆ ಲಸಿಕೆ
    ಕರೊನಾ ಸೋಂಕು ಹೆಚ್ಚಳವಾಗಿರುವುದರ ನಡುವೆ ಈವರೆಗೆ 15 ರಿಂದ 18 ವರ್ಷದೊಳಗಿನ 1,70,344 ಮಕ್ಕಳ ಪೈಕಿ 94,421ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈ ಪೈಕಿ ಬಳ್ಳಾರಿ ತಾಲೂಕಿನಲ್ಲಿ 22,004, ಹರಪನಹಳ್ಳಿಯಲ್ಲಿ 10,674, ಎಚ್‌ಬಿಹಳ್ಳಿಯಲ್ಲಿ 5,983, ಹೊಸಪೇಟೆಯಲ್ಲಿ 15,235, ಹೂವಿನಹಡಗಲಿಯಲ್ಲಿ 5,599, ಕಂಪ್ಲಿಯಲ್ಲಿ 4,205, ಕೊಟ್ಟೂರಲ್ಲಿ 5,052, ಕೂಡ್ಲಿಗಿಯಲ್ಲಿ 5,682, ಕುರುಗೋಡಲ್ಲಿ 3,390, ಸಂಡೂರಲ್ಲಿ 9,006, ಸಿರಗುಪ್ಪ ತಾಲೂಕಿನಲ್ಲಿ 7,591ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಶೇ.55.4 ಲಸಿಕೆ ಹಾಕಲಾಗಿದ್ದು, ಇನ್ನಷ್ಟು ವೇಗಗೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts