More

    ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಿ

    ಬಳ್ಳಾರಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ-ಕೃಷಿಕಾರ್ಮಿಕರ (ಎಐಕೆಕೆಎಂಎಸ್) ಸಂಘಟನೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ರಾಜ್ಯದಲ್ಲಿ 12ಲಕ್ಷಕ್ಕಿಂತ ಹೆಚ್ಚಿನ ಜನರು ಯಾವುದೇ ರೀತಿಯ ಭೂಮಿ ಹೊಂದದೆ ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರುಗಳು ತಮ್ಮ ಜೀವನೋಪಾಯಕ್ಕಾಗಿ ಅಷ್ಟೇ ಅಲ್ಲದೆ, ಸಮಾಜಕ್ಕೆ ಆಹಾರ ಒದಗಿಸುವಂತೆ ಕೆಲಸ ಮಾಡುತ್ತಿದ್ದಾರೆ. ಹಾಳಾಗಿದ್ದ ಮತ್ತು ಕುರುಚಲು ಗಿಡ-ಗಂಟಿ ಬೆಳೆದ ಭೂಮಿಯನ್ನು ಹಸನು ಮಾಡಿ ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿ 60-70 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಈ ಭೂಮಿಯ ಮೇಲೆ ಯಾವುದೇ ಹಕ್ಕು ಪತ್ರ ಹೊಂದಿರದ ಕಾರಣ ಹವಮಾನ ವೈಪರೀತ್ಯಗಳಿಂದ ಬೆಳೆನಷ್ಟಕ್ಕೆ ಸಿಲುಕಿದಾಗ, ಸರ್ಕಾರದಿಂದ ದೊರೆಯಬಹುದಾದ ಯಾವುದೇ ನಷ್ಟ ಪರಿಹಾರವನ್ನು ಪಡೆದುಕೊಳ್ಳಲಾಗುತ್ತಿಲ್ಲ. ಹೀಗಾಗಿ, ಕೂಡಲೇ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಆಗ್ರಹಿಸಿದರು. ಸದಸ್ಯರಾದ ಹುಲುಗಪ್ಪ, ಸಿ.ಮಲ್ಲಪ್ಪ ಕೊರ್ಲಗುಂದಿ, ಕಟ್ಟೆಬಸಪ್ಪ, ಬಸವರಾಜ್ ಬೂದಿಹಾಳ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts