More

    ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಿ: ಗಡಿಯಲ್ಲಿ ಮತ್ತೊಂದು ವಿವಾದದ ಕೂಗು, ವಿಡಿಯೋ ವೈರಲ್

    ಬಳ್ಳಾರಿ: ಬೆಳಗಾವಿ ಹಾಗೂ ಕಾರವಾರ ವಿಚಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತೆ ವಿವಾದದ ಕಿಡಿ ಎಬ್ಬಿಸಿರುವ ಬೆನ್ನಲ್ಲೇ ಬಳ್ಳಾರಿಯನ್ನು ಆಂಧ್ರಪ್ರದೇಶಕ್ಕೆ ಸೇರಿಸಿ ಎಂಬ ವಾತುಗಳು ಆಂಧ್ರದಲ್ಲಿ ಕೇಳಿಬರುತ್ತಿವೆ.

    ಜಿಲ್ಲೆ ವಿಭಜನೆಗೆ ಬಳ್ಳಾರಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಆಂಧ್ರದ ರಾಜಕೀಯ ಮುಖಂಡರು ಬಳ್ಳಾರಿಯನ್ನು ಆಂಧ್ರಕ್ಕೆ ಸೇರ್ಪಡೆ ವಾಡಿ, ಜಿಲ್ಲೆಯಾಗಿ ಮುಂದುವರಿಸಬೇಕು. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆ ವ್ಯಾಪ್ತಿಯ ಆಲೂರು ತಾಲೂಕನ್ನು ಬಳ್ಳಾರಿಗೆ ಸೇರ್ಪಡೆ ವಾಡಬೇಕು.

    ಈ ಮೂಲಕ ಆಲೂರು ತಾಲೂಕು ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಹೊಳಗುಂದ ಪಟ್ಟಣದ ಪ್ರಮುಖ ಮುಖಂಡ ಗಡಿಗಿ ಬಸವರಾಜ ಎಂಬುವವರು ವಾತನಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ.

    ಬ್ರಿಟಿಷರ ಆಡಳಿತದಲ್ಲಿ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಬಳ್ಳಾರಿಯು ಆಂಧ್ರ ಪ್ರದೇಶದಲ್ಲಿತ್ತು. ಬಳಿಕ ಕರ್ನಾಟಕಕ್ಕೆ ಸೇರ್ಪಡೆಯಾಗಿದೆ. ಜಿಲ್ಲಾ ಕೇಂದ್ರ ಕರ್ನೂಲಿಗೆ ದೂರದಲ್ಲಿರುವ ಹೊಳಗುಂದ, ಹಾಲಹರವಿ, ಆಸ್ಪರಿ, ಆಲೂರು ತಾಲೂಕುಗಳನ್ನು ಬಳ್ಳಾರಿಗೆ ಸೇರ್ಪಡೆ ವಾಡಬೇಕು. ಈ ಎಲ್ಲ ತಾಲೂಕುಗಳ ಜನರು ಬಳ್ಳಾರಿಯೊಂದಿಗೆ ನಂಟು ಹೊಂದಿದ್ದಾರೆ. ಬಳ್ಳಾರಿಯನ್ನು ಆಂಧ್ರಪ್ರದೇಶಕ್ಕೆ ಸೇರ್ಪಡೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts