More

    ಸಿಆರ್‌ಪಿಎಫ್​ ಯೋಧನ ವಿರುದ್ಧ ಕೇಸು ದಾಖಲು ಪ್ರಕರಣ: ಸದಲಗಾ ಸಬ್ ಇನ್ಸ್​ಪೆಕ್ಟರ್​ ತಲೆದಂಡ

    ಬೆಳಗಾವಿ: ಸಿಆರ್‌ಪಿಎಫ್​ ಯೋಧ ಸಚಿನ್ ಸಾವಂತ್​ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕರ್ತವ್ಯ ಲೋಪ ಆರೋಪದಡಿ ಸದಲಗಾ ಸಬ್ ಇನ್ಸ್​ಪೆಕ್ಟರ್​ರನ್ನು ಅಮಾನತು ಮಾಡಲಾಗಿದೆ.

    ಯೋಧನ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಪಿಎಸ್ಐ ಅನಿಲ್​ ಕುಮಾರ್ ಸಸ್ಪೆಂಡ್ ಆಗಿರುವುದಾಗಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ತಿಳಿಸಿದರು. ಪ್ರಕರಣ ಕುರಿತು ತನಿಖೆ ಮುಂದುವರೆದಿದೆ ಎಂದರು.

    ಯೋಧ ಸಚಿನ್ ಬಿಡುಗಡೆಯಾದ ಬಳಿಕ ಆತನಿಂದ ಹೇಳಿಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಪಿಎಸ್ಐ ಅನಿಲ್​ಕುಮಾರ್ ಕರ್ತವ್ಯ ಲೋಪ ಕಂಡುಬಂದಿರುವುದರಿಂದ ಅಮಾನತು ಮಾಡಲಾಗಿದೆ ಎಂದು ಸುಹಾಸ್​ ಹೇಳಿದ್ದಾರೆ.

    ಘಟನೆ ನಡೆದ ದಿನವೇ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಮಾರನೇ ದಿನ ಪತ್ರ ಬರೆದು ಸಿಆರ್​ಪಿಎಫ್​ ಅಧಿಕಾರಿಗಳಿಗೆ ರವಾನಿಸಲಾಗಿತ್ತು. ತನಿಖೆ ಮುಂದುವರೆದಿದ್ದು, ಪೇದೆಗಳ ತಪ್ಪು ಮಾಡಿರುವ ಕುರಿತು ವಿಚಾರಣೆ ನಡೆದಿದೆ ಎಂದು ಸುಹಾಸ್ ವಿವರಣೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಬೆಳಗಾವಿ ಯೋಧನ ವಿರುದ್ಧದ ಕೇಸ್ ಹಿಂತೆಗೆದುಕೊಳ್ಳುತ್ತಾ ರಾಜ್ಯ ಪೊಲೀಸ್ ಇಲಾಖೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts