More

    ಉತ್ತಮ ಕಲಾವಿದನಾಗಲು ಸೂಕ್ಷ್ಮ ಸಂವೇದನೆ ಅಗತ್ಯ

    ರಾಯಚೂರು: ಸೂಕ್ಷ್ಮ ಸಂವೇದನೆ ಉಳ್ಳುವಂತಹ ವ್ಯಕ್ತಿ ಮಾತ್ರ ಉತ್ತಮ ಕಲಾವಿದನಾಗಲು ಸಾಧ್ಯವಾಗುತ್ತಿದ್ದು, ಕಲಾವಿದರು ತಮ್ಮ ಕಲೆಯ ಮೂಲಕ ಲೋಕವನ್ನು ಕಾಣುತ್ತಾರೆ ಎಂದು ನಿವೃತ್ತ ಉಪನ್ಯಾಸಕ ಬಿ.ಜಿ.ಹುಲಿ ಹೇಳಿದರು.
    ಸ್ಥಳೀಯ ಕನ್ನಡ ಭವನದಲ್ಲಿ ಕಸಾಪ ತಾಲೂಕು ಘಟಕದಿಂದ ಬುಧವಾರ ಸಂಜೆ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಮತ್ತು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಸಮಾಜದ ಸೂಕ್ಮತೆಗಳನ್ನು ಗುರುತಿಸುವಂತಹ ಪ್ರಜ್ಞಾಂತಿಕೆ ಕಲಾವಿದರಲ್ಲಿರುತ್ತದೆ ಎಂದರು.
    ಸಂಗೀತ, ಕಲೆ, ಸಾಹಿತ್ಯ ಎನ್ನುವುದು ಪ್ರತಿಯೊಬ್ಬರ ಅಂತರಾಳದಲ್ಲಿ ಇರುತ್ತದೆ. ಕೆಲ ಪ್ರಜ್ಞಾವಂತರು ಮಾತ್ರ ಅದನ್ನು ಹೊರ ಹಾಕುವ ಮೂಲಕ ಕಲಾವಿದರು, ಸಾಹಿತಿಗಳಾಗುತ್ತಾರೆ. ನಮ್ಮೊಳಗಿನ ಶಕ್ತಿಯನ್ನು ಗುರುತಿಸಿ ಅದನ್ನು ಹೊರಹಾಕುವುದೇ ಕಲಾವಂತಿಕೆಯಾಗಿದೆ ಎಂದು ತಿಳಿಸಿದರು.
    ಡಯಟ್ ಉಪನ್ಯಾಸಕ ಎಸ್.ಪ್ಯಾಟಪ್ಪ ಮಾತನಾಡಿ, ಹಿಂದೆ ದಲಿತ ಸಾಹಿತ್ಯ ಬಹು ದೊಡ್ಡ ಚರಿತ್ರೆಯನ್ನು ಸೃಷ್ಟಿ ಮಾಡಿತ್ತು. ದಲಿತ ಸಾಹಿತ್ಯ ತನ್ನ ಸೂಕ್ಷ್ಮತೆಗಳಿಂದ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಿದೆ. ದಲಿತರ ನೋವು, ಸಂಕಟ, ಯಾತನೆಗಳನ್ನು ಕವಿಗಳು ಅಕ್ಷರದ ಮೂಲಕ ಹೊರಹಾಕಿ ಸಮಾಜವನ್ನು ಕಟ್ಟುವ ಕ್ರಿಯೆಯಲ್ಲಿ ತೊಡಗಿದ್ದರು ಎಂದರು.
    ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ವರ್ತಮಾನದಲ್ಲಿ ಸಾಹಿತ್ಯ, ಕಲೆಗಳು ಮಂಕಾಗುವ ಸ್ಥಿತಿಗೆ ಬಂದಿವೆ. ಸಾಹಿತ್ಯ, ಕಲೆಗೆ ಉತ್ತಮ ಸ್ಪಂದನೆ ಇಲ್ಲದಂತಾಗಿದೆ. ಈಗ ದಲಿತ ಸಾಹಿತ್ಯವೂ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ ಎಂದು ಹೇಳಿದರು.
    ಈ ಸಂದರ್ಭದಲ್ಲಿ ಚಿತ್ರ ಕಲಾವಿದ ಅಮರೇಶಗೆ ಹನುಮಂತಪ್ಪ ಸಂಜೀವಪ್ಪ ಮ್ಯಾದಾರ್ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ವೀರಹನುಮಾನ, ರಾಮಣ್ಣ ಹವಳೆ, ಆಂಜಿನೇಯ ಜಾಲಿಬೆಂಚಿ, ಮ್ಯಾದಾರ್ ಲಲಿತ ಕಲಾ ಪ್ರತಿಷ್ಟಾನದ ಅಧ್ಯಕ್ಷ ಎಚ್.ಎಚ್.ಮ್ಯಾದಾರ, ಕಸಾಪ ತಾಲೂಕು ಕಾರ್ಯದರ್ಶಿ ರಾವುತರಾವ್ ಬರೂರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts