More

    ಜಮೀನ್ದಾರರ ಏಜೆಂಟರಂತೆ ಅಧಿಕಾರಿಗಳ ವರ್ತನೆ

    ಸಿಂಧನೂರು: ಜವಳಗೇರಾ ನಾಡಗೌಡರ ಅಕ್ರಮ ಜಮೀನನ್ನು ಭೂಹೀನರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ-ಎಐಕೆಕೆಎಸ್ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧದ ಮುಂದೆ ಹಮ್ಮಿಕೊಂಡಿರುವ ಧರಣಿ ಶನಿವಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.


    ನಗರದ ಚನ್ನಮ್ಮ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪಂಜಿನ ಮೆರವಣಿಗೆ ನಡೆಯಿತು. 100 ದಿನಗಳ ಹೋರಾಟಕ್ಕೆ ರಾಜ್ಯ ಸರ್ಕಾರದಿಂದ ಸ್ಪಂದನೆ ಇಲ್ಲದಂತಾಗಿದೆ. ಅಧಿಕಾರಿಗಳು ಜಮೀನ್ದಾರರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಕರ್ತವ್ಯ ಪಾಲನೆ ಮರೆತು ಸರ್ಕಾರದ ಭೂಮಿಯನ್ನು ನೆಲಗಳ್ಳರಿಗೆ ನೀಡಿ ಅವರ ಬೆನ್ನಿಗೆ ನಿಂತಿದ್ದಾರೆ. ಜಿಲ್ಲಾಧಿಕಾರಿ, ತಹಸೀಲ್ದಾರ್ ಮೌನವಹಿಸಿ ನಾಡಗೌಡರ ಬೆಂಬಲಕ್ಕೆ ನಿಂತಿದ್ದರಿಂದ ಭೂಹೀನರ ಹೋರಾಟಕ್ಕೆ ಅಧಿಕಾರಿಗಳೇ ಕಂಟಕರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಜಿಲ್ಲೆಯ ಎಲ್ಲ ಹೆಚ್ಚವರಿ ಭೂ ಪ್ರಕರಣಗಳ ಮರು ವಿಚಾರಣೆಗೆ ಅವಕಾಶ ಕಲ್ಪಿಸಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಸೆಕ್ಷನ್-122(ಎ)ಗೆ ತಿದ್ದುಪಡಿ ತರಬೇಕು. ಜವಳಗೇರಾ ಭೂ ಪ್ರಕರಣವನ್ನು ಶೀಘ್ರ ವಿಚಾರಣೆ ನಡೆಸಬೇಕು. ಸಿಂಧನೂರಿನ ಸರ್ವೇ.ನಂ. 419 ಹಾಗೂ ಸುಲ್ತಾನಪುರದ ಸರ್ವೇ ನಂ. 186 ಸೇರಿ ರಾಜ್ಯದಲ್ಲಿನ ಎಲ್ಲ ಹೆಚ್ಚವರಿ ಜಮೀನನ್ನು ಈಗಾಗಲೇ ಅರ್ಜಿ ಸಲ್ಲಿಸಿರುವ ಭೂರಹಿತರಿಗೆ ವಿತರಿಸಬೇಕೆಂದು ಒತ್ತಾಯಿಸಲಾಯಿತು.


    ಪ್ರಮುಖರಾದ ಜಿ.ಅಮರೇಶ, ಮಲ್ಲಯ್ಯ ಕಟ್ಟಿಮನಿ, ಚಿನ್ನಪ್ಪ ಕೊಟ್ರಿಕಿ, ಡಿ.ಕೆ.ಲಿಂಗಸೂಗೂರು, ಅಜೀಜ್ ಜಾಗೀರದಾರ್, ಸಂತೋಷ ಹಿರೇದಿನ್ನಿ, ವೆಂಕಟೇಶ ಚಿಲ್ಕರಾಗಿ, ಯಲ್ಲಪ್ಪ ಉಟಕನೂರ, ಕೆ.ಗಿರಿಲಿಂಗಸ್ವಾಮಿ, ರಾಮಕೃಷ್ಣ, ರುಕ್ಮಿಣಿ, ಹುಲಿಗೆಮ್ಮ, ಅಂಬಮ್ಮ ಬಸಾಪುರ, ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts