More

    ವಿದ್ಯುತ್ ಕಂಪನಿಗಳ ಖಾಸಗೀಕರಣಕ್ಕೆ ವಿರೋಧ

    ಬೀಳಗಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುವುದು ಸರಿಯಲ್ಲ. ಇದರಿಂದ ನೌಕರರಿಗೆ ಹಾಗೂ ರೈತರಿಗೆ ತೊಂದರೆಯಾಗಲಿದ್ದು ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಬೀಳಗಿ ಹೆಸ್ಕಾಂ ಕಾರ್ಯಾಲಯ ಆವರಣದಲ್ಲಿ ಸೋಮವಾರ ಸಿಬ್ಬಂದಿ ಕೈಗೆ ಕಪ್ಪ್ಪುಬಟ್ಟೆ ಕಟ್ಟಿಕೊಂಡು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು.

    ಹಿರಿಯ ಸಹಾಯಕ ಇಂಜಿನಿಯರ್ ಬಿ.ಎನ್. ಮಠಪತಿ ಮಾತನಾಡಿ, ಕೇಂದ್ರ ಸರ್ಕಾರ ಸರ್ಕಾರ 2003ರ ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ಮಾಡುವುದರಿಂದ ರೈತರ ಪಂಪ್‌ಸೆಟ್‌ಗಳು, ಹಿಂದುಳಿದ ಗ್ರಾಹಕರು, ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರಿನ ವ್ಯವಸ್ಥೆಗೆ ಮಾರಕವಾಗಲಿದೆ. ರಿಯಾಯಾತಿ ದರದಲ್ಲಿ ವಿದ್ಯುತ್ ವಿತರಿಸುವುದು ಹಾಗೂ ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಕಡಿತವಾಗಲಿವೆ. ವಿದ್ಯುತ್ ಪ್ರಸರಣ ನಿಗಮಗಳಲ್ಲಿನ ನೌಕರರಿಗೆ, ಪಿಂಚಣಿದಾರರಿಗೆ ಈ ಕಾಯ್ದೆ ಮಾರಕವಾಗಲಿದೆ ಎಂದು ಆರೋಪಿಸಿದರು.

    ಬೀಳಗಿ ಹೆಸ್ಕಾಂ ಎಇ ಸಂತೋಷ ಹಳ್ಳಿ ಮಾತನಾಡಿ, ಎಇಇ ವಿಜಯಕುಮಾರ ಚವಾಣ್, ಅನಗವಾಡಿ ಶಾಖಾಧಿಕಾರಿ ವಿ.ಎಸ್. ಅಗಸಿಮುಂದಿನಮನಿ, ಬೀಳಗಿ ಜೆಇ ಮಹಾಂತೇಶ ಹೊನ್ನಿಹಾಳ, ಕಾತರಕಿ ಶಾಖಾಧಿಕಾರಿ ಕೃಷ್ಣಾ ನಾಯಕ, ಎಸ್.ಜಿ. ಸಣ್ಣಕ್ಕಿ, ಎ.ಡಿ. ಅತ್ತಾರ, ಬಸವರಾಜ ಕೊನಪ್ಪನ್ನವರ, ಡಿ.ಎ. ಕಿಲ್ಲೆದಾರ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts