More

    18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..

    ನವದೆಹಲಿ: ಐವತ್ತು ವರ್ಷಗಳ ಇತಿಹಾಸ ಇರುವ ಪ್ರತಿಷ್ಠಿತ ಕಂಪನಿ ಒಂದಷ್ಟು ಮಳಿಗೆಗಳನ್ನು ಮುಚ್ಚಬೇಕಾದ, ಉದ್ಯೋಗಿಗಳ ಸಂಖ್ಯೆಯನ್ನು ತಗ್ಗಿಸಬೇಕಾದ ಹಂತದವರೆಗೂ ನಷ್ಟಕ್ಕೆ ಒಳಗಾಗಿ ಎದೆಗುಂದಿದ ಉದ್ಯಮಿಯೊಬ್ಬರು ಗಗನಚುಂಬಿ ಕಟ್ಟವೊಂದರ 18ನೇ ಮಹಡಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಬೆಡ್​ ಬಾತ್ ಆ್ಯಂಡ್ ಬಿಯಾಂಡ್ ಎಂಬ ಪ್ರತಿಷ್ಠಿತ ಕಂಪನಿಯ ಚೀಫ್ ಫೈನಾನ್ಸಿಯಲ್​ ಆಫೀಸರ್​ ಆಗಿದ್ದ ಗಸ್ಟಾವೊ ಅರ್ನಲ್​ (52) ಜೆಂಗಾ ಟವರ್ ಎಂದೇ ಹೆಸರಾಗಿರುವ ನ್ಯೂಯಾರ್ಕ್​ನ ಟ್ರಿಬೆಕಾ ಕಟ್ಟಡದ 18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಈ ಆತ್ಮಹತ್ಯೆ ನಡೆದಿದೆ. ಸಾರ್ವಜನಿಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು.

    2020ರಲ್ಲಿ ಬೆಡ್​​ ಬಾತ್ ಆ್ಯಂಡ್​ ಬಿಯಾಂಡ್ ಕಂಪನಿಯನ್ನು ಸೇರಿದ್ದ ಅರ್ನಲ್, ಇದಕ್ಕೂ ಮೊದಲು ಸೌಂದರ್ಯವರ್ಧಕಗಳ ಕಂಪನಿಯ ಅವಾನ್​ನ ಸಿಎಫ್​ಒ ಆಗಿದ್ದರು. ಅದಕ್ಕೂ ಮೊದಲು ಪ್ರಾಕ್ಟರ್​ ಆ್ಯಂಡ್ ಗ್ಯಾಂಬಲ್​ನಲ್ಲಿ 20 ವರ್ಷಗಳ ಕಾಲ ಉದ್ಯೋಗದಲ್ಲಿದ್ದರು.

    ಬೆಡ್​ ಬಾತ್ ಆ್ಯಂಡ್ ಬಿಯಾಂಡ್ ಗೃಹ ಬಳಕೆ ಉತ್ಪನ್ನಗಳ ಕಂಪನಿಯಾಗಿದ್ದು, ಐವತ್ತು ವರ್ಷಗಳ ಇತಿಹಾಸ ಹೊಂದಿದೆ. ಆದರೆ ಇತ್ತೀಚೆಗೆ ಈ ಕಂಪನಿಯ ನಷ್ಟದ ಹಾದಿಯಲ್ಲಿದ್ದು ಆಗಸ್ಟ್​ 16ರಂದು ಅರ್ನಲ್ ತಮ್ಮ ಕಂಪನಿಯ 55,013 ಶೇರುಗಳನ್ನು ಮಾರಾಟ ಮಾಡಿದ್ದರು. ಮಾತ್ರವಲ್ಲ, ಕಳೆದ ವಾರ 150 ಮಳಿಗೆಗಳನ್ನು ಮುಚ್ಚುವ ಹಾಗೂ ಉದ್ಯೋಗಿಗಳ ಸಂಖ್ಯೆಯನ್ನು ತಗ್ಗಿಸುವ ಬಗ್ಗೆ ಈ ಕಂಪನಿ ಘೋಷಿಸಿತ್ತು. ಅದರ ಬೆನ್ನಿಗೇ ಅರ್ನಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. –ಏಜೆನ್ಸೀಸ್

    ಭದ್ರತೆಗೆ ನಿಯೋಜಿಸಿದ್ದ ಸಿಐಎಸ್​ಎಫ್​ ಯೋಧ ಪಿಸ್ತೂಲ್​-ಗುಂಡುಗಳ ಸಮೇತ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts